ಪುತ್ತೂರು ಶಾಸಕರಿಂದ ಪ್ರಜ್ಞಾವಂತ ಮತದಾರರ ದಾರಿ ತಪ್ಪಿಸುವ ಕೆಲಸ -ಮಾಜಿ ಶಾಸಕ ಸಂಜೀವ ಮಠಂದೂರು ಆರೋಪ

0

ಈ ಸರಕಾರ ದುಡ್ಡಿಲ್ಲ ಎಂದು ಹೇಳುವಾಗ ಪುತ್ತೂರಿನ ಶಾಸಕರು ಕೋಟಿ ಕೋಟಿ ಅನುದಾನ ತಂದಿದ್ದೇನೆಂದು ಹೇಳುತ್ತಾರೆ.
ಬಿಜೆಪಿ ಸರಕಾರ ಇರುವಾಗ ಎನೇನು ಕಾಮಗಾರಿ ಆಗಿದೆಯೊ ಅದನ್ನು ತಾನು ಮಾಡಿದ್ದೆಂದು ಪುತ್ತೂರಿನ ಶಾಸಕರು ಬಿಂಬಿಸುತ್ತಿದ್ದಾರೆ
ಬಿಜೆಪಿ ಇರುವಾಗ ಕೆಲಸಗಳು ಕೋಟಿ ಕೋಟಿ ಮಾತನಾಡುತ್ತಿತ್ತು. ಇವತ್ತು ಪುತ್ತೂರಿನ ಶಾಸಕರು ಕೋಟಿ ಕೋಟಿ ಮಾತನಾಡುತ್ತಾರೆ ಕೆಲಸ ಮಾತನಾಡುವುದಿಲ್ಲ

ಪುತ್ತೂರು: ಕರ್ನಾಟಕ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆದು ಸುಮಾರು 300 ದಿವಸಗಳು ಆಗಿದ್ದು ಈ ಸಮಯದಲ್ಲಿ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ತಾವು ಚುನಾವಣೆ ಸಂದರ್ಭ ಘೋಷಿಸಿದ ಗ್ಯಾರಂಟಿಗಳಿಗೋಸ್ಕರ ಒಂದು ವರ್ಷದ ಅವಧಿಗೆ ಯಾವುದೇ ಅಭಿವೃದ್ಧಿ ಅನುದಾನ 2023-24ರ ಅವಧಿಗೆ ದೊರೆಯುವುದಿಲ್ಲ ಎಂದಿದ್ದಾರೆ. ಆದ್ದರಿಂದ ರಾಜ್ಯದ ಎಲ್ಲಾ ಶಾಸಕರು ಸಹಕಾರ ಮಾಡಬೇಕು ಎಂದು ವಿನಂತಿಸಿರುವ ಈ ಸಂದರ್ಭದಲ್ಲಿ ಬಹಳಷ್ಟು ಕಾಂಗ್ರೇಸ್ ಪಾರ್ಟಿಯ ಶಾಸಕರು ಅಪಸ್ವರ ಎಬ್ಬಿಸಿರುವ ವರದಿಯನ್ನು ಪತ್ರಿಕೆಗಳಲ್ಲಿ ನೋಡಿದ್ದೇವೆ. ಆದರೆ ಪುತ್ತೂರಿನ ಶಾಸಕರು, ಪುತ್ತೂರಿಗೆ ಹಣದ ಹೊಳೆಯೇ ಹರಿದು ಬಂದಿದೆ. ಶಿಲಾನ್ಯಾಸ ಮಾಡಲು ಸಮಯ ಇಲ್ಲದಷ್ಟು ಅನುದಾನ ಬಂದಿದೆ ಎಂದು ಹೇಳುತ್ತಾ ಪುತ್ತೂರಿನ ಪ್ರಜ್ಞಾವಂತ ಮತದಾರರನ್ನು ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ.

