





ಪುತ್ತೂರು: ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘ ಮಂಗಳೂರು ಇದರ ಆಶ್ರಯದಲ್ಲಿ ಸೆ.23 ರಂದು ಕೊಂಬೆಟ್ಟು ಕ್ರೀಡಾಂಗಣದಲ್ಲಿ ನಡೆದ ಪುತ್ತೂರು ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಸಂತ ಫಿಲೋಮಿನಾ ಪ. ಪೂ ಕಾಲೇಜಿನ ಬಾಲಕರ ವಿಭಾಗವು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತದೆ.


ದ್ವಿತೀಯ ವಾಣಿಜ್ಯ ವಿಭಾಗದ ಮೋಕ್ಷಿತ್ ಬಿ ಹಾಗೂ ಪ್ರಥಮ ಕಲಾ ವಿಭಾಗದ ಮಹಮ್ಮದ್ ಸವಾದ್ ಕೆ ಇವರು ಉಜಿರೆ ಶ್ರೀ ಧ. ಮಂ. ಕಾಲೇಜಿನಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ.





ಉಳಿದಂತೆ ಪಂದ್ಯಾಟದಲ್ಲಿ ಪ್ರಥಮ ವಿಜ್ಞಾನ ವಿಭಾಗದ ನಂದನ್ ಕುಮಾರ್ , ಪ್ರಥಮ ವಾಣಿಜ್ಯ ವಿಭಾಗದ ಅಬ್ದುಲ್ ನಾಫೀ, ಶಮೀಲ್ ಮೊಹಮ್ಮದ್, ಇಬ್ರಾಹಿಂ ಫವಾಜ್, ದ್ವಿತೀಯ ವಾಣಿಜ್ಯ ವಿಭಾಗದ ವರುಣ್ ಕಾವೇರಪ್ಪ ಕೆ, ಸಾಯಿ ಪ್ರಾರ್ಥನ್ ಎಂ ಪಿ, ಮೊಹಮ್ಮದ್ ಸುಫಿಯಾನ್, ದ್ವಿತೀಯ ಕಲಾ ವಿಭಾಗದ ಭವಿಷ್ ಪಿ, ಮತ್ತು ಧ್ರುವ ಜೆ ಭಂಡಾರಿ ಹಾಗೂ ಪ್ರಥಮ ಕಲಾ ವಿಭಾಗದ ಸ್ನೇಹಿನ್ ಜೇಮ್ಸ್ ಫೆರ್ನಾಂಡಿಸ್ ಭಾಗವಹಿಸಿದ್ದರು. ಇವರಿಗೆ ಮಹಮದ್ ಅಬೀಬ್ ತರಬೇತಿ ನೀಡಿರುತ್ತಾರೆ.
ಕಾಲೇಜಿನ ಪ್ರಾಂಶುಪಾಲ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ದೈಹಿಕ ಶಿಕ್ಷಕ ನಿರ್ದೇಶಕ ಏಲಿಯಾಸ್ ಪಿಂಟೋ ಹಾಗೂ ರಾಜೇಶ್ ಮೂಲ್ಯ ಉಪಸ್ಥಿತರಿದ್ದರು.










