




ಕಾಂಚನ: ಬಜತ್ತೂರು ಗ್ರಾಮದ ಕಾಂಚನ ಬೂತ್ ಮಟ್ಟದ ಬಿಜೆಪಿ ಕಾರ್ಯಕರ್ತರ ಸಭೆ ಪುಷ್ಪ ಕೇಶವ ಪುಯಿಲ ಇವರ ಸ್ವ ಗೃಹದಲ್ಲಿ ಶಕ್ತಿ ಕೇಂದ್ರದ ಅಧ್ಯಕ್ಷ ವಸಂತ ನೇತೃತ್ವದಲ್ಲಿ ನಡೆಯಿತು.




ಸಭೆಯಲ್ಲಿ ಬಿಜೆಪಿ ಉಪ್ಪಿನಂಗಡಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮುಕುಂದ ಬಜತ್ತೂರು ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದರು. ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯ ಮಾಧವ,ಗಂಗಾಧರ ಕೆ.ಎಸ್, ಸ್ಮಿತಾ ಧನಂಜಯ ಮತ್ತು ಹಿರಿಯ ಕಾರ್ಯಕರ್ತರಾದ ಹರಿಶ್ಚಂದ್ರ ಮುದ್ಯ ಉಪಸ್ಥಿತರಿದ್ದರು. ಮೋಹನಚಂದ್ರ ತೋಟದ ಮನೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ಸಚಿನ್ ಮುದ್ಯ ವಂದಿಸಿದರು.ಸುಮಾರು 200 ಹಿರಿಯ ಕಿರಿಯ ಮಿಕ್ಕಿ ಕಾರ್ಯಕರ್ತರು ಭಾಗವಹಿಸಿದ್ದರು.ಎಲ್ಲಾರಿಗೂ ಭೋಜನ ವ್ಯವಸ್ಥೆ ಮಾಡಲಾಗಿತ್ತು.















