ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ – ಆಲಂಕಾರು ದುರ್ಗಾಂಬಾ ಪಿ ಯು ವಿದ್ಯಾಲಯದ ಬಾಲಕಿಯರ ತಂಡ ಜಿಲ್ಲಾ ಮಟ್ಟಕ್ಕೆ

0

ಆಲಂಕಾರು: ದ.ಕ ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಕುಮಾರಸ್ವಾಮಿ ಪದವಿಪೂರ್ವ ಕಾಲೇಜು ಸುಬ್ರಹ್ಮಣ್ಯ ಇದರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲ್ಪಟ್ಟ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಆಲಂಕಾರು ದುರ್ಗಾಂಬಾ ಪದವಿ ಪೂರ್ವ ವಿದ್ಯಾಲಯದ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.

ತಂಡದಲ್ಲಿ ದುರ್ಗಾಂಬಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಾದ ಧನ್ಯಶ್ರೀ, ದೀಕ್ಷಾ, ನಿಶ್ಮಿತಾ ,ಕೃತಿ ,ರೂಪಿಕಾ, ಮಧುಶ್ರೀ, ಶ್ರಾವ್ಯ, ಅನುಷಾ, ಚೈತ್ರ, ತೃಪ್ತಿ ವಾಲಿಬಾಲ್ ತಂಡದಲ್ಲಿದ್ದು, ನಿಶ್ಮಿತಾ ಬೆಸ್ಟ್ ಆಲ್ ರೌಂಡರ್ ಪ್ರಶಸ್ತಿ ಮತ್ತು ಕೃತಿ ಬೆಸ್ಟ್ ಡಿಫೆನ್ಸ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಇವರಿಗೆ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೇಯಸ್ಸು ರೈ, ಆಡಳಿತ ಮಂಡಳಿಯ ಅಧ್ಯಕ್ಷರಾದ ದಯಾನಂದ ರೈ ಮನವಳಿಕೆಗುತ್ತು, ಕಾರ್ಯದರ್ಶಿ ಈಶ್ವರ ಗೌಡ ಪಜ್ಜಡ್ಕ, ಆಡಳಿತಾ ಧಿಕಾರಿಗಳಾದ ಶ್ರೀಪತಿ ರಾವ್ ಎಚ್,ಕಾರ್ಯಕಾರಿ ಸಮಿತಿಯ ಸದಸ್ಯರು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಪ್ರಾಂಶುಪಾಲರಾದ ರೂಪ ಜೆ.ರೈ ಮುಖ್ಯ ಗುರುಗಳಾದ ನವೀನ್ ರೈ,ಉಪನ್ಯಾಸಕ ವೃಂದ, ಅಧ್ಯಾಪಕ ವೃಂದ ಬೋಧಕೇತರ ಸಿಬ್ಬಂದಿಗಳು,ವಿದ್ಯಾರ್ಥಿಗಳ ಪಾಲಕರು ವಿದ್ಯಾರ್ಥಿ ವೃಂದದವರು ವಾಲಿಬಾಲ್ ತಂಡದ ವಿದ್ಯಾರ್ಥಿನಿಯರಿಗೆ ವಿದ್ಯಾಸಂಸ್ಥೆಯ ವತಿಯಿಂದ ಅಭಿನಂದನೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here