ಬಣ್ಣ ಬಣ್ಣದ ಪೋಷಾಕಿನಲ್ಲಿ ಮಿಂಚಿದ ರಾಧಾಕೃಷ್ಣರು
ಪುತ್ತೂರು: ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ಸಂಸ್ಕಾರಯುತ ಶಿಕ್ಷಣವನ್ನು ನೀಡುತ್ತಾ ಪುಟಾಣಿಗಳಲ್ಲಿ ದೇಶಭಕ್ತಿ ಮೂಡಿಸುವ ಕಾರ್ಯಕ್ರಮ ಮಾಡುತ್ತಿರುವ ಕುಂತೂರು ಶ್ರೀ ಶಾರದಾ ಶಿಶು ಮಂದಿರದ ಕಾರ್ಯ ಶ್ಲಾಘನೀಯ. ಭಗವಾನ್ ಶ್ರೀ ಕೃಷ್ಣ ಕತ್ತಲಲ್ಲಿ ಬೆಳಕನ್ನು ತೋರಿಸುತ್ತಾನೆ ಎಂದು ಪುತ್ತೂರು ಶ್ರೀರಾಮಕೃಷ್ಣ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ರೂಪಕಲಾ ಕೆ. ಹೇಳಿದರು.
ಕುಂತೂರು ಶ್ರೀ ಶಾರದಾ ಶಿಶುಮಂದಿರದಲ್ಲಿ ಆಯೋಜಿಸಿದ್ದ ಎರಡನೇ ವರ್ಷದ ಶ್ರೀ ಕೃಷ್ಣ ಲೋಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ಶ್ರೀ ಕೃಷ್ಣನ ಧ್ಯಾನದಿಂದ ಅಂಧಕಾರವನ್ನು ದೂರ ಮಾಡಲು ಸಾಧ್ಯ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಬಣ್ಣ ಬಣ್ಣದ ಪೋಷಾಕಿನೊಂದಿಗೆ ರಾಧಾಕೃಷ್ಣರಾಗಿ ಶಿಶುಮಂದಿರದ ಪುಟಾಣಿಗಳು ಮಿಂಚಿದರು.
ಶ್ರೀ ಶಾರದಾ ಶಿಶು ಮಂದಿರದಿಂದ ಶ್ರೀ ಶಾರದಾ ಭಜನಾ ಮಂದಿರದವರೆಗೆ ಕುಣಿತ ಭಜನಾ ತಂಡದೊಂದಿಗೆ ಶೋಭಾ ಯಾತ್ರೆ ತೆರಳಿತು. ಶಿಶುಮಂದಿರದಲ್ಲಿ ಮಕ್ಕಳಿಂದ ಮೊಸರು ಕುಡಿಕೆ ಉತ್ಸವ ನಡೆಸಲಾಯಿತು.
ಶ್ರೀ ಬಾಲಕೃಷ್ಣನ ತೊಟ್ಟಿಲ ಸಂಭ್ರಮದ ನಂತರ ಶಿಶುಮಂದಿರದ ಪುಟಾಣಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶಿಶುಮಂದಿರದ ಅಧ್ಯಕ್ಷೆ ಮಧುಶ್ರೀ ಅಗತ್ತಾಡಿ ಸ್ವಾಗತಿಸಿದರು. ಕೋಶಾಧಿಕಾರಿ ಯಮುನಾ ಎಸ್ ರೈ ವಂದಿಸಿದರು. ಸಮಿತಿಯ ಕಾರ್ಯದರ್ಶಿ ಚೇತನ ಕಾರ್ಯಕ್ರಮ ನಿರೂಪಿಸಿದರು.