ನೆಲ್ಯಾಡಿ: ಇಲ್ಲಿನ ಸಮಾನ ಮನಸ್ಕರ ವೇದಿಕೆ ಆಶ್ರಯದಲ್ಲಿ ಅಂತರ್ ಕಾಲೇಜು ಪುರುಷರ ಆಹ್ವಾನಿತ ತಂಡಗಳ ವಾಲಿಬಾಲ್ ಪಂದ್ಯಾಟ ಏ.15ರಂದು ನೆಲ್ಯಾಡಿ ಬೆಥನಿ ವಿದ್ಯಾಸಂಸ್ಥೆಯ ಮೈದಾನದಲ್ಲಿ ನಡೆಯಿತು.
ಸುಳ್ಯ ಉಪವಲಯ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ಚಂದ್ರ ಶೆಟ್ಟಿ ಅವರು ಪಂದ್ಯಾಟದ ಅಂಗಣ ಉದ್ಘಾಟಿಸಿ ಶುಭಕೋರಿದರು. ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಸಮಾನ ಮನಸ್ಕರ ವೇದಿಕೆಯ ಅಧ್ಯಕ್ಷರಾದ ರೇ. ಫಾ. ವರ್ಗಿಸ್ ಕೈಪನಡ್ಕ ಅವರು ಮಾತನಾಡಿ, ಸರ್ವರಿಗೂ ಸಮಬಾಳು -ಸಮಪಾಲು ಎನ್ನುವ ಘೋಷ ವಾಕ್ಯದೊಂದಿಗೆ ಆರಂಭವಾದ ಸಮಾನ ಮನಸ್ಕರ ವೇದಿಕೆ ಅರೋಗ್ಯ ಶಿಬಿರ, ಮನೆ ಕಟ್ಟಲು ನೆರವು, ಕೊರೋನ ಸಮಯದಲ್ಲಿ 5 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 16.5 ಲಕ್ಷ ರೂ.ಗಳ ಕಿಟ್ ವಿತರಣೆ, ಕ್ರೀಡಾಕೂಟ ಆಯೋಜನೆ ಸಹಿತ ಜನಾಭಿಪ್ರಾಯಕ್ಕೆ ಸ್ಪಂದಿಸುವ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತ ಬಂದಿದೆ ಎಂದರು.
ವೇದಿಕೆಯಲ್ಲಿ ಧರ್ಮಗುರುಗಳಾದ ರೇ. ಫಾ. ಆದರ್ಶ್ ಜೋಸೆಫ್. ಬೆಥನಿ ವಿದ್ಯಾಸಂಸ್ಥೆಯ ಸಂಚಾಲಕರಾದ ರೇ. ಫಾ. ಜೈಸನ್ ಸೈಮನ್, ಸಂತ ಜಾರ್ಜ್ ವಿದ್ಯಾಸಂಸ್ಥೆಯ ಸಂಚಾಲಕರಾದ ನೋಮಿಸ್ ಕುರಿಯಾಕೋಸ್, ನೆಲ್ಯಾಡಿ ಜೆ.ಸಿ.ಐ ಅಧ್ಯಕ್ಷೆ ಸುಚಿತ್ರ ಜೆ.ಬಂಟ್ರಿಯಾಲ್. ಸಮಾನ ಮನಸ್ಕರ ವೇದಿಕೆ ಉಪಾಧ್ಯಕ್ಷರಾದ ಬಾಲಕೃಷ್ಣ ಬಾಣಜಾಲು, ಕೋಶಾಧಿಕಾರಿ ರಂಜನ್ ಕೆ.ಜೆ ಉಪಸ್ಥಿತರಿದ್ದರು.
ಕಾರ್ಯದರ್ಶಿ ಪ್ರಶಾಂತ್ ವರ್ಗಿಸ್ ವರದಿ ವಾಚಿಸಿದರು. ಜಯಾನಂದ ಬಂಟ್ರಿಯಾಲ್ ಸ್ವಾಗತಿಸಿ, ಸುಧೀರ್ ಕುಮಾರ್ ನಿರೂಪಿಸಿ, ವಂದಿಸಿದರು. ಷನುಷ ಪ್ರಾರ್ಥಿಸಿದರು. ಆರಂಭದಲ್ಲಿ ವಿಶೇಷ ಆಕರ್ಷಣೆಯಾಗಿ ಮಹಿಳಾ ತಂಡಗಳಿಂದ ವಾಲಿಬಾಲ್ ಪ್ರದರ್ಶನ ಪಂದ್ಯಾಟ ನಡೆಯಿತು.