ಪುತ್ತೂರು: ಕಳೆದ ಕೆಲವು ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಪಾಲಿಗೆ ಹೊಸ ಭಾಷ್ಯವನ್ನೇ ಬರೆದು ಇತಿಹಾಸ ಸೃಷ್ಟಿಸಿದ ಪುತ್ತೂರಿನ ಪ್ರಗತಿ ಸ್ಟಡೀ ಸೆಂಟರ್ ಹೊಸ ಯೋಜನೆಯೊಂದನ್ನು ಮೊದಲ ಬಾರಿಗೆ ಪುತ್ತೂರಿನಲ್ಲಿ ಪರಿಚಯಿಸಲು ಮುಂದಾಗಿದೆ.
ದೇಶದ ವಿಮಾನಯಾನ ಶಿಕ್ಷಣ ಕೇತ್ರದಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರಿನ ಸ್ಕೈಬರ್ಡ್ ಎವಿಯೇಶನ್ ಸಂಸ್ಥೆಯ ಸಹಯೋಗದೊಂದಿಗೆ ಶ್ರೀ ಪ್ರಗತಿ ವಿಸ್ತಾರ ಕಾಲೇಜ್ ಫಾರ್ ಎವಿಯೇಶನ್ ಆ್ಯಂಡ್ ಮ್ಯಾನೇಜ್ ಮೆಂಟ್ ಪುತ್ತೂರಿನಲ್ಲಿ ಆರಂಭವಾಗಲಿದೆ. ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿದ್ದ ಮೂಡಬಿದ್ರೆ ಮೂಲದ ಸುದರ್ಶನ್ ಎಂ ಮತ್ತು ಪ್ರಗತಿ ಸ್ಟಡೀ ಸೆಂಟರ್ ನ ಸ್ಥಾಪಕ ಅಧ್ಯಕ್ಷ ಮತ್ತು ಸಂಚಾಲಕ ಪಿ.ವಿ. ಗೋಕುಲ್ ನಾಥ್ ಶ್ರೀ ಪ್ರಗತಿ ಎಜ್ಯುಕೇಶನ್ ಫೌಂಡೇಶನ್ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದ್ದು, ಈ ಸಂಸ್ಥೆಯ ಮೂಲಕ ಎವಿಯೇಶನ್ ಕಾಲೇಜು ಕಾರ್ಯಾಚರಿಸಲಿದೆ. ನಗರದ ಎಪಿಎಂಸಿ ರಸ್ತೆಯಲ್ಲಿರುವ ಮಾನೈ ಆರ್ಕೇಡ್ ನ 2ನೇ ಮಹಡಿಯಲ್ಲಿ ಕಾಲೇಜು ಅ.3ರಂದು ಶುಭಾರಂಭಗೊಳ್ಳಲಿದ್ದು, ಭರ್ಜರಿ ತಯಾರಿ ನಡೆಯುತ್ತಿದೆ.
ಯಾವುದೇ ವಿಷಯದಲ್ಲಿ ಪಿಯುಸಿ, ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಸಂಸ್ಥೆ ಎವಿಯೇಶನ್ ನ ಹೊಸ ಹೊಸ ಕೋರ್ಸ್ ಗಳ ಹೆಬ್ಬಾಗಿಲನ್ನೇ ತೆರೆದಿದೆ. ವಿಮಾನಕ್ಕೆ ಸಂಬಂಧಪಟ್ಟ ವಿಮಾನ ನಿಲ್ದಾಣದ ಗ್ರೌಂಡ್ ಸ್ಟಾಫ್, ಏರ್ ಪೋರ್ಟ್ ಆಪರೇಷನ್, ಏರ್ ಲೈನ್ ಟಿಕೆಟಿಂಗ್, ಕ್ಯಾಬಿನ್ ಸಿಬ್ಬಂದಿ, ಗಗನಸಖಿ, ಟಿಕೆಟ್ ತಪಾಸಣೆ, ಬೋರ್ಡಿಂಗ್ ಪಾಸ್ ವಿತರಣೆ, ಲಗ್ಗೇಜ್ ನಿರ್ವಹಣೆ, ಪ್ರಯಾಣದ ಮಾಹಿತಿ, ಸುರಕ್ಷೆ, ಅಮಾಡಿಯಸ್ ಮತ್ತು ಗೆಲಿಲಿಯೋ ಸಾಫ್ಟ್ ವೇರ್ ಬಳಕೆ, ಎವಿಯೇಷನ್ ಮ್ಯಾನೇಜ್ಮೆಂಟ್ ಪದವಿ ಸೇರಿದಂತೆ ಹತ್ತು ಹಲವು ಪದವಿ ಮತ್ತು ಡಿಪ್ಲೋಮಾ ಕೋರ್ಸ್ ಗಳು ಇಲ್ಲಿವೆ. ದೇಶದ ವಿವಿಧ ವಿಮಾನಯಾನ ಸಂಸ್ಥೆಗಳಲ್ಲಿ ಅವಕಾಶ ಕಲ್ಪಿಸಿ ಕೊಡುವುದರೊಂದಿಗೆ ಇಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ 100% ಉದ್ಯೋಗದ ಭರವಸೆಯನ್ನು ಸಂಸ್ಥೆ ನೀಡುತ್ತಿದೆ. ಅರ್ಹ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸಾಲದ ಸೌಲಭ್ಯದ ವ್ಯವಸ್ಥೆ ಇದೆ. ಇನ್ನು ಅವಶ್ಯಕತೆಯಿರುವ ದೂರದೂರಿನ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಹಾಸ್ಟಲ್ ಸೌಲಭ್ಯವೂ ಇಲ್ಲಿದೆ. ಪ್ರಸಕ್ತ ಸಾಲಿನ ಕೋರ್ಸ್ ಗಳಿಗೆ ನೋಂದಣಿ ಆರಂಭಗೊಂಡಿದ್ದು, ಆಸಕ್ತರು ಹೆಚ್ಚಿನ ಮಾಹಿತಿಗೆ ಈ 9448536143 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.