ನಿವ್ವಳ ಲಾಭ ರೂ. 249409.07, ಶೇ.8 ಡಿವಿಡೆಂಡ್ ಘೋಷಣೆ
ಪುತ್ತೂರು: ಕುಂಬ್ರ ಮೂರ್ತೆದಾರರ ಸೇವಾ ಸಹಕಾರಿ ಸಂಘದ 2023-24 ನೇ ಸಾಲಿನ ವಾರ್ಷಿಕ ಮಹಾಸಭೆಯು ಆ.27ರಂದು ಕುಂಬ್ರ ಅಕ್ಷಯ ಆರ್ಕೇಡ್‌ನ ಮಿನಿ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಆರ್.ಸಿ ನಾರಾಯಣರವರ ಅಧ್ಯಕ್ಷತೆಯಲ್ಲಿ ಜರಗಿತು. ಸಂಘದ 2023-24ನೇ ಸಾಲಿನ ವರದಿಯನ್ನು ಸಂಘದ ಸಿಬ್ಬಂದಿ ದಿನೇಶ್.ಕೆ ವಾಚಿಸಿದರು. 2023-24ನೇ ಸಾಲಿನ ಲೆಕ್ಕಪರಿಶೋಧನ ಲೆಕ್ಕ ಪತ್ರವನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಕಾಂತ ಶಾಂತಿವನರವರು ಮಂಡಿಸಿ ಸಭೆಯಲ್ಲಿ ಮಂಜೂರಾತಿ ಪಡೆದರು. ವರದಿ ಸಾಲಿನಲ್ಲಿ ಸಂಘವು 249409.07 ರೂಪಾಯಿ ಲಾಭ ಗಳಿಸಿದ್ದು ಸದಸ್ಯರಿಗೆ ಶೇ.8 ಡಿವಿಡೆಂಡ್ ಕೊಡುವುದಾಗಿ ಅಧ್ಯಕ್ಷರು ಘೋಷಣೆ ಮಾಡಿದರು.
ಅತಿಥಿಗಳಾದ ದ.ಕ ಜಿಲ್ಲಾ ಮೂರ್ತೆದಾರರ ಸಹಕಾರಿ ಮಹಾಮಂಡಲದ ನಿರ್ದೇಶಕರಾದ ವಿಶ್ವನಾಥ.ಬಿ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಮಾತನಾಡಿ, ತಾಲೂಕಿನಲ್ಲಿ ಐದು ಮೂರ್ತೆದಾರರ ಸಂಘಗಳು ಕಾರ್ಯಚರಣೆ ಮಾಡುತ್ತಿದ್ದು ಸಾಲ ಸೌಲಭ್ಯ ನೀಡುತ್ತಾ ಸಮಾಜದ ಯುವಕ ಯುವತಿಯರಿಗೆ ನೌಕರನ್ನಾಗಿ ಮಾಡುವ ಮೂಲಕ ಅವರ ಕುಟುಂಬದ ಅಭಿವೃದ್ಧಿಗೆ ತಮ್ಮ ಕೊಡುಗೆ ಅಪಾರ ಇನ್ನೂ ಹೆಚ್ಚು ಜನರಿಗೆ ನೌಕರಿ ನೀಡುವಂತೆ ಆಗಲಿ ಎಂದು ಹೇಳಿದ ಅವರು ಸಂಸ್ಥೆಯ ಕಛೇರಿ ಆದುನಿಕರಣ ಹೊಂದಿ ರಾಷ್ಟ್ರಿಕೃತ ಬ್ಯಾಂಕ್‌ಗೆ ಸಮಾವಾಗಿ ನಿರ್ಮಿಸಿದ್ದಾರೆ ಮುಂದೆ ಶಾಖೆಗಳನ್ನು ಪ್ರತಿ ಗ್ರಾಮದಲ್ಲಿ ತೆರೆಯುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಹಿರಿಯ ಮೂರ್ತೆದಾರರಾದ ಕೆಯ್ಯೂರು ಗ್ರಾಮದ ಚೆನ್ನಪ್ಪ ಪೂಜಾರಿ ಬಾಕ್ತಿಮಾರ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂಘದ ನಿರ್ದೇಶಕರಾದ ವಸಂತ ಪೂಜಾರಿ ಬಂಬಿಲ, ಸನ್ಮಾನ ಪತ್ರವನ್ನು ಓದಿದರು. ಮೂರ್ತೆದಾರರ ಮಕ್ಕಳಿಗೆ ರೂ. 