ಪುತ್ತೂರು: ಕರ್ನಾಟಕ ಸರಕಾರ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ 600 ಮೀ ಓಟದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದುಕೊಂಡು ಶಿವಮೊಗ್ಗದಲ್ಲಿ ನಡೆಯುವ ‘ರಾಜ್ಯ ಮಟ್ಟದ ಕ್ರೀಡಾ ಕೂಟಕ್ಕೆ ಆಯ್ಕೆಯಾಗಿ ಅಪ್ರತಿಮ ಸಾಧನೆಗೈದ’ ಪುತ್ತೂರು ತಾಲೂಕಿನ ನರಿಮೊಗರು ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾಂತಿಗೋಡು ಗ್ರಾಮದ ಅನಡ್ಕ ಶಾಲೆಯ 7ನೇ ತರಗತಿಯ ವಿದ್ಯಾರ್ಥಿನಿ ಗುರಿಯಡ್ಕ ನಾರಾಯಣ ನಾಯ್ಕ ಮತ್ತು ಪೂರ್ಣಿಮಾ ದಂಪತಿಗಳ ಪುತ್ರಿ ಪ್ರಗತಿಯನ್ನು ಅವರ ಮನೆಯಲ್ಲಿ ಮರಾಟಿ ಯುವ ವೇದಿಕೆ ಕೊಂಬೆಟ್ಟು, ಪುತ್ತೂರು ಇದರ ವತಿಯಿಂದ ನ.13 ರಂದು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಮರಾಟಿ ಯುವ ವೇದಿಕೆಯ ಅಧ್ಯಕ್ಷರಾದ ವಸಂತ ಆರ್ಯಾಪು, ಕೋಶಾಧಿಕಾರಿ ಜಗದೀಶ್ ಎಲಿಕ, ಉಪಾಧ್ಯಕ್ಷರಾದ ನವೀನ್ ಕುಮಾರ್ ಕೆ, ಸ್ಥಾಪಕಾಧ್ಯಕ್ಷ ಗಿರೀಶ್ ನಾಯ್ಕ ಸೊರಕೆ, ಸಂಘಟನಾ ಕಾರ್ಯದರ್ಶಿ ಅಶೋಕ್ ನಾಯ್ಕ್ ಸೊರಕೆ ಮತ್ತು ಗಂಗಾಧರ ಕೌಡಿಚ್ಚಾರು, ಕ್ರೀಡಾ ಕಾರ್ಯದರ್ಶಿ ಯತೀಶ್ ನಾಯ್ಕ್ ಕೆಎಂ , ಸಾಂಸ್ಕೃತಿಕ ಕಾರ್ಯದರ್ಶಿ ಯಶಸ್ವಿನಿ ಸಾಲ್ಮರ, ಸದಸ್ಯರಾದ ವಿಜಯ ಮಠಂತಬೆಟ್ಟು, ಗಣೇಶ್ ಬಳ್ನಾಡು, ಸೌಜನ್ಯ ಬೊಳಿಂಜ, ಸ್ವಾತಿ ಬೊಳಿಂಜ, ಹರ್ಷತಾ ಸಾಲ್ಮರ ಹಾಗೂ ಪ್ರಗತಿಯ ತಂದೆ ನಾರಾಯಣ ನಾಯ್ಕ, ತಾಯಿ ಪೂರ್ಣಿಮಾ ಮತ್ತು ಸಹೋದರ ಉಪಸ್ಥಿತರಿದ್ದರು.