ಪುತ್ತೂರು: ಶ್ರೀ ಬಟ್ಟಿ ವಿನಾಯಕ ದೇವಸ್ಥಾನ ಉಜ್ರುಪಾದೆ ಬಲ್ನಾಡು, ಗ್ರಾಮ ಪಂಚಾಯತ್ ಬಲ್ನಾಡು, ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಕಲ್ಲಾಜೆ ಹಾಗೂ ವಿನಾಯಕ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ರಿ. ಉಜ್ರುಪಾದೆ ಮತ್ತು ಕಂಪಾನಿಯೋ ನೆಮ್ಮದಿ ವೆಲ್ನೆಸ್ ಸೆಂಟರ್ ಕಲ್ಲಾರೆ ಪುತ್ತೂರು ಇವುಗಳ ಜಂಟಿ ಆಶ್ರಯದಲ್ಲಿ ಸುಮಾರು 15 ದಿನಗಳವರೆಗೆ ನಡೆಯಲಿರುವ ಉಚಿತ ಫೂಟ್ಪಲ್ಸ್ ಥೆರಪಿ ಶಿಬಿರ ಇದರ ಉದ್ಘಾಟನಾ ಕಾರ್ಯಕ್ರಮ ಮಾ.9ರಂದು ಬಲ್ನಾಡು – ಉಜ್ರುಪಾದೆ ಬಟ್ಟಿ ವಿನಾಯಕ ದೇವಸ್ಥಾನ ಸಭಾಂಗಣದಲ್ಲಿ ನಡೆಯಿತು.
ಶಿಬಿರದ ಉದ್ಘಾಟನೆಯನ್ನು ಮಂಗಳೂರು ಕರಾವಳಿ ಪ್ರಾಧಿಕಾರ ಇದರ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ನೆರವೇರಿಸಿ, ಶುಭ ಹಾರೈಸಿದರು. ಬಲ್ನಾಡು ಪಂಚಾಯತ್ ಅಧ್ಯಕ್ಷೆ ಪರಮೇಶ್ವರಿ ಭಟ್ ಅಧ್ಯಕ್ಷತೆಯನ್ನು ವಹಿಸಿದರು. ನೆಮ್ಮದಿ ವೆಲ್ನೆಸ್ ಸೆಂಟರ್ ಕಲ್ಲಾರೆ ಇದರ ಮುಖ್ಯಸ್ಥರಾಗಿರುವ ಕೆ. ಪ್ರಭಾಕರ ಸಾಲ್ಯಾನ್ ಶಿಬಿರದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾಗಿ ವಿನಾಯಕ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಗಿರೀಶ್ ಕಂಟ್ರಾಣಿಮೂಲೆ, ಬಲ್ನಾಡು ಪ್ರಾ.ಕೃ.ಪತ್ತಿನ ಸಹಕಾರಿ ಅಧ್ಯಕ್ಷ ಸತೀಶ್ ಗೌಡ ಒಳಗುಡ್ಡೆ, ಕೃಷಿಕ ಸುರೇಶ್ ಬಾಯಾರು, ಬಲ್ನಾಡು ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ಮಾಜಿ ಅಧ್ಯಕ್ಷ ಮಾಧವ ಗೌಡ ಕಾಂತಿಲ, ಬಟ್ಟಿ ವಿನಾಯಕ ದೇವಾಲಯದ ಅರ್ಚಕ ಗೋಪಾಲ ಕೃಷ್ಣ ಹೊಳ್ಳ, ಬಲ್ನಾಡು ಪಂಚಾಯತ್ ಸದಸ್ಯರಾದ ಬಾಲಸುಬ್ರಹ್ಮಣ್ಯ ಕೊಟ್ಯಾನ್ ಹಾಗೂ ಕೃಷ್ಣಪ್ಪ ನಾಯ್ಕ ಮತ್ತು ಗಣೇಶ್ ಗೌಡ ಉಪಸ್ಥಿತರಿದ್ದರು. ಆ ಬಳಿಕ ಶಿಬಿರ ಆರಂಭಗೊಂಡು, ಹಲವಾರು ಮಂದಿ ಶಿಬಿರದಲ್ಲಿ ಭಾಗವಹಿಸಿದರು.