ನೆಲ್ಯಾಡಿ: ಅ.18 ಹಾಗೂ 19ರಂದು ಮಂಗಳೂರಿನ ಜೆಸಿಐ ಸಾಮ್ರಾಟ್ ಘಟಕದ ಆತಿಥ್ಯದಲ್ಲಿ ಜರಗಿದ ಜೆಸಿಐ ವಲಯ 15ರ ವಲಯ ಸಮ್ಮೇಳನದಲ್ಲಿ ಕೊಕ್ಕಡದ ಜಿತೇಶ್ ಎಲ್. ಪಿರೇರಾ ಅವರು 2026ನೇ ಸಾಲಿನ ಜೆಸಿಐ ವಲಯ 15ರ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಜಿತೇಶ್ ಎಲ್.ಪಿರೇರಾ ಅವರು 2020ರಲ್ಲಿ ಜೆಸಿಐ ಕೊಕ್ಕಡ ಕಪಿಲಾ ಘಟಕವನ್ನು ಸೇರಿ 2021ರಲ್ಲಿ ನಿರ್ದೇಶಕ, 2022ರಲ್ಲಿ ಕೋಶಾಧಿಕಾರಿ, 2023ರಲ್ಲಿ ಅಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸಿದರು. 2025ರಲ್ಲಿ ವಲಯದ ನಿರ್ದೇಶಕರಾಗಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಣೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದರು. ಇವರು ಜೆಸಿಐಯಲ್ಲಿ ಸಲ್ಲಿಸಿದ ಸೇವೆಗಾಗಿ ರಾಷ್ಟ್ರೀಯ ಅಧ್ಯಕ್ಷರ ಚಿನ್ನದ ಕಾಲರ್ ಪಡೆದಿದ್ದರು. ಗ್ರಾಮೀಣ ಭಾಗದ ನಿಡ್ಲೆಯಲ್ಲಿ ವಲಯಾಡಳಿತ ಮಂಡಳಿಯ ಸಭೆಯ ಆತಿಥ್ಯವನ್ನು ವಹಿಸಿದರು. ಮಧ್ಯಂತರ ಸಮ್ಮೇಳದಲ್ಲಿ ಅತ್ಯುತ್ತಮ ಘಟಕಾಧ್ಯಕ್ಷ ಪ್ರಶಸ್ತಿ, ವಲಯ ಸಮ್ಮೇಳನದಲ್ಲಿ ಫೌಂಡೇಶನ್ ಸದಸ್ಯ ವಿನ್ನರ್, ಅತ್ಯುತ್ತಮ ಲೋಕಲ್ ಪ್ರಾಜೆಕ್ಟ್ ವಿನ್ನರ್ ಪ್ರಶಸ್ತಿ ಪಡೆದಿದ್ದರು.

ಬೆಂಗಳೂರಿನಲ್ಲಿ ಜರುಗಿದ ರಾಷ್ಟ್ರೀಯ ಸಮ್ಮೇಳನ, 5 ವಲಯ ಸಮ್ಮೇಳನ, 5 ಮಧ್ಯಂತರ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ. ವಲಯದ ಯಶಸ್ವಿಯಾಗಿ ವಲಯದ ಸ್ಪೀಚ್ ಕ್ರಾಫ್ಟ್ ಕಾರ್ಯಕ್ರಮದ ಅಧ್ಯಕ್ಷತೆ ನಿರ್ವಹಿಸಿದರು. 2025ನೇ ಸಾಲಿನಲ್ಲಿ ವಲಯ ಸಮ್ಮೇಳನದಲ್ಲಿ ಜೆಸಿಐ ಬ್ರಾಂಡಿಂಗ್ ಮತ್ತು ಮೀಡಿಯಾ ಕವರೇಜ್ ವಿಶೇಷ ಸಾಧನೆಗಾಗಿ ಮೋಸ್ಟ್ ಔಟ್ ಸ್ಟ್ಯಾಂಡಿಂಗ್ ಜೋನ್ ಕೋರ್ಡಿನೇಟರ್ ವಿನ್ನರ್ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಅಂತರಾಷ್ಟ್ರೀಯ ಮಟ್ಟದ ಜೆಸಿಐ ಸೆನೆಟರ್ ಎಂಬ ಪುರಸ್ಕಾರ ಪಡೆದಿರುತ್ತಾರೆ.
ಇವರು ಕಂಪ್ಯೂಟರ್ ಸಾಯನ್ಸ್ ಎಂಜಿನಿಯರಿಂಗ್ ಪದವೀಧರರಾಗಿದ್ದು ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು ಕೊಕ್ಕಡ ನಿವಾಸಿ, ನಿವೃತ್ತ ಶಿಕ್ಷಕರಾದ ಜೋಸೆಫ್ ಪಿರೇರಾ ಹಾಗೂ ಜಸಿಂತ ಡಿ’ಸೋಜಾ ದಂಪತಿ ಪುತ್ರ.