ಅಧ್ಯಕ್ಷ: ಪ್ರೊ|ಝೇವಿಯರ್ ಡಿ’ಸೋಜ, ಕಾರ್ಯದರ್ಶಿ: ಬಬಿತಾ ಡಿಕ್ರೂಜ್, ಕೋಶಾಧಿಕಾರಿ: ಜೆ.ಪಿ ರೊಡ್ರಿಗಸ್
ಪುತ್ತೂರು: ಮಾಯಿದೆ ದೇವುಸ್ ಚರ್ಚ್ ವ್ಯಾಪ್ತಿಯ ಕಥೋಲಿಕ್ ಸಭಾ ಪುತ್ತೂರು ಘಟಕದ 2024-25ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ಚರ್ಚ್ ಕ್ಯಾಂಪಸ್ಸಿನಲ್ಲಿ ಜರಗಿತು.
ಅಧ್ಯಕ್ಷರಾಗಿ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ|ಝೇವಿಯರ್ ಡಿ’ಸೋಜ, ಕಾರ್ಯದರ್ಶಿಯಾಗಿ ಕ್ಲಾಸಿ ಕ್ಲಿಕ್ಸ್ ಸ್ಟುಡಿಯೋದ ಮಾಲಕಿ ಬಬಿತಾ ಡಿಕ್ರೂಜ್, ಕೋಶಾಧಿಕಾರಿಯಾಗಿ ಡೆಪ್ಯುಟಿ ತಹಶೀಲ್ದಾರ್ ಹಾಗೂ ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಮಾಜಿ ಉಪಾಧ್ಯಕ್ಷ ಜೆ.ಪಿ ರೊಡ್ರಿಗಸ್ ರವರು ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಸಂತ ಫಿಲೋಮಿನಾ ಕಾಲೇಜಿನ ಉಪನ್ಯಾಸಕಿ ಡಿಂಪಲ್ ಫೆರ್ನಾಂಡೀಸ್ ಹಾರಾಡಿ, ಜೊತೆ ಕಾರ್ಯದರ್ಶಿಯಾಗಿ ಫಿಲೋಮಿನಾ ಕಾಲೇಜಿನ ನಿವೃತ್ತ ಮ್ಯಾನೇಜರ್ ವಿ.ಜೆ ಫೆರ್ನಾಂಡೀಸ್ ಪಾಂಗ್ಲಾಯಿ, ಆಮ್ಚೊ ಸಂದೇಶ್ ಪ್ರತಿನಿಧಿಯಾಗಿ ನಿವೃತ್ತ ಶಿಕ್ಷಕ ಪ್ಯಾಟ್ರಿಕ್ ಲೋಬೊ, ಸ್ತ್ರೀ ಹಿತ ಸಂಚಾಲಕಿಯಾಗಿ ನ್ಯಾಯವಾದಿ ಸಿಲ್ವಿಯಾ ಡಿ’ಸೋಜ ಶಿಂಗಾಣಿ, ರಾಜಕೀಯ ಸಂಚಾಲಕರಾಗಿ ನಗರ ಕಾಂಗ್ರೆಸ್ ಮಾಜಿ ಉಪಾಧ್ಯಕ್ಷ ಲ್ಯಾನ್ಸಿ ಮಸ್ಕರೇನ್ಹಸ್ ಸಾಮೆತ್ತಡ್ಕ, ಸಮುದಾಯ ಅಭಿವೃದ್ಧಿ ಸಂಚಾಲಕರಾಗಿ ಪಾವ್ಲ್ ಹೆರಾಲ್ಡ್ ಮಸ್ಕರೇನ್ಹಸ್ ಕಲ್ಲಿಮಾರು, ಯುವ ಹಿತ ಸಂಚಾಲಕರಾಗಿ ಫಿಲೋಮಿನಾ ಕಾಲೇಜಿನ ಆಡಳಿತ ಸಿಬ್ಬಂದಿ ಅರುಣ್ ರೆಬೆಲ್ಲೋ ದರ್ಬೆರವರು ಆಯ್ಕೆಯಾಗಿದ್ದಾರೆ.
ಕಥೋಲಿಕ್ ಸಭಾ ಪುತ್ತೂರು ಘಟಕದ ಆತ್ಮೀಕ ನಿರ್ದೇಶಕ ಮಾಯಿದೆ ದೇವುಸ್ ಚರ್ಚ್ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್ ರವರ ಮಾರ್ಗದರ್ಶನದಲ್ಲಿ, ಚುನಾವಣಾಧಿಕಾರಿ ಕಥೋಲಿಕ್ ಸಭಾ ಕೇಂದ್ರೀಯ ಪ್ರತಿನಿಧಿ ನವೀನ್ ಬ್ರ್ಯಾಗ್ಸ್ ಹಾಗೂ ಲವೀನಾ ಪಿಂಟೋರವರು ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.
ನೂತನ ಅಧ್ಯಕ್ಷರ ಪರಿಚಯ…
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಪ್ರೊ|ಝೇವಿಯರ್ ಡಿ’ಸೋಜರವರು ಕೂರ್ನಡ್ಕ ನಿವಾಸಿಯಾಗಿದ್ದು, ಪ್ರಸ್ತುತ ಹಿರಿಯ ನಾಗರಿಕರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾಗಿರುತ್ತಾರೆ. ದಿ ಕೆಟೆನಿಯನ್ ಅಸೋಸಿಯೇಷನ್ ಪುತ್ತೂರು ಸರ್ಕಲ್ ಇದರ ಸ್ಥಾಪಕಾಧ್ಯಕ್ಷರಾಗಿ, ರೋಟರಿ ಕ್ಲಬ್ ಪುತ್ತೂರು ಇದರ ಮಾಜಿ ಅಧ್ಯಕ್ಷರಾಗಿ, ಮಾಯಿದೆ ದೇವುಸ್ ಚರ್ಚ್ ನ ಫೈನಾನ್ಸ್ ಸಮಿತಿಯ ನಿಕಟಪೂರ್ವ ಸದಸ್ಯರಾಗಿ, ಪುತ್ತೂರು ಬೀರಮಲೆ ಅಭಿವೃದ್ಧಿ ಯೋಜನಾ ಸಮಿತಿಯ ಸದಸ್ಯರಾಗಿ ಕರ್ತವ್ಯ ನಿರ್ವಹಿಸಿದ್ದರು.