ಉಪ್ಪಿನಂಗಡಿ: ಇಲ್ಲಿನ ಪದಾಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ತಾಂಬೂಲ ಪ್ರಶ್ನೆಯಲ್ಲಿ ಕಂಡು ಬಂದಂತೆ ವಿವಿಧ ಪರಿಹಾರ ಕಾರ್ಯಗಳು ಹಾಗೂ ಬ್ರಹ್ಮ ರಕ್ಷಸ್ಸಿನ ಪ್ರತಿಷ್ಠೆಯನ್ನು ನೆರೆವೇರಿಸಲಾಯಿತು.
ಸೆ.4ರ ಬೆಳಗ್ಗಿನಿಂದ ಶ್ರೀ ದೇವಾಲಯದಲ್ಲಿ ವೇ.ಮೂ. ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ದೈವಜ್ಞರಾದ ಕೃಷ್ಣಮೂರ್ತಿ ಪುದ್ಕೋಳಿಯವರ ಉಪಸ್ಥಿತಿಯಲ್ಲಿ ಮಹಾಮೃತ್ಯುಂಜಯ ಹೋಮ, ಐಕಮತ್ಯ ಹೋಮ, ಮಹಾಗಣಪತಿ ಹೋಮ, ಆಶ್ಲೇಷ ಬಲಿ ಪೂಜೆ, ಶ್ರೀ ದೇವರಿಗೆ ಮಹಾಪೂಜೆ, ಮಹಾ ಸುದರ್ಶನ ಹೋಮ, ದುರ್ಗಾ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದು, ದ್ವಾದಶಮೂರ್ತಿ ಬ್ರಾಹ್ಮಣ ಆರಾಧನೆ ಬ್ರಹ್ಮರಕ್ಷಸ್ಸಿನ ಪ್ರತಿಷ್ಠಾ ಕಲಶಾಭಿಷೇಕ ನಡೆಯಿತು.
ಈ ಸಂದರ್ಭ ಶ್ರೀ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷರಾದ ಉದಯಶಂಕರ ಭಟ್ ನಡುಸಾರು, ಉಪಾಧ್ಯಕ್ಷೆ ಶಾಂಭವಿ ರೈ, ಕೋಶಾಧಿಕಾರಿ ಹರೀಶ್ವರ ಮೊಗ್ರಾಲ್ ಕುವೆಚ್ಚಾರು, ಸದಸ್ಯರಾದ ಶಂಕರನಾರಾಯಣ ಭಟ್ ಬೊಳ್ಳಾವು, ಸುರೇಶ್ ಅತ್ರೆಮಜಲು, ಸದಾನಂದ ಶೆಟ್ಟಿ ಕಿಂಡೋವು, ಲೋಕೇಶ ಬೆತ್ತೋಡಿ, ವಿಜಯ ಶಿಲ್ಪಿ ಕುಕ್ಕುಜೆ, ಜತ್ತಪ್ಪ ನಾಯ್ಕ ಬೊಳ್ಳಾವು, ರಾಮಣ್ಣ ಶೆಟ್ಟಿ ಬೊಳ್ಳಾವು, ನವೀನ್ ಕುಮಾರ್ ಕಲ್ಯಾಟೆ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಜಗದೀಶ ರಾವ್ ಮಣಿಕ್ಕಳ, ಉಪಾಧ್ಯಕ್ಷರಾದ ಪ್ರತಾಪ್ ಪೆರಿಯಡ್ಕ, ಚಂದಪ್ಪ ಮೂಲ್ಯ, ಡಾ. ರಾಜಾರಾಮ್ ಕೆ.ಬಿ., ಪ್ರಧಾನ ಕಾರ್ಯದರ್ಶಿ ಎನ್. ಜಯಗೋವಿಂದ ಶರ್ಮ, ಜೊತೆ ಕಾರ್ಯದರ್ಶಿ ಸುರೇಶ್ ಗೌಂಡತ್ತಿಗೆ, ಲಕ್ಷ್ಮಣ ಗೌಡ ನೆಡ್ಚಿಲ್, ಕೋಶಾಧಿಕಾರಿ ರಾಮಚಂದ್ರ ಮಣಿಯಾಣಿ, ಕೇಶವ ಗೌಡ ರಂಗಾಜೆ, ಪ್ರಮುಖರಾದ ಸುನೀಲ್ ಕುಮಾರ್ ದಡ್ಡು, ರಾಧಾಕೃಷ್ಣ ಭಟ್ ಬೊಳ್ಳಾವು, ಪ್ರಸನ್ನ ಪೆರಿಯಡ್ಕ, ಚೇತನ್ ಮೊಗ್ರಾಲ್ ಕುವೆಚ್ಚಾರು, ಗಿರೀಶ್ ಆರ್ತಿಲ, ಅವನೀಶ್ ಪಿ., ಜಯಂತ ಪೊರೋಳಿ ಮತ್ತಿತರರು ಉಪಸ್ಥಿತರಿದ್ದರು.
ಮುಂಬರುವ ಡಿ.18ರಿಂದ ಡಿ.23ರವರೆಗೆ ಶ್ರೀ ದೇವಾಲಯದಲ್ಲಿ ಬ್ರಹ್ಮಕಲಶೋತ್ಸವವು ನಡೆಯಲಿದ್ದು, ಅದಕ್ಕೆ ಈಗಾಗಲೇ ಪೂರ್ವ ತಯಾರಿಗಳು ನಡೆಯುತ್ತಿವೆ.