10500/- ವಿದ್ಯಾರ್ಥಿ ಪ್ರೋತ್ಸಾಹಧನ ನೀಡಲಾಯಿತು. ಸಂಘದ ಅಧ್ಯಕ್ಷರಾದ ಆರ್.ಸಿ ನಾರಾಯಣ್‌ರವರು ಮಾತನಾಡಿ, ಸಂಘದ ಸ್ವಂತ ಜಾಗದಲ್ಲಿ ಕಟ್ಟಡ ನಿರ್ಮಾಸಿ ಅಲ್ಲಿ ಪ್ರದಾನ ಕಛೇರಿಯನ್ನು ತೆರೆಯುವುದು, ಮುಂದಿನ ಯೋಜನೆಯಾಗಿ 2 ಶಾಖೆಯನ್ನು ತೆರೆಯುವುದೆಂದು ತಿಳಿಸಿದರು. ಇದಕ್ಕೆ ಎಲ್ಲಾ ಸದಸ್ಯರ ಸಹಕಾರ ನೀಡಬೇಕೆಂದು ಕರೆ ನೀಡಿದರು. ನಮ್ಮ ಸಂಘಕ್ಕೆ 2023-24ನೇ ಸಾಲಿನ ದ.ಕ ಜಿಲ್ಲಾ ಸಹಕಾರಿ ಬ್ಯಾಂಕ್‌ನಿಂದ ಕೊಡುವ ಸಂಸ್ಥೆಯು ಸಾಧಿಸಿದ ಸರ್ವತೋಮುಖ ಅಭಿವೃದ್ಧಿಗಾಗಿ ಸಾಧನಾ ಪ್ರಶಸ್ತಿ 2ನೇ ಬಾರಿಗೆ ನೀಡಿರುತ್ತಾರೆ. ಪ್ರಶಸ್ತಿ ನೀಡಿದಂತಹ ಸಂಸ್ಥೆಯ ಅಧ್ಯಕ್ಷರಿಗೆ ಮತ್ತು ನಿರ್ದೇಶಕರಿಗೆ ಅಭಿನಂದನೆಯನ್ನು ಸಲ್ಲಿಸಿದರು. ಸಂಘದ ಉಪಾಧ್ಯಕ್ಷರಾದ ಧನಂಜಯ ಪೂಜಾರಿಯವರು ಮೃತಪಟ್ಟ ಮೂರ್ತೆದಾರರ ಸದಸ್ಯರಿಗೆ ಶ್ರದ್ದಾಂಜಲಿ ಸಲ್ಲಿಸಿದರು. ನಿರ್ದೇಶಕರಾದ ನಾರಾಯಣ ಪೂಜಾರಿ ಕುರಿಕ್ಕಾರ ಬಜೆಟ್ ವಾಚಿಸಿದರು. ತ್ರಿವೇಣಿ ಪಲ್ಲತ್ತಾರು ತಿಳುವಳಿಕೆ ಪತ್ರವನ್ನು ಓದಿದರು.
ವೇದಿಕೆಯಲ್ಲಿ ನಿರ್ದೇಶಕರಾದ ವಿಜಯ ಪೂಜಾರಿ ಆನಡ್ಕ, ರಾಮಣ್ಣ ಪೂಜಾರಿ ಕರ್ನೂರು ಚೆನ್ನಪ್ಪ ಪೂಜಾರಿ ಉಪಸ್ಥಿತರಿದ್ದರು. ಸ್ಮೃತಿ ಪತ್ತಾರು ಪ್ರಾರ್ಥಿಸಿದರು. ಸಿಬ್ಬಂದಿಗಳಾದ ದಿನೇಶ್ ಕಂಪ ,ಪ್ರಮೀತ.ಎಸ್ ವಿದ್ಯಾರ್ಥಿ ವೇತನದ ಪಟ್ಟಿಯನ್ನು ವಾಚಿಸಿದರು. ನಿಕಟಪೂರ್ವ ಅಧ್ಯಕ್ಷರಾದ ನಿತೀಶ್ ಕುಮಾರ್ ಶಾಂತಿವನ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸುಷ್ಮಾ ಕುಮಾರಿ ಕೋಡಿಬೈಲು ವಂದಿಸಿದರು. ಸುದೇಂದ್ರನ್.ಪಿ ಸಹಕರಿಸಿದರು.