ಪುಣ್ಚಪ್ಪಾಡಿ ಶಾಲಾ ವಾರ್ಷಿಕ ಕ್ರೀಡಾಕೂಟ

0

ಸವಣೂರು: ಪುಣ್ಚಪ್ಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಅಷ್ಟನವತಿ ಸಂಭ್ರಮ ಶಾಲಾ 98ನೇ ವರ್ಷದ ವಾರ್ಷಿಕ ದಿನಾಚರಣೆಯ ಸಲುವಾಗಿ ಕ್ರೀಡಾಕೂಟ ನಡೆಯಿತು.

ಕಾರ್ಯಕ್ರಮವನ್ನು ಹಿರಿಯ ವಿದ್ಯಾರ್ಥಿ ಸಂಘದ ಅದ್ಯಕ್ಷರಾದ ಕೃಷ್ಣ ಕುಮಾರ್ ರೈ. ಪಿ.ಡಿ ದೇವಸ್ಯ ಅವರು ಉದ್ಘಾಟಿಸಿ ಕ್ರೀಡಾಳುಗಳಿಗೆ ಶುಭ ಹಾರೈಸಿದರು.
ಸವಣೂರು ಗ್ರಾಮ ಪಂಚಾಯಿತಿ ಸದಸ್ಯ ಗಿರಿಶಂಕರ್ ಸುಲಾಯ ಶುಭಹಾರೈಸಿದರು.


ಸವಣೂರು ಗ್ರಾ. ಪಂ ಉಪಾಧ್ಯಕ್ಷೆ ಜಯಶ್ರೀ ಕುಚ್ಚೆಜಾಲು, ಸದಸ್ಯ ಬಾಬು ಜರಿನಾರು , ಶಾಲಾ ಎಸ್.ಡಿ. ಎಂ.ಸಿ ಅಧ್ಯಕ್ಷ ವಿಜಯ ಕುಚ್ಚೆಜ್ಜಾಲು,ಶಾಲಾ ಮುಖ್ಯಗುರು ರಶ್ಮಿತಾ ನರಿಮೊಗರು, ಅಂಗನವಾಡಿ ಕಾರ್ಯಕರ್ತೆ ಸೇಸಮ್ಮ, ಎಸ್.ಡಿ.ಎಮ್.ಸಿ. ಸದಸ್ಯರು , ಪೋಷಕರು, ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಕ್ರೀಡಾ ಜ್ಯೋತಿಯನ್ನು ಕ್ರೀಡಾ ಪ್ರತಿಜ್ಞೆ ಸ್ವೀಕರಿಸಿದರು. ಶಾಲಾ ಮಕ್ಕಳಿಗೆ, ಪೋಷಕರಿಗೆ, ಹಿರಿಯ ವಿದ್ಯಾಥಿ೯ಗಳಿಗೆ ಊರವರಿಗೆ, ಶಿಕ್ಷಕರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ನಡೆಸಲಾಯಿತು. ಶಿಕ್ಷಕಿ ಶೋಭಾ ಅವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಭಾಗೀರಥಿ ವಂದಿಸಿದರು. ಶಿಕ್ಷಕಿಯರಾದ ಲೀಲಾವತಿ, ಗೌರವ ಶಿಕ್ಷಕ ಭವಾನಿ ಸಹಕರಿಸಿದರು.

LEAVE A REPLY

Please enter your comment!
Please enter your name here