ಚೆನ್ನಾವರ : ಈದ್ ಮಿಲಾದ್ ಸಂಭ್ರಮ

0

ಸವಣೂರು: ಪಾಲ್ತಾಡಿ ಗ್ರಾಮದ ಚೆನ್ನಾವರ ಮುಹಿಯುದ್ದೀನ್ ಜುಮಾ ಮಸ್ಜಿದ್, ಚೆನಯ ಸಿರಾಜುಲ್‌ ಉಲೂಂ ಸೆಕಂಡರಿ ಮದ್ರಸ ಇದರ ವತಿಯಿಂದ ಚೆನ್ನಾವರ ಜುಮ್ಮಾ ಮಸೀದಿ ಆವರಣದಲ್ಲಿ ಈದ್ ಮಿಲಾದ್ ನಡೆಯಿತು. 

ಅಬ್ದುಲ್ ಲತೀಫ್ ಬಾಲವಿ ತಂಞಲ್ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಉಸ್ಮಾನ್ ಹಾಜಿ ಚೆನ್ನಾವರ,ಮುಹಿಯುದ್ದೀನ್ ಜುಮಾ ಮಸ್ಜಿದ್ ಅಧ್ಯಕ್ಷ ಶಾಫಿ ಚೆನ್ನಾವರ,ಹೆಲ್ಪಿಂಗ್ ಹಾಂಡ್ಸ್ ಚೆನ್ನಾವರ ಕಾರ್ಯನಿರ್ವಾಹಕ ಅಬ್ದುಲ್ ಶಮೀರ್  ಹಾಜಿ ಕುಂಡಡ್ಕ, ಹಂಝ ಚೆನ್ನಾವರ ,ಅಝೀಝ್ ಮೂಕ್ಲಡ್ಕ,ಪ್ರಮುಖರಾದ ಜಮಾಲುದ್ದೀನ್ ಸಿ.ವೈ,ಹನೀಫ್ ಇಂದ್ರಾಜೆ, ಅಬ್ದುಲ್ ರಹಿಮಾನ್ ಪಾಲ್ತಾಡು ಮೊದಲಾದವರಿದ್ದರು.
ಹೆಲ್ಪಿಂಗ್ ಹಾಂಡ್ಸ್ ಚೆನ್ನಾವರ ಇದರ ವತಿಯಿಂದ ಬಹುಮಾನ ವಿತರಿಸಲಾಯಿತು. ಅಬ್ಬಾಸ್ ಮುಸ್ಲಿಯಾರ್ ಸ್ವಾಗತಿಸಿ, ಶರೀಫ್ ಹಿಮಾಮಿ ವಂದಿಸಿದರು.

LEAVE A REPLY

Please enter your comment!
Please enter your name here