ಬೊಳ್ವಾರಿನಲ್ಲಿ 1-10ನೇ ತರಗತಿವರೆಗೆ “ವಿದ್ಯಾರ್ಥಿ ಮಿತ್ರ ಟ್ಯೂಶನ್ ತರಗತಿ” ಉದ್ಘಾಟನೆ

0

-ಕೇಂದ್ರವು ವಿಸ್ತೃತ ರೂಪ ಪಡೆದು ಸ್ಪರ್ಧಾತ್ಮಕ ಪರೀಕ್ಷೆಗಳ ಪೂರಕವಾದ ಕೇಂದ್ರವಾಗಿ ಬೆಳೆಯಲಿ-ಮರಿಕೆ ಈಶ್ವರ ಭಟ್

-ಮಕ್ಕಳಲ್ಲಿ ಕಲಿಯುವ ಛಲ, ಉತ್ಸಾಹ, ಪ್ರಾಮಾಣಿಕತೆ ಇದ್ರೆ ಬದುಕಿನಲ್ಲಿ ಉನ್ನತಿ ಕಾಣಲು ಸಾಧ್ಯ-ಭಾಸ್ಕರ್ ಶೆಟ್ಟಿ

-ಮಕ್ಕಳು ಕಲಿತು ಮುಂದೆ ಬರಬೇಕು, ಸಂಸ್ಥೆಗೆ ಹೆಸರನ್ನು ತರಬೇಕೆನ್ನುವ ಉದ್ಧೇಶವಿರಬೇಕು-ವಸಂತ್ ಕಾಮತ್

-ಮಕ್ಕಳಿಗೆ ಟ್ಯೂಶನ್ ಸೆಂಟರ್ ತೆರೆಯಬೇಕು ಎನ್ನುವ ಕನಸಿತ್ತು-ಸುರೇಶ್ ಎಂ

ಪುತ್ತೂರು: ವಿದ್ಯಾರ್ಥಿಗಳ ಶೈಕ್ಷಣಿಕ ಶಿಕ್ಷಣದ ನಿರ್ಮಾಣಕ್ಕೆ ಭದ್ರ ಬುನಾದಿ ಎಂಬ ಧ್ಯೇಯ ವಾಕ್ಯದೊಂದಿಗೆ ‘ವಿದ್ಯಾರ್ಥಿ ಮಿತ್ರ ಟ್ಯೂಶನ್ ತರಗತಿ’ಯು ಬೊಳ್ವಾರಿನಲ್ಲಿ ಆರಂಭಗೊಂಡಿದ್ದು, ಇದರ ಉದ್ಘಾಟನೆ ಕಾರ್ಯಕ್ರಮ ಏ.29 ರಂದು ಜರಗಿತು.

ಕೇಂದ್ರವು ವಿಸ್ತೃತ ರೂಪ ಪಡೆದು ಸ್ಪರ್ಧಾತ್ಮಕ ಪರೀಕ್ಷೆಗಳ ಪೂರಕವಾದ ಕೇಂದ್ರವಾಗಿ ಬೆಳೆಯಲಿ-ಮರಿಕೆ ಈಶ್ವರ ಭಟ್:

ಕೊಂಬೆಟ್ಟು ಜ್ಯೂನಿಯರ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಮರಿಕೆ ಈಶ್ವರ ಭಟ್ ರವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ಗಮನ ಕೇಂದ್ರೀಕೃತಗೊಳಿಸಬೇಕು. ಶಾಲಾ-ಕಾಲೇಜುಗಳಲ್ಲಿ ಸೀಮಿತ ಅವಧಿಯಲ್ಲಿ ಮಕ್ಕಳಿಗೆ ಬೋಧಿಸಲಾಗುತ್ತದೆ. ಇಂತಹ ಸಮಯದಲ್ಲಿ ಹೆಚ್ಚಿನ ಕಲಿಕೆಗೆ ಇಂತಹ ಟ್ಯೂಶನ್ ಕೇಂದ್ರಗಳು ಪೂರಕವಾಗಿ ಪರಿಣಮಿಸುತ್ತದೆ. ಮುಂದಿನ ದಿನಗಳಲ್ಲಿ ಈ ಟ್ಯೂಶನ್ ಕೇಂದ್ರವು ವಿಸ್ತೃತ ರೂಪ ಪಡೆಯುತ್ತಾ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರಕವಾದ ಕೇಂದ್ರವಾಗಿ ಬೆಳೆಯಲಿ ಎಂದು ಹೇಳಿ ಶುಭ ಹಾರೈಸಿದರು.

