ಮಕ್ಕಳ ಅಪೌಷ್ಟಿಕತೆಯ ನಿವಾರಣೆಗೆ ಕ್ಷೀರಕ್ರಾಂತಿಯೇ ನಡೆಸಿದ ಬಡವರ ತಾಯಿ ಇಂದಿರಾ ಗಾಂಧಿ- ಮಹಮ್ಮದ್ ಬಡಗನ್ನೂರು
ಪುತ್ತೂರು: ಸ್ತ್ರೀ-ಪುರುಷರ ನಡುವಿನ ಸಮಾನತೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಬರಿಯ ಭಾಷಣದ ವಿಷಯ ಆಗಿರಲಿಲ್ಲ. ಈ ಕಾರಣಕ್ಕೆ ಅವರ ಆಡಳಿತ ಅವಧಿಯಲ್ಲೇ ಪುರುಷರು ಮತ್ತು ಮಹಿಳೆಯರಿಗೆ ಸಮನಾದ ಕೆಲಸಕ್ಕೆ ಸಮಾನ ವೇತನ ನೀಡುವ ತತ್ವಕ್ಕೆ ಸಂವಿಧಾನಿಕ ಮಾನ್ಯತೆ ನೀಡಿದ್ದರು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಮಹಮ್ಮದ್ ಬಡಗನ್ನೂರು ಹೇಳಿದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಛೇರಿ ಯಲ್ಲಿ ನ.19ರಂದು ನಡೆದ ಇಂದಿರಾ ಗಾಂಧಿ ಜನುಮದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಂದಿರಾ ಗಾಂಧಿಯವರು ತಮ ಆಡಳಿತದ ಅವಧಿಯಲ್ಲಿ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವುದನ್ನು ಕಂಡು ಮರುಗಿ ಅದರ ಪರಿಹಾರಕ್ಕಾಗಿ ಅಪೌಷ್ಟಿಕತೆಯ ವಿರುದ್ಧ ಸೆಣಸಲು, ಅದೂ ವಿಶೇಷವಾಗಿ ಸಣ್ಣ ಮಕ್ಕಳಲ್ಲಿನ ಪೌಷ್ಟಿಕ ಕೊರತೆ ನೀಗಿಸಲು ಅಧಿಕ ಹಾಲಿನ ಉತ್ಪಾದನೆ, ಹೈನುಗಾರಿಕೆಗೆ ಅತಿ ಹೆಚ್ಚು ಪ್ರೋತ್ಸಾಹ ನೀಡಿದ ಪರಿಣಾಮ ಹಾಲಿನ ಉತ್ಪಾದನೆ ಬೇಡಿಕೆಯನ್ನೂ ಮೀರಿತು. ಇದು ‘ಶ್ವೇತಕ್ರಾಂತಿ’ ಎಂದೇ ಹೆಸರಾಯಿತು ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಮಾತನಾಡಿ, 1967ರಲ್ಲಿ ರಾಷ್ಟ್ರೀಯ ಪರಮಾಣು ಯೋಜನೆಯನ್ನು ಪ್ರಾರಂಭಿಸಿದರು. ಚೀನಾ ಒಡ್ಡಿದ ಪರಮಾಣು ಬೆದರಿಕೆಗೆ ಉತ್ತರವಾಗಿ ಮತ್ತು ಪರಮಾಣು ಬಲಿಷ್ಠ ರಾಷ್ಟ್ರಗಳು ಸ್ವತಂತ್ರವಾಗಿರುವಂತೆ ಭಾರತವೂ ತನ್ನ ಸ್ಥಿರತೆ ಮತ್ತು ಭದ್ರತಾ ಹಿತರಕ್ಷಣೆಯನ್ನು ಕಾಪಾಡಿಕೊಳ್ಳುವುದು ಇದರ ಉದ್ದೇಶವಾಗಿತ್ತು. 