ಆದಿ ಧೂಮಾವತಿ ಶ್ರೀ ದೇಯಿ ಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿ  ಗೆಜ್ಜೆಗಿರಿ ಇದರ 3ನೇ ವರ್ಷದ ತಿರುಗಾಟದ ಪ್ರಥಮ ಸೇವೆಯಾಟ

0

ಬಡಗನ್ನೂರು: ಆದಿ ಧೂಮಾವತಿ ಶ್ರೀ ದೇಯಿ ಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿ  ಗೆಜ್ಜೆಗಿರಿ ಇದರ 3ನೇ ವರ್ಷದ ತಿರುಗಾಟವು ನ.22ರಂದು ಗೆಜ್ಜೆಗಿರಿ ಕ್ಷೇತ್ರದಲ್ಲಿ ಪ್ರಥಮ ಸೇವೆಯಾಟ ನಡೆಯುವುದರೊಂದಿಗೆ ವಿದ್ಯುಕ್ತವಾಗಿ ಆರಂಭಗೊಂಡಿತು.

ಸಂಜೆ ಅದಿ ದೈವ ಧೂಮಾವತಿ ಹಾಗೂ ಮಾತೆ ದೇಯಿ ಬೈದೇತಿ ಮತ್ತು ಶ್ರೀ ಕೋಟಿ ಚೆನ್ನಯ ಸಾನಿಧ್ಯದಲ್ಲಿ ವಿಶೇಷ ಪ್ರಾರ್ಥನೆ, ಪೂಜೆ ನಡೆಯಿತು.ಶ್ರೀ ಕ್ಷೇತ್ರದ ಗೆಜ್ಜೆಗಿರಿ ತಂತ್ರಿವರಿಯರಾದ ಶಿವಾನಂದ ಶಾಂತಿರವರು ಗೆಜ್ಜೆ ಹಸ್ತಾಂತರಿಸಿದ ಬಳಿಕ ಶ್ರೀ ದೇವಿ ಸ್ವರೂಪಿ ಮಾತೆ ದೇಯಿ ಬೈದೇತಿ ಸನ್ನಿಧಿಯಲ್ಲಿ ಗೆಜ್ಜೆಸೇವೆ ನಡೆಯಿತು. ಬಳಿಕ ಶ್ರೀ ಕ್ಷೇತ್ರದ ಎದುರು ಭಾಗದ ವಠಾರದಲ್ಲಿ  ಪ್ರಥಮ ಸೇವೆಯಾಟ ನಡೆಯಿತು. ಸೇವೆಯಾಟದ ಮೊದಲಿಗೆ ಚೌಕಿ ಪೂಜೆ ನಡೆದು 3ನೇ ವರ್ಷದ ತಿರುಗಾಟದ ಉದ್ಘಾಟನೆ ನಡೆಯಿತು. ಕ್ಷೇತ್ರದ ಗೌರವಾಧ್ಯಕ್ಷ ಪೀತಾಂಬರ ಹೆರಾಜೆ ದೀಪ ಪ್ರಜ್ವಲಿಸುವ ಮೂಲಕ ತಿರುಗಾಟಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿ ಶುಭಹಾರೈಸಿದರು. 

ವೇದಿಕೆಯಿಂದ ಉಪಾಧ್ಯಕ್ಷ ಜಯಂತ ನಡುಬೈಲು, ಕ್ಷೇತ್ರದ ನೂತನ ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ ಹಾಸ್ಯರತ್ನ ದಿನೇಶ್ ಕಡಬ, ಸಂದರ್ಭೋಚಿತ ಮಾತನಾಡಿ ಶುಭ ಹಾರೈಸಿದರು. ಯಕ್ಷಗಾನ ಅಕಾಡೆಮಿ ಸದಸ್ಯ ಸುಧಾಕರ ಉಳ್ಳಾಲ, ಮೆಳದ ಯಜಮಾನ  ಪ್ರಶಾಂತ್ ಕುಮಾರ್ ಮಸ್ಕತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗೆಜ್ಜೆಗಿರಿ ಯಕ್ಷಗಾನ ಕಲಾವಿದರು ಹಾಗೂ ಶಿಕ್ಷಕರೂ ಆದ ಚಂದ್ರಶೇಖರ್ ಸುಳ್ಯಪದವು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಮೇಳದ ವ್ಯವಸ್ಥಾಪಕರಾದ ಪ್ರಶಾಂತ್ ಕುಮಾರ್ ಮಸ್ಕತ್ ಮ್ಯಾನೇಜರ್ ನಿತಿನ್ ಹಾಗೂ ದೀಪಕ್ ಸಜೀಪ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು. ಉದ್ಘಾಟನೆ ಬಳಿಕ ಅಶ್ವಮೇಧ ಹಾಗೂ ಕಾಲ ಕಲ್ಜಿಗ  ಯಕ್ಷಗಾನ ನಡೆಯಿತು.

ಗೌರವಾರ್ಪಣೆ:-
3ನೇ ವರ್ಷದ ತಿರುಗಾಟ ಪ್ರಥಮ ಸೇವೆಯಾಟ ಈ ಸಂದರ್ಭದಲ್ಲಿ ಗೆಜ್ಜೆಗಿರಿ ಕ್ಷೇತ್ರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಪೀತಾಂಬರ ಹೆರಾಜೆ, ನೂತನ ಅಧ್ಯಕ್ಷರಾಗಿ ಅಯ್ಕೆಯಾದ ರವಿ ಪೂಜಾರಿ ಚಿಲಿಂಬಿ, ಹಾಗೂ ಹಾಸ್ಯ ರತ್ನ ದಿನೇಶ್ ಕಡಬ ಇವರುಗಳನ್ನು ಪೇಟ ಧರಿಸಿ, ಹಾರ ಹಾಕಿ, ಶಾಲು ಹೊದಿಸಿ ಫಲಪುಷ್ಪ ಸ್ಮರಣಿಕೆ ನೀಡಿ  ಅದಿ ಧುಮಾವತಿ ಕೃಪಾಪೋಷಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು. ಮತ್ತು ಈ ವರ್ಷದ ನೂತನ ಪ್ರಸಂಗ ಸಂಯೋಜಕರಾದ ದೇವದಾಸ್ ಈಶ್ವರಮಂಗಲ ಹಾಗೂ ನಿತನ್ ತೆಂಕ ಕಾರೂಂದೂರು ರವರನ್ನು ಶಾಲು ಹಾಕಿ ಗೌರವಿಸಲಾಯಿತು.

3ನೇ ವರ್ಷದ ನೂತನ ಪ್ರಸಂಗ “ಕಾಲ ಕಲ್ಜಿಗ” ಮತ್ತು” ಕುಲದೈವೋ ಬ್ರಹ್ಮ” ಮೇಳದ ಈ ವರ್ಷದ ತಿರುಗಾಟದಲ್ಲಿ ನೂತನ ಪ್ರಸಂಗವಾಗಿ ದೇವದಾಸ್ ಈಶ್ವರಮಂಗಲ ಕಥಾ ಸಂಯೋಜನೆಯ ಕಾಲ ಕಲ್ಜಿಗ” ಹಾಗೂ ನಿತಿನ್ ತೆಂಕ ಕಾರೂಂದೂರು ಕಥಾ ಸಂಯೋಜನೆ ಕುಲದೈವೋ ಬ್ರಹ್ಮ ರಂಗಭೂಮಿಯಲ್ಲಿ ವೈಭವೀಕರಿಸಲಿದೆ.

LEAVE A REPLY

Please enter your comment!
Please enter your name here