ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ವಿದ್ಯಾಲಯ(ಸಿಬಿಎಸ್ಇ) ಪುತ್ತೂರು ಹಾಗೂ ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಇದರ ಸಹಯೋಗದಲ್ಲಿ ಜಿಲ್ಲಾಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ ನಗರದ ಸಾಮೆತ್ತಡ್ಕ ಸುದಾನ ಸ್ಪೋರ್ಟ್ಸ್ ಕ್ಲಬ್ನಲ್ಲಿ ಸೋಮವಾರ ಜರುಗಿತು.
ಶ್ರೀ ರಾಮಕೃಷ್ಣ ಪ್ರೌಢ ಶಾಲೆ ಸಂಚಾಲಕ ಹೇಮನಾಥ ಶೆಟ್ಟಿ ಕಾವು ಕ್ರೀಡಾಕೂಟಕ್ಕೆ ಚಾಲನೆ ನೀಡಿ, ಕ್ರೀಡಾಕೂಟವು ಮಕ್ಕಳ ದೈಹಿಕ, ಮಾನಸಿಕ ಬೆಳವಣಿಗೆಗೆ ಕ್ರೀಡೆ ಸಹಕಾರಿಯಾಗಿದೆ ಎಂದರು.
ಮುಖ್ಯ ಅತಿಥಿ ವಿದ್ಯಾಭಾರತಿ ಕರ್ನಾಟಕದ ಜಿಲ್ಲಾಧ್ಯಕ್ಷ ಲೋಕಯ್ಯ ಡಿ. ಮಾತನಾಡಿ, ಆತ್ಮಸ್ಥೈರ್ಯ ಮತ್ತು ಧೈರ್ಯವನ್ನು ಬೆಳೆಸಲು ಕ್ರೀಡೆ ಸಹಕಾರಿ. ಕ್ರೀಡೆಯ ಮೂಲಕ ಉತ್ತಮ ಆರೋಗ್ಯ ಹೊಂದಬಹುದಾಗಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಸುರೇಶ್ ಶೆಟ್ಟಿ ಕೆ., ಗುರಿ ತುಲುಪುವ ಕೆಲಸದಲ್ಲಿ ಒಮ್ಮೆ ಸೋತರೆ ಆದರಿಂದ ಹಿಂದೆ ಹೆಜ್ಜೆ ಇಡದೆ ಮತ್ತೆ ಮತ್ತೆ ಪ್ರಯತ್ನಿಸಿ ತಮ್ಮ ಗುರಿಯನ್ನು ಮನು ಬಾಕರ್ ಅವರು ಸಾಧಿಸಿದರು. ಒಲಿಂಪಿಕ್ಸ್ನಲ್ಲಿ ಕಂಚು ಗೆಲ್ಲುವ ಮೂಲಕ ಅವರು ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ. ಸೋಲನ್ನು ಗೆಲುವಿನ ಮೆಟ್ಟಿಲಾಗಿ ಸ್ವೀಕರಿಸಿ ಸಾಧನೆ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಪುತ್ತೂರು ಸುದಾನ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಸಚ್ಚಿದಾನಂದ, ಜಿಲ್ಲಾ ಖೇಲ್ ಖೂದ್ ಪ್ರಮುಖ ಕರುಣಾಕರ, ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಪ್ರಾಂಶುಪಾಲ ಸತ್ಯಜಿತ್ ಉಪಾಧ್ಯಾಯ, ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಂಶುಪಾಲೆ ಸುಚಿತ್ರಾ ಪ್ರಭು, ಅಂಬಿಕಾ ವಿದ್ಯಾಲಯ(ಸಿಬಿಎಸ್ಇ) ಪ್ರಾಂಶುಪಾಲೆ ಮಾಲತಿ ಡಿ. ಉಪಸ್ಥಿತರಿದ್ದರು.