ಪುತ್ತೂರಿಗೆ 1474.29 ಕೋಟಿ ಅನುದಾನ ಬಂದಿದೆ ಎಂದು ಬ್ಯಾನರ್ ಬರೆದು ಬಿಜೆಪಿ ಕಾರ್ಯಕರ್ತನ ಮನೆಗೆ ಚೆಂಡೆಯ ಶಬ್ದದೊಂದಿಗೆ ನುಗ್ಗಿ ದಾಂಧಲೆ ಎಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ಹಾಲಿ ಶಾಸಕರು ಪ್ರಕಟಿಸಿರುವ ಬ್ಯಾನರ್‌ನಲ್ಲಿ ಮತ್ತು ಅವರು ಭಾಷಣಗಳಲ್ಲಿ ಘೋಷಿಸುವ ಅನುದಾನಗಳು ಪ್ರಸ್ತುತ ಅವರ ಅವಧಿಯಲ್ಲಿ ಬಿಡುಗಡೆಗೊಂಡ ಅನುದಾನಗಳ ಮೊತ್ತ ಎಷ್ಟು? ಹಿಂದಿನ ಭಾಜಪಾ ಸರಕಾರ ಇದ್ದಾಗ ಬಿಡುಗಡೆಗೊಂಡ ಅನುದಾನಗಳು ಎಷ್ಟು? ಎಂಬುದನ್ನು ಮರೆತು ಎಲ್ಲವೂ ನಮ್ಮದೇ ಸರಕಾರ, ನಾನೇ ಮಾಡಿದೆ ಎನ್ನುವ ರೀತಿಯಲ್ಲಿ ಪ್ರಕಟಿಸಿದ್ದಾರೆ. ಅವರು ಬ್ಯಾನರ್ ನಲ್ಲಿ ಹಾಕಿರುವ ಅನುದಾನ ಯಾವ ವರ್ಷ? ಯಾವ ಸರಕಾರ? ಯಾವ ಶಾಸಕರ ಅವಧಿಯಲ್ಲಿ ಲ್ಲಿ ಬಂತು ಎಂಬುದರ ವಿವರವನ್ನು ದಾಖಲೆ ಸಮೇತವಾಗಿ ಈ ಮೂಲಕ ನೀಡುತ್ತಿದ್ದೇವೆ ಎಂದ ಅವರು ಸುಳ್ಳು ಹೇಳುತ್ತಿರುವ ರೂ.1474.29 ಕೋಟಿಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸೇರಿ ರೂ.1219 ಕೋಟಿ ನಮ್ಮ ಸರಕಾರದ ಯೋಜನೆಗಳು. ಅಲ್ಲದೆ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಪಡದ ನಮ್ಮ ಬಿಜೆಪಿ ಶಾಸಕರಿಂಸ ಸುಳ್ಯ ಕ್ಷೇತ್ರದ ಕೊಯಿಲಾ ಪಶು ವೈದ್ಯಕೀಯ ಕಾಲೇಜು, ನೀರಿನ ಸರಬರಾಜು ಮತ್ತು ಕೊಯಿಲಾ ಸಬ್ ಸ್ಟೇಷನ್ ಸೇರಿ 483 ಕೋಟಿಯ ಯೋಜನೆಯನ್ನು ಸೇರಿಸಿರುತ್ತಾರೆ.ಇದು ನಮ್ಮ ಹಿಂದಿನ ಸರಕಾರದ ಸಾಧನೆ. ಇವೆರಡನ್ನು ಕಾಂಗ್ರೆಸ್ ನ ದಾಸಕರ ಪ್ರಕಟಿಸಿರುವ ಅನುದಾನಗಳಲ್ಲಿ ಕಡಿತಗೊಳಿಸಿದರೆ ಕೇವಲ 104 ಕೋಟಿ ಇವರ ಅವಧಿಯದ್ದು ಕಾಣಬಹುದು. ಆದರೆ ಇದು ಅವರ ಬರೀ ಆಶ್ವಾಸನೆಯೂ ಎಂಬುದನ್ನು ಕಾಲವೇ ಉತ್ತರಿಸಬೇಕು ಎಂದರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ, ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ, ಯುವರಾಜ್ ಪೆರಿಯತ್ತೋಡಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here