ಮಕ್ಕಳಲ್ಲಿ ಕಲಿಯುವ ಛಲ, ಉತ್ಸಾಹ, ಪ್ರಾಮಾಣಿಕತೆ ಇದ್ರೆ ಬದುಕಿನಲ್ಲಿ ಉನ್ನತಿ ಕಾಣಲು ಸಾಧ್ಯ-ಭಾಸ್ಕರ್ ಶೆಟ್ಟಿ:

ಸಾಲ್ಮರ ಮೌಂಟನ್ ವ್ಯೂ ಶಾಲೆಯ ನಿವೃತ್ತ ಶಿಕ್ಷಕ ಭಾಸ್ಕರ್ ಶೆಟ್ಟಿ ಮಾತನಾಡಿ, ಶಾಲೆಯಲ್ಲಿ ಸೀಮಿತ ಅವಧಿಯೊಳಗೆ ಮಕ್ಕಳಿಗೆ ಪಾಠವನ್ನು ಕಲಿಸಲಾಗುತ್ತದೆ. ಮಕ್ಕಳಲ್ಲಿ ಕಲಿಯುವ ಛಲ, ಉತ್ಸಾಹ, ಪ್ರಾಮಾಣಿಕತೆ ಇದ್ರೆ ಬದುಕಿನಲ್ಲಿ ಉನ್ನತಿ ಕಾಣಲು ಸಾಧ್ಯವಾಗುತ್ತದೆ. ಆರ್ಥಿಕ ಸಂಪಾದನೆಯೊಂದಿಗೆ ಉತ್ತಮ ಸಂಬಂಧ, ಗೌರವಿಸುವ ಗುಣ ಹಣದಿಂದ ಸಿಗುವುದಿಲ್ಲ. ಕಲೆ ಅನ್ನುವುದು ತಿಳುವಳಿಕೆಯ ಮಾಧ್ಯಮವಾಗಿದ್ದು ವಿದ್ಯಾರ್ಥಿಗಳ ಆಸಕ್ತಿಗನುಗುಣವಾಗಿ ಅವರ ಕಲಿಕೆಯನ್ನು ಪ್ರೋತ್ಸಾಹಿಸಿ ಅವರನ್ನು ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಿಸುವಂತಾಗಬೇಕು ಎಂದು ಹೇಳಿ ಶುಭ ಹಾರೈಸಿದರು.

ಮಕ್ಕಳು ಕಲಿತು ಮುಂದೆ ಬರಬೇಕು, ಸಂಸ್ಥೆಗೆ ಹೆಸರನ್ನು ತರಬೇಕೆನ್ನುವ ಉದ್ಧೇಶವಿರಬೇಕು-ವಸಂತ್ ಕಾಮತ್:

ಬೊಳುವಾರು ಸೂರ್ಯಪ್ರಭಾ ಕಟ್ಟಡದ ಮಾಲಕ ವಸಂತ್ ಕಾಮತ್ ಮಾತನಾಡಿ, ಪಠ್ಯ ಅಥವಾ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳಿಗೆ ಆಸಕ್ತಿ ಇಲ್ಲದಿದ್ದಾಗ ಆವಾಗ ಹೆತ್ತವರು ಮಕ್ಕಳ ಅಭಿರುಚಿಯ ಬಗ್ಗೆ ಹೆಚ್ಚಿನ ಆಸಕ್ತಿ ತೋರುವಂತಾಗಬೇಕು. ಮಕ್ಕಳು ಕಲಿತು ಮುಂದೆ ಬರಬೇಕು, ತಾನು ಕಲಿತ ಸಂಸ್ಥೆಗೆ ಹೆಸರನ್ನು ತರಬೇಕು ಎನ್ನುವುದು ಉದ್ಧೇಶವಾಗಿರಬೇಕು. ಪೋಷಕರು ತಮ್ಮ ಮಕ್ಕಳನ್ನು ಇಂತಹುದೇ ಸಂಸ್ಥೆಗೆ ಸೇರಿಸಬೇಕು, ಅಲ್ಲಿ ಸೀಟು ಸಿಗಬಹುದಾ ಎಂಬ ಪರಿಸ್ಥಿತಿ ಅಲ್ಲಿ ನಿರ್ಮಾಣವಾದಾಗ ಸಂಸ್ಥೆಯು ಬೆಳೆಯುತ್ತದೆ ಎಂದರು.

ಮಕ್ಕಳಿಗೆ ಟ್ಯೂಶನ್ ಸೆಂಟರ್ ತೆರೆಯಬೇಕು ಎನ್ನುವ ಕನಸಿತ್ತು-ಸುರೇಶ್ ಎಂ:

ಕರಾಟೆ ಶಿಕ್ಷಕ ಸುರೇಶ್ ಎಂ ಮಾತನಾಡಿ, ಈಗಾಗಲೇ ಈ ಸಂಸ್ಥೆಯಲ್ಲಿ ಬೇಬಿ ಡೇ ಕೇರ್ ಅನ್ನು ಆರಂಭಿಸಿದ್ದೇವೆ ಇದರ ಜೊತೆಗೆ ಮಕ್ಕಳಿಗೆ ಟ್ಯೂಶನ್ ಸೆಂಟರ್ ತೆರೆಯಬೇಕು ಎನ್ನುವ ಕನಸೂ ಇತ್ತು. ಶಿಕ್ಷಕಿ ಶೃತಿ ನಾಯಕ್ ರವರು ವಿಶೇಷ ಆಸಕ್ತಿ ವಹಿಸಿ ನಮ್ಮ ಕನಸನ್ನು ನನಸು ಮಾಡಿರುತ್ತಾರೆ ಎಂದರು.