ಅಂಬಿಕ ವಿದ್ಯಾಲಯ ಸಿಬಿಎಸ್ಇ ವಿದ್ಯಾರ್ಥಿಗಳಾದ ಕುಮಾರಿ ವೈಷ್ಣವಿ ಕುಮಾರಿ, ರಕ್ಷಾ ಕುಮಾರಿ, ನಿಧಿ ಪ್ರಾರ್ಥಿಸಿದರು. ಅಂಬಿಕಾ ವಿದ್ಯಾಲಯ(ಸಿಬಿಎಸ್ಇ) ಪ್ರಾಂಶುಪಾಲೆ ಮಾಲತಿ ಡಿ. ಸ್ವಾಗತಿಸಿದರು. ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಪ್ರಾಂಶುಪಾಲ ಸತ್ಯಜಿತ್ ಉಪಾಧ್ಯಾಯ ಧನ್ಯವಾದ ಸಮರ್ಪಿಸಿದರು. ವಿಜ್ಞಾನ ಶಿಕ್ಷಕಿ ಕಾರ್ಯಕ್ರಮ ಗೌರಿ ನಿರೂಪಿಸಿದರು.
ಪಂದ್ಯಾಟಗಳನ್ನು ಅಭಯ್ ಹಾಗೂ ಭವಿತ್ ಅವರ ಸಹಯೋಗದಲ್ಲಿ ಅಂಬಿಕಾ ದೈಹಿಕ ಶಿಕ್ಷಣ ಶಿಕ್ಷಕರಾದ ಸಂತೋಷ್ ಕುಮಾರ್ ಮತ್ತು ಸುಚಿತ್ರ ಇವರ ಸಹಯೋಗದಲ್ಲಿ ವಿದ್ಯಾಭಾರತಿಯ ಜಿಲ್ಲಾ ಮಟ್ಟದ ಖೇಲ್ ಪ್ರಮುಖರಾದ ಪುರುಷೋತ್ತಮ ಅವರ ನಿರ್ದೇಶನದಲ್ಲಿ ನಡೆಸಲಾಯಿತು. ಬಾಲ ವರ್ಗ, ಕಿಶೋರ ವರ್ಗ ಹಾಗೂ ತರುಣ ವರ್ಗಗಳಲ್ಲಿ ಬಾಲಕ ಹಾಗೂ ಬಾಲಕಿಯರಿಗೆ ಶಟಲ್ ಪಂದ್ಯಾಟ ನಡೆಸಲಾಯಿತು.
ಸ್ಪರ್ಧೆಯ ಫಲಿತಾಂಶ:
ಬಾಲವರ್ಗ
ಬಾಲಕರು:
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ – ಪ್ರಥಮ
ಶಾರದಾ ವಿದ್ಯಾಲಯ ಮಂಗಳೂರು – ದ್ವಿತೀಯ
ಬಾಲಕಿಯರು:
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಪುತ್ತೂರು- ಪ್ರಥಮ
ಅಂಬಿಕಾ ವಿದ್ಯಾಲಯ ಸಿ ಬಿ ಎಸ್ ಇ ಬಪ್ಪಳಿಗೆ ಪುತ್ತೂರು- ದ್ವಿತೀಯ
ಕಿಶೋರ ವರ್ಗ
ಕಿಶೋರರು
ಶಾರದಾ ವಿದ್ಯಾಲಯ ಮಂಗಳೂರು – ಪ್ರಥಮ
ಅಂಬಿಕಾ ವಿದ್ಯಾಲಯ (ಸಿಬಿಎಸ್ಇ) ಬಪ್ಪಳಿಗೆ ಪುತ್ತೂರು – ದ್ವಿತೀಯ
ಕಿಶೋರಿಯರು:
ಶಾರದಾ ವಿದ್ಯಾಲಯ ಮಂಗಳೂರು – ಪ್ರಥಮ
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಪುತ್ತೂರು – ದ್ವಿತೀಯ
ತರುಣ ವರ್ಗ
ತರುಣರು:
ವಿವೇಕಾನಂದ ಪದವಿ ಪೂರ್ವ ವಿದ್ಯಾಲಯ ಪುತ್ತೂರು – ಪ್ರಥಮ
ಶಕ್ತಿ ಪದವಿಪೂರ್ವ ವಿದ್ಯಾಲಯ ಮಂಗಳೂರು – ದ್ವಿತೀಯ
ತರುಣಿಯರು:
ವಿವೇಕಾನಂದ ಪದವಿ ಪೂರ್ವ ವಿದ್ಯಾಲಯ ಪುತ್ತೂರು – ಪ್ರಥಮ
ಅಂಬಿಕಾ ಪದವಿ ಪೂರ್ವ ವಿದ್ಯಾಲಯ ನೆಲ್ಲಿಕಟ್ಟೆ, ಪುತ್ತೂರು – ದ್ವಿತೀಯ