ಪಾಂಗ್ಲಾಯಿ ಬೆಥನಿ ಹಿರಿಯ ಪ್ರಾಥಮಿಕ ಶಾಲೆಯ ರಕ್ಷಕ – ಶಿಕ್ಷಕ ಸಂಘದ ಮಹಾಸಭೆ

0

ಪುತ್ತೂರು : ಪಾಂಗ್ಲಾಯಿ ಬೆಥನಿ ಆಂಗ್ಲ ಮಾಧ್ಯಮ ಶಾಲೆಯ 2024-25ನೇ ಸಾಲಿನ ರಕ್ಷಕ -ಶಿಕ್ಷಕ ಸಂಘದ ಮಹಾಸಭೆಯು ಜು.06 ರಂದು ಪುತ್ತೂರು ಬೆಥನಿ ಶಿಕ್ಷಣ ಸಂಸ್ಥೆಗಳ ಸಂಚಾಲಕಿ ಸಿಸ್ಟರ್ ಪ್ರಶಾಂತಿರವರ ನೇತೃತ್ವದಲ್ಲಿ ನಡೆಯಿತು.


ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪೆರ್ನೆ ಶ್ರೀ ರಾಮಚಂದ್ರ ಪದವಿ ಪೂರ್ವ ಕಾಲೇಜು ಪೆರ್ನೆಯ ಪ್ರಾಂಶುಪಾಲ ಶೇಖರ್ ರೈ ಕೆರವರು ಮಾತನಾಡಿ ಮಕ್ಕಳ ದೈಹಿಕ, ಮಾನಸಿಕ, ಬೌದ್ಧಿಕ, ಸರ್ವಾಂಗೀಣ ಪ್ರಗತಿಯಾಗಿ ಮನುಷ್ಯ ಸುಗಮದ ಹಾದಿಯಲ್ಲಿ ನಡೆಯಬೇಕು ಎಂದರು. ಮಕ್ಕಳ ಸುರಕ್ಷಾ ಸಮಿತಿಯ ಅಧ್ಯಕ್ಷ ಅಕ್ಷತಾರವರು ಮಾತನಾಡಿ ಮಕ್ಕಳ ಆರೋಗ್ಯದ ಕಡೆಗೆ ಗಮನಹರಿಸುವುದು ಪೋಷಕರ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು. ಶಾಲಾ ಮುಖ್ಯ ಶಿಕ್ಷಕಿಯವ ಭಗಿನಿ ಸೆಲಿನ್ ಪೇತ್ರರವರು ವಾರ್ಷಿಕ ಯೋಜನೆಯನ್ನು ಹಾಗೂ ಶಾಲಾ ನಿಯಮವನ್ನು ತಿಳಿಸಿದರು. ರಕ್ಷಕ ಶಿಕ್ಷಕ ಸಂಘದ ನೂತನ ಪದಾಧಿಕಾರಿಗಳ ಆಯ್ಕೆಯ ಪ್ರಕ್ರಿಯೆಯು ನಡೆಯಿತು.

ನೂತನ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾಗಿ ಇಸ್ಮಾಯಿಲ್ ಶಾಫಿ, ಮಕ್ಕಳ ಸುರಕ್ಷಾ ಸಮಿತಿಯ ಅಧ್ಯಕ್ಷರಾಗಿ ಪ್ರತಿಕ್ಷ ಪೈ, ಉಪಾಧ್ಯಕ್ಷರಾಗಿ ಪುಷ್ಪರಾಜ್ ಗಂಭೀರ್ ಆಯ್ಕೆಯಾದರು. ಕಾರ್ಯಕ್ರಮವನ್ನು ಸಹಶಿಕ್ಷಕಿಯವರಾದ, ಗ್ರೀಷ್ಮ ರವರು ಸ್ವಾಗತಿಸಿ, ಶರಲ್ ರವರು ವಂದಿಸಿ, ವೀಣಾ ಹಾಗೂ ಅನ್ವಿತಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here