ಪುತ್ತೂರು: ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ಯೋಜನೆಗಳು, ಅಭಿವೃದ್ಧಿ ಆಧಾರಿತ ಚಿಂತನೆಗಳು, ದೇಶದಲ್ಲಿ ಅನುಷ್ಠಾನಗೊಂಡ ರಾಷ್ಟ್ರೀಯ ಚಿಂತನೆಯ ಯೋಜನೆಗಳೇ ಭಾಜಪ ಗೆಲುವಿಗೆ ಮುನ್ನುಡಿ ಎಂದು ಬಿಜೆಪಿ ಪುಣಚ ಮಹಾಶಕ್ತಿ ಕೇಂದ್ರ ಚುನಾವಣಾ ಉಸ್ತುವಾರಿ ಸಹಜ್ ರೈ ಬಳಜ್ಜ ಹೇಳಿದರು.
ಅವರು ಪುಣಚ ಮಹಾಶಕ್ತಿ ಕೇಂದ್ರದ ಕೇಪು ಶಕ್ತಿ ಕೇಂದ್ರದ ಮುಂಬರುವ ಲೋಕಸಭಾ ಚುನಾವಣಾ ಪೂರ್ವಭಾವಿ ಸಿದ್ದತಾ ಸಭೆಯಲ್ಲಿ ಮಾತನಾಡಿದರು.
ಪುಣಚ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಹರಿಪ್ರಸಾದ್ ಯಾದವ್ ಮಾತನಾಡಿ ಬೂತ್ ಮಟ್ಟದಲ್ಲಿ ಪಕ್ಷ ಬಲವರ್ಧನೆ ಹಾಗೂ ಸಂಘಟನೆಯ ಕುರಿತಾಗಿ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ದಯಾನಂದ ಶೆಟ್ಟಿ ಉಜಿರೆಮಾರು,ಬಿಜೆಪಿ ಪ್ರಮುಖರಾದ ರಾಜೀವ್ ಭಂಡಾರಿ, ಕೇಪು ಶಕ್ತಿ ಕೇಂದ್ರದ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ ಸೇರಿದಂತೆ ಸ್ಥಳೀಯ ಸಂಸ್ಥೆ ಜನಪ್ರತಿನಿಧಿಗಳು,ಹಾಗೂ ಬೂತ್ ಮಟ್ಟದ ಕಾರ್ಯಕರ್ತರು ಉಪಸ್ಥಿತರಿದ್ದರು.