ಪುತ್ತೂರು: ನ್ಯಾಯವಾದಿ ಕವನ್ ನಾೖಕ್ ದರ್ಬೆರವರ ಮಾಲಕತ್ವದ ನೂತನ ಸುಸಜ್ಜಿತ ಕಟ್ಟಡ ಧರ್ಮಪಾಲ ಆರ್ಕೇಡ್ ಈಗಾಗಲೇ ದರ್ಬೆ ಜಂಕ್ಷನಿನಲ್ಲಿ ಲೋಕಾರ್ಪಣೆಗೊಂಡಿದೆ.
ನ್ಯಾಯವಾದಿ ಕವನ್ ನಾೖಕ್ ರವರ ತಂದೆ ದಿ.ಧರ್ಮಪಾಲ ನಾೖಕ್ ರವರ ಹೆಸರಿನಲ್ಲಿ ಈ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡಿದೆ. ಈ ಹಿಂದೆ ಇದೇ ಜಾಗದಲ್ಲಿನ ಹಳೆಯ ಕಟ್ಟಡದಲ್ಲಿ ಹೊಟೇಲ್ ವಿಕ್ರಂ ಸಹಿತ ಹಲವು ಅಂಗಡಿಗಳು ವ್ಯವಹಾರನಿರತರಾಗಿದ್ದವು. ಇದೀಗ ಇದೇ ಜಾಗದಲ್ಲಿ ಕಟ್ಟಡವು ಹೊಸ ರೂಪ ಪಡೆದು ಲೋಕಾರ್ಪಣೆಗೊಂಡಿದೆ. ಅರ್ಚಕ ರಾಜೇಶ್ ಭಟ್ ರವರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ ಶುಭ ಹಾರೈಸಿದರು.
ಆರ್ಕೇಡ್ ಮಾಲಕ ಕವನ್ ನಾೖಕ್ ದಂಪತಿ ಅತಿಥಿಗಳನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಆರ್ಕೇಡ್ ಮಾಲಕ ಕವನ್ ನಾೖಕ್ ರವರ ಪತ್ನಿ ಶ್ವೇತ ಕವನ್ ನಾೖಕ್ , ತಾಯಿ ಸುಮತಿ ಡಿ.ನಾೖಕ್ ಸಹಿತ ಹಲವರು ಉಪಸ್ಥಿತರಿದ್ದರು.
ಮೇ.10 ಸಂಜೀವ ಶೆಟ್ಟಿಯವರ ವಸ್ತ್ರ ಮಳಿಗೆ ಶುಭಾರಂಭ.
ವಸ್ತ್ರಪ್ರಿಯರಿಗೆ ಸಿಹಿ ಸುದ್ದಿ. ಪುತ್ತೂರಿನ ಪ್ರಖ್ಯಾತ ಜವುಳಿ ಮಳಿಗೆ ಎಂ. ಸಂಜೀವ ಶೆಟ್ಟಿರವರ ವಿವಿಧ ವಸ್ತ್ರ ವಿನ್ಯಾಸಗಳ ಮಳಿಗೆ ಪುತ್ತೂರಿನಲ್ಲಿ ಮನೆಮಾತಾಗಿದ್ದು, ಈಗ ಇದರ ಇನ್ನೊಂದು ಮಳಿಗೆಯು ಈ ನೂತನ ಆರ್ಕೇಡ್ ನಲ್ಲಿ ಮೇ.10 ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಆರ್ಕೇಡ್ ಮಾಲಕ ಕವನ್ ನಾೖಕ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.