ಪುತ್ತೂರು:ಬಲ್ನಾಡು ವಲಯದ ಒಕ್ಕೂಟದ ಪದಾಧಿಕಾರಿಗಳ ತರಬೇತಿ ಕಾರ್ಯಕ್ರಮಕ್ಕೆ ಕುಂಜೂರುಪಂಜ ದೇವಸ್ಯ ಶ್ರೀ ಮಂಜುನಾಥ ಸಭಾಭವನದಲ್ಲಿ ತಾಲೂಕಿನ ಯೋಜನಾಧಿಕಾರಿ,ಒಕ್ಕೂಟದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ವಲಯಾಧ್ಯಕ್ಷ ಸತೀಶ್ ಗೌಡ ದೀಪ ಬೆಳಗಿಸುವುದರೊಂದಿಗೆ ಚಾಲನೆ ನೀಡಿದರು.
ತಾಲೂಕಿನ ಯೋಜನಾಧಿಕಾರಿ ತರಬೇತಿ ಪ್ರಾರಂಭಿಸಿ ಒಕ್ಕೂಟದ ನಿರ್ವಹನೆ,ಮಾಸಿಕ ವರದಿಗಳ ಪರಿಶೀಲನೆ ಪದಾಧಿಕಾರಿಗಳ ಜವಾಬ್ದಾರಿ ಬಗ್ಗೆ ಮಾಹಿತಿ ನೀಡಿದರು.ಬಡ್ಡಿ ಲೆಕ್ಕಾಚಾರ ವಿದಾನ,ಮರುಪಾವತಿ ಚೀಟಿ, ದಾಖಲಾತಿ ನಿರ್ವಹಣೆ,ಲೆಕ್ಕಪರಿಶೋಧನೆ ಕುರಿತಾಗಿ ತಾಲೂಕಿನ ವಿಚಕ್ಷಣಾಧಿಕಾರಿ ಲತಾ ಮಾಹಿತಿ ನೀಡಿದರು.
ನಂತರದ ತರಬೇತಿಯಲ್ಲಿ ಮಾನ್ಯ ಜಿಲ್ಲಾ ನಿರ್ದೇಶಕ ಮಾತನಾಡಿ ನಮ್ಮ ತಂದೆ ತಾಯಿ ಯವರು ಜೀವನ ನಡೆಸುತ್ತಿದ್ದ ರೀತಿ ಬದುಕಿನಲ್ಲಿ ಎದುರಿಸುತ್ತಿದ್ದ ಕಷ್ಟದ ದಿನಗಳಲ್ಲಿ ಒಂದು ಹೊತ್ತಿನ ಊಟ,ಒಳ್ಳೆಯ ಬಟ್ಟೆ ಪಡೆದುಕೊಳ್ಳಲು ಅಸಾಧ್ಯವಾದ ದಿನಗಳ ಸಂದರ್ಭದಲ್ಲಿ ಪೂಜ್ಯ ಖಾವಂದರರು ಹುಟ್ಟು ಹಾಕಿದ ಗ್ರಾಮಾಭಿವೃದ್ಧಿ ಯೋಜನೆಯು ನಮ್ಮ ಪಾಲಿಗೆ ಬೆಳಕಾಗಿ ಬಂದು ಉತ್ತಮ ಬದುಕು ಕಟ್ಟಿಕೊಳ್ಳಲು ಸಹಕಾರಿಯಾದ ದಿನಗಳ ಕುರಿತಾಗಿ ಅರ್ಥ ಗರ್ಭಿತವಾಗಿ ತಿಳಿಸುತ್ತಾ,ಯೋಜನೆಯ ಕಾರ್ಯಕ್ರಮಗಳ ಪಾರದರ್ಶಕತೆಗೆ ಕೈಗನ್ನಡಿಯಾಗಿ ಇರುವ ಎಲ್ಲಾ ದಾಖಲಾತಿಗಳನ್ನು ಕೂಲಂಕುಷವಾಗಿ ಪರಿಶೀಲಿಸುವಂತೆ ಮಾರ್ಗದರ್ಶನ ನೀಡಿದರು. ಒಕ್ಕೂಟದ ಸದಸ್ಯರಿಗೆ ಸೂಕ್ತ ಮಾರ್ಗದರ್ಶನ ಮತ್ತು ವಲಯದ ಎಲ್ಲಾ ಪದಾಧಿಕಾರಿಗಳು ವಲಯದ ಸಾಧನೆಗೆ ಸಹಕಾರ ನೀಡುವಂತೆ ಸಲಹೆ ನೀಡಿದರು.
ಬೆಳಿಯೂರು ಕಟ್ಟೆ ಸೇವಾ ಪ್ರತಿನಿಧಿ ಇಗ್ನೇಶಿಯಸ್ ಡಿಸೋಜಾ ಸ್ವಾಗತಿಸಿದರು, ಕುಂಜೂರುಪಂಜ ಸೇವಾಪ್ರತಿನಿಧಿ ಆಶಾಲತಾ ವಲಯದ 2023/24 ನೇ ಸಾಲಿನ ಸಾಧನ ವರದಿಯನ್ನು ವಾಚಿಸಿದರು. ದೊಡ್ಡಡ್ಕ ಒಕ್ಕೂಟ ಸೇವಾ ಪ್ರತಿನಿಧಿ ಪ್ರಮೀಳಾ ಕುಮಾರಿ ವಂದಿಸಿದರು. ವಲಯ ಮೇಲ್ವಿಚಾರಕ ಪ್ರಶಾಂತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ತರಬೇತಿಯಲ್ಲಿ 11 ಒಕ್ಕೂಟದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಮತ್ತು ಸೇವಾಪ್ರತಿನಿಧಿಯವರು ಭಾಗವಹಿಸಿದ್ದರು.