





ಪುತ್ತೂರು: ಎ.10ರಿಂದ ಆರಂಭಗೊಳ್ಳಲಿರುವ ಪುತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆಗೆ ಸಂಬಂಧಿಸಿ ಎ.1 ರಂದು ಪುತ್ತೂರು ಜಾತ್ರೆಗೆ ಗೊನೆ ಮುಹೂರ್ತ ಆದ ಬಳಿಕ ಅದೇ ದಿನ ಬೆಳಿಗ್ಗೆ ದೇವಳದ ಹೊರಾಂಗಣದ ರಥ ಮಂದಿರದಲ್ಲಿರುವ ಚಂದ್ರಮಂಡಲ ಮತ್ತು ಹೂವಿನ ರಥವನ್ನು ಹೊರಗೆ ತರುವ ಮುಹೂರ್ತ ನಡೆಯಿತು.


ದೇವಳದ ವಾಸ್ತು ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್, ದೇವಳದ ನಿತ್ಯ ಚಾಕರಿಯರು ಮತ್ತು ಹೂವಿನ ರಥ ಕಟ್ಟುವ ಚಾಕರಿಯವರು ಸೇರಿಕೊಂಡು ರಥವನ್ನು ರಥ ಮಂದಿರದ ಹೊರಗೆ ತಂದು ಸ್ವಚ್ಚಗೊಳಿಸಿದರು.















