ನಾಳೆ(ನ.26): ಕೆಯ್ಯೂರು ಗ್ರಾಪಂ ವಿಶೇಷ ಗ್ರಾಮಸಭೆ

0

ಪುತ್ತೂರು: ಕೆಯ್ಯೂರು ಗ್ರಾಮ ಪಂಚಾಯತ್‌ನ 2025-26ನೇ ಸಾಲಿನಲ್ಲಿ ಗ್ರಾಮ ಪಂಚಾಯತದ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸಲಾಗುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಕ್ರಿಯಾಯೋಜನೆ ತಯಾರಿಸಲು ನ.26 ರಂದು ಬೆಳಿಗ್ಗೆ 11.00ಕ್ಕೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ವಿಶೇಷ ಗ್ರಾಮ ಸಭೆ ನಡೆಯಲಿದೆ.‌

ಗ್ರಾಮ ಸಭೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಕ್ರಿಯಾಯೋಜನೆಯ ಸಂಬಂಧಿಸಿದಂತೆ ಮಾತ್ರ ಚರ್ಚಿಸಲು ಅವಕಾಶವಿರುತ್ತದೆ. ಯೋಜನೆಯ ಮಾರ್ಗಸೂಚಿಯಂತೆ ಸೌಲಭ್ಯ ಅಪೇಕ್ಷಿಸುವವರು ಅವಶ್ಯ ದಾಖಲೆ (ಆರ್ ಟಿ ಸಿ ಮತ್ತು ಖಾಲಿ ಜಾಗದ ಜಿ.ಪಿ.ಎಸ್ ಫೋಟೋದೊಂದಿಗೆ ಹಾಜರಾಗಿ ಹೆಸರು ನೋಂದಾಯಿಸಲು ತಿಳಿಸಿದೆ. ಗ್ರಾಮ ಸಭೆಯಲ್ಲಿ ಬಂದ ಪ್ರಸ್ತಾವನೆಗಳಿಗೆ ಸಂಬಂಧಿಸಿ ಮಾತ್ರ ಕ್ರಿಯಾಯೋಜನೆ ತಯಾರಿಸಲಾಗುವುದು. ನಂತರ ಬಂದ ಯಾವುದೇ ಸಾರ್ವಜನಿಕ ಯಾ ವೈಯಕ್ತಿಕ ಸೌಲಭ್ಯಗಳ ಪ್ರಸ್ತಾವನೆಗಳನ್ನು ಸ್ವೀಕರಿಸಲಾಗುವುದಿಲ್ಲ. ಸಂಬಂಧಿಸಿದ ಕ್ರಿಯಾಯೋಜನೆ 2025-26ನೇ ಸಾಲಿಗೆ ಅಂತಿಮವಾಗಿದ್ದು ಯಾವುದೇ ಬದಲಾವಣೆ ಯಾ ಸೇರ್ಪಡೆಗೆ ಅವಕಾಶವಿರುವುದಿಲ್ಲ ಎಂದು ಗ್ರಾಪಂ ಪ್ರಕಟಣೆ ತಿಳಿಸಿದೆ. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ನಮಿತಾ ಎ.ಕೆ, ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ, ಅಧ್ಯಕ್ಷ ಶರತ್ ಕುಮಾರ್ ಮಾಡಾವು, ಉಪಾಧ್ಯಕ್ಷೆ ಸುಮಿತ್ರಾ ಹಾಗೂ ಸರ್ವ ಸದಸ್ಯರುಗಳ ಮತ್ತು ಸಿಬ್ಬಂದಿ ವರ್ಗದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here