ಸಂಸ್ಥೆಯ ಮಾಲಕಿ ಶೃತಿ ನಾಯಕ್ ರವರ ಮಾವ, ಭಾಗವತರಾದ ಎಸ್.ಎಲ್ ಗೋವಿಂದ ನಾಯಕ್ ಪಾಲೆಚ್ಚಾರು, ಅತ್ತೆ ಸೀಮಾ ನಾಯಕ್, ಪತಿ ದುರ್ಗಾಪ್ರಸಾದ್, ಟ್ಯೂಶನ್ ಗೆ ಆಗಮಿಸಿದ ಮಕ್ಕಳು, ಮಕ್ಕಳ ಹೆತ್ತವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಮಾಲಕಿ ಶೃತಿ ನಾಯಕ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ ವಂದಿಸಿದರು.

ಸಣ್ಣ ಕನಸು ಇದೀಗ ಸಾಕಾರಗೊಂಡಿದೆ..
ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ರಾಜ್ಯ ಹಾಗೂ ಸೆಂಟ್ರಲ್(ಸಿ.ಬಿ.ಎಸ್.ಇ) ಬೋರ್ಡ್ ಸಿಲೆಬಸ್ ಅನ್ನು ವಿದ್ಯಾರ್ಥಿಗಳಿಗೆ  ಸಂಸ್ಥೆಯಿಂದ ಟ್ಯೂಶನ್ ತರಗತಿ ನೀಡಲಾಗುತ್ತದೆ. ಅನುಭವಿ ತರಬೇತುದಾರರಿಂದ ತರಬೇತಿ, ವಿದ್ಯಾರ್ಥಿಗಳ ಮನಸ್ಥಿತಿಯೊಂದಿಗೆ ಅರ್ಥ ಮಾಡಿಕೊಳ್ಳುವುದು, ಸುಧಾರಿತ ಶ್ರೇಣಿಯೊಂದಿಗೆ ಕಲಿಕೆ ಇವುಗಳನ್ನು ಸಂಸ್ಥೆಯು ಒಳಗೊಂಡಿದೆ. ನಾವು ಕಂಡಂತಹ ಸಣ್ಣ ಕನಸು ಇದೀಗ ಸಾಕಾರಗೊಂಡಿದೆ. ಕರಾಟೆ ಶಿಕ್ಷಕ ಸುರೇಶ್ ರವರು ನಮ್ಮ ಕನಸಿಗೆ ಹೆಚ್ಚಿನ ಪ್ರೋತ್ಸಾಹ ನೀಡಿರುತ್ತಾರೆ. ಸಂಸ್ಥೆಯಲ್ಲಿ ನಾನು ಸೇರಿದಂತೆ ಮಮತಾ ಅನ್ನುವವರು ಮಕ್ಕಳಿಗೆ ಟ್ಯೂಶನ್ ನೀಡುತ್ತಿದ್ದೇವೆ. ಈಗಾಗಲೇ 14 ಮಂದಿ ವಿದ್ಯಾರ್ಥಿಗಳು ಹೆಸರನ್ನು ನೋಂದಾಯಿಸಿದ್ದಾರೆ.

-ಶೃತಿ ನಾಯಕ್, ಟ್ಯೂಶನ್ ಟೀಚರ್,
ವಿದ್ಯಾರ್ಥಿ ಮಿತ್ರ ಟ್ಯೂಶನ್ ತರಗತಿ ಕೇಂದ್ರ

ವಿಶೇಷತೆಗಳು..

-ಬೆಳಿಗ್ಗೆ 9 ರಿಂದ ಸಂಜೆ 4ರ ವರೆಗೆ ಮಕ್ಕಳ ವಿರಾಮದ ಮನೆ(ಬೇಬಿ ಡೇ ಕೇರ್)

-ಸಂಜೆ 4.30 ರಿಂದ 6.30ರ ವರೆಗೆ ಟ್ಯೂಶನ್ ತರಗತಿ ನಡೆಯಲಿದ

-ಸಂಸ್ಥೆಯನ್ನು ಸೇರಬಯಸುವವರು 9986551415, 9449334582 ನಂಬರಿಗೆ ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here