ಪುತ್ತೂರು: ನಗರದ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇಯ ವಿದ್ಯಾರ್ಥಿಗಳು ಪುತ್ತೂರಿನ ನರಿಮೊಗರಿನ ಸಾಂದೀಪನಿ ಗ್ರಾಮೀಣ ವಿದ್ಯಾ ಸಂಸ್ಥೆಯಲ್ಲಿ ಸೋಮವಾರ ನಡೆದ ಜಿಲ್ಲಾಮಟ್ಟದ ಗಣಿತ, ವಿಜ್ಞಾನ ಹಾಗೂ ಸಂಸ್ಕೃತಿ ಜ್ಞಾನ ಪರಿಚಯ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಮುಂದಿನ ಹಂತವಾದ ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ.
ಬಂಟ್ವಾಳ ತಾಲೂಕಿನ ಗಿರೀಶ್ ಗೌಡ ಎಚ್ ಹಾಗೂ ಸುಮಿತ್ರ ದಂಪತಿಗಳ ಪುತ್ರಿ 6ನೇ ತರಗತಿಯ ಸಾನ್ವಿ (ಬಾಲ ವರ್ಗ) ಗಣಿತ ವಸ್ತು ಪ್ರದರ್ಶನದಲ್ಲಿ ಮೊದಲ ಸ್ಥಾನ ಪಡೆದಿರುತ್ತಾರೆ. ಪುತ್ತೂರಿನ ಡಾ. ರವಿ ನಾರಾಯಣ್ ಹಾಗೂ ಅಶ್ವಿನಿ ಬಿ ದಂಪತಿಯ ಪುತ್ರಿ 7ನೇ ತರಗತಿಯ ಆರಾಧ್ಯ ಇವರು (ಶಿಶುವರ್ಗದ) ವಿಜ್ಞಾನ ಪತ್ರ ವಾಚನದಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.
ಮುಕ್ರಂಪಾಡಿಯ ಪ್ರವೀಣ್ ದೊಡ್ಡಮಾಣಿ ಹಾಗೂ ಚಿತ್ಕಲ ಗೌರಿ ಕೆ ಇವರ ಪುತ್ರಿ 10ನೇ ತರಗತಿಯ ನಿಯತಿ ಭಟ್ ಇವರು (ಕಿಶೋರ ವರ್ಗ) ವಿಜ್ಞಾನ ಪ್ರಯೋಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ದರ್ಭೆಯ ಪ್ರವೀಣ್ ರಾವ್ ಸುಗಂಧಿನಿ ಇವರ ಪುತ್ರ 9ನೇ ತರಗತಿಯ ಪ್ರಿಯಾಂಶು ರಾವ್ ಹಾಗೂ ಪಡೀಲ್ ನ ಸುರೇಶ್ ಶೆಟ್ಟಿ ಹಾಗೂ ನೈನಾ ಎಸ್ ಶೆಟ್ಟಿ ಇವರ ಪುತ್ರ 9ನೇ ತರಗತಿಯ ಕನಿಷ್ಕ ಶೆಟ್ಟಿ ಮತ್ತು ಪೆರ್ಲಡ್ಕದ ಕರುಣಾಕರ ರೈ ಶಾಂತ ರೈ ಇವರ ಪುತ್ರಿ 10ನೇ ತರಗತಿಯ ಅದಿತಿ ರೈ (ಕಿಶೋರವರ್ಗ)ವಿಜ್ಞಾನ ರಸಪ್ರಶ್ನೆಯಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ.
ಪೆರ್ಲಡ್ಕದ ಎಸ್ ಯೋಗೀಶ್ ಕಲ್ಲೂರಾಯ ಹಾಗೂ ಕಪಿಲ ಪಿ ಬಿ ಇವರ ಪುತ್ರ 5ನೇ ತರಗತಿಯ ಯುಗನ್ ಹಿಮಾನಿಕಾ ಇವರು (ಶಿಶು ವರ್ಗ) ಜ್ಞಾನ ಪ್ರಯೋಗದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಕೊಂಬೆಟ್ಟುವಿನ ಶ್ರೀಕೃಷ್ಣ ಎಂ ಮತ್ತು ಶಂಕರಿ ಎಚ್ ಇವರ ಪುತ್ರಿ 7ನೇ ತರಗತಿಯ ಅನ್ವಿತಾ, ತಾರೆಗುಡ್ಡೆ ಯ ಸತೀಶ್ ಶೆಟ್ಟಿ ಹಾಗೂ ಸುರೇಖಾ ದಂಪತಿಯ ಪುತ್ರಿ 8ನೇ ತರಗತಿಯ ಹೃನ್ಮಯಿ ಶೆಟ್ಟಿ, ಮುಕ್ರಂಪಾಡಿಯ ಈರದಾಸಪ್ಪ ಮತ್ತು ಜ್ಯೋತಿ ಎ ಇವರ ಪುತ್ರ 7ನೇ ತರಗತಿಯ ಪ್ರೇಮ್ ಇ ಇವರು (ಬಾಲ ವರ್ಗ) ವಿಜ್ಞಾನ ರಸಪ್ರಶ್ನೆಯಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ.
ಕುಂಜೂರು ಪಂಜ ಇಲ್ಲಿಯ ಶ್ರೀನಿವಾಸ್ ಮಯ್ಯ ಡಿ ಹಾಗೂ ಜಯಲಕ್ಷ್ಮಿ ಎಸ್ ಮಯ್ಯ ಇವರ ಪುತ್ರ, 5ನೇ ತಗತಿಯ ಮಯೂರ್ ಎಸ್ ಮಯ್ಯ, ಕೊಡಿಂಬಾಡಿ ಇಲ್ಲಿಯ ವಸಂತ್ ಬಿ ಗೌಡ ಹಾಗೂ ಮೀನಾಕ್ಷಿ ದಂಪತಿಗಳ ಪುತ್ರಿ, 5ನೇ ತರಗತಿಯ ಶ್ರೀಯಾ ಹಾಗೂ ಉಣಚ ಇಲ್ಲಿಯ ವಿಜಯ್ ಕುಮಾರ್ ಮತ್ತು ಪ್ರತಿಭಾ ಕುಮಾರಿ ಪಿ ಇವರ ಪುತ್ರಿ 5ನೇ ತರಗತಿಯ ರೋಚಿಕ ಇವರು (ಶಿಶು ವರ್ಗ)ಗಣಿತ ರಸಪ್ರಶ್ನೆಯಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.