1974ರಲ್ಲಿ ಭಾರತವು ರಾಜಸ್ಥಾನದ ಪ್ರೊಕ್ರಾನ್ ಬಂಜರು ಹಳ್ಳಿಯಲ್ಲಿ ‘ಸ್ಟೈಲಿಂಗ್ ಬುದ್ಧ’ ಎಂಬ ರಹಸ್ಯ ಕೋಡ್ ವರ್ಡ್ ಹೊಂದಿದ್ದ ಪರಮಾಣು ಪರೀಕ್ಷೆಯನ್ನು ಭೂಗರ್ಭದೊಳಗೆ ಯಶಸ್ವಿಯಾಗಿ ಮಾಡಿತು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಮಹಮ್ಮದ್ ಬಡಗನ್ನೂರು ಮತ್ತು ಮಹೇಶ್ಚಂದ್ರ ಸಾಲಿಯಾನ್ ಇವರಿ ಸನ್ಮಾನಿಸಲಾಯಿತು. ರಾಜ್ಯ ವಕ್ತಾರ ಅಮಲ ರಾಮಚಂದ್ರ ಸನ್ಮಾನ ನಡೆಸಿಕೊಟ್ಟರು.
ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ವಿ.ಎಚ್.ಎ ಶಕೂರ್ ಹಾಜಿ, ಪ್ರಧಾನ ಕಾರ್ಯದರ್ಶಿ ವಿನೀತ ನಾಯ್ಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪಕ್ಷದ ಪ್ರಮುಖರಾದ ಶರೀಫ್ ಬಲ್ನಾಡ್, ಇಸ್ಮಾಯಿಲ್ ಬಲ್ನಾಡ್ ಇಸಾಕ್ ಸಾಲ್ಮರ, ಪ್ರಜ್ವಲ್ ರೈ ತೊಟ್ಲ, ವಿಶಾಲಾಕ್ಷಿ ಬನ್ನೂರು, ಸಿರಿಲ್ ಡಿ ಸೋಜ, ಸನತ್ ರೈ ಕುರಿಯ, ಲ್ಯಾನ್ಸಿ ಮಸ್ಕರೇನಸ್, ಸುರೇಶ್ ಸಾಲಿಯಾನ್, ಆದಂಕುಂಞಿ ಕಲ್ಲರ್ಪೆ, ಶ್ಯಾಮ್ ಸುಂದರ್ ರೈ, ಮೊಹಮ್ಮದ್ ರಿಯಾಝ್, ವಿಶ್ವಜೀತ್ ಅಮ್ಮುಂಜೆ, ಸುಪ್ರೀತ್ ಕಣ್ಣರಾಯ, ಮಾಧವ ಅಜಿಲಡ್ಕ, ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಅಶೋಕ್ ಪಾಯ್ಸ್, ಅಬ್ದುಲ್ ಸಮದ್, ಆಸಿಫ್ ತಂಬುತಡ್ಕ, ಕೆ ಎಂ ಹನೀಫ್ ಮಾಡ್ನೂರು, ಶಕೂರು ಮಾಡಾವು, ಮೋನು ಬಪ್ಪಳಿಗೆ, ಆಶಿಕ್ ಸಂಪ್ಯ, ಎ ಗಿರಿಧರ ಗೌಡ ಸಂಪ್ಯ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಜಿಲ್ಲಾ ಸೇವಾದಳದ ಅಧ್ಯಕ್ಷ ಜೋಕೀಂ ಡಿಸೋಜ ವಂದೇ ಮಾತರಂ ಹಾಡುವ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಕೃಷ್ಣಪ್ರಸಾದ್ ಆಳ್ವರು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿಗಳಾದ ಪೂರ್ಣೇಶ್ ಭಂಡಾರಿ ಕಾರ್ಯಕ್ರಮ ನಿರೂಪಿಸಿ ಪ್ರಧಾನ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ ವಂದಿಸಿದರು.