ಆಲಂಕಾರು : ಪೆರಾಬೆ ಗ್ರಾಮದ ಮನವಳಿಕೆಗುತ್ತು ಶ್ರೀಪಾಂಡುರಂಗ ಭಜನಾ ಮಂಡಳಿ ವತಿಯಿಂದ ಮನವಳಿಕೆಗುತ್ತು ಚಾವಡಿಯಲ್ಲಿ ಡಿ.12 ರಂದು ಗುರುವಾರ ಅರ್ಧ ಏಕಾಹ ಭಜನೆ ನಡೆಯಲಿದೆ.
ಬೆಳಿಗ್ಗೆ10 ರಿಂದ ಆಹ್ವಾನಿತ ಭಜನಾ ಮಂಡಳಿಯಿಂದ ಭಜನೆ, ಮಧ್ಯಾಹ್ನ ಮಂಗಳಾರತಿ ನಂತರ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಮಂಗಳಾರತಿ, ಅನ್ನಸಂತರ್ಪಣೆ ನಂತರ ಭಜನೆ, ಮಹಾಮಂಗಳಾರತಿ ಪ್ರಸಾದ ವಿತರಣೆ ನಡೆಯಲಿದೆ.
ಆಹ್ವಾನಿತ ಭಜನಾ ತಂಡಗಳಾದ ಶಾರದಾ ಭಜನಾ ಮಂಡಳಿ ಕುಂತೂರು, ಕಾಳಿಕಾಂಬಾ ಭಜನಾ ಮಂಡಳಿ ಮನವಳಿಕೆ, ಉಮಾಮಹೇಶ್ವರಿ ಭಜನಾ ಮಂಡಳಿ ಬಲ್ಯ, ಶಾರದಾಂಬಾ ಮಕ್ಕಳ ತಂಡ ಶಾರದಾನಗರ ರಾಮಕುಂಜ, ಶ್ರೀ ಶಾರದಾಂಬಾ ಭಜನಾ ಮಂಡಳಿ ಶಾರದನಗರ ರಾಮಕುಂಜ,ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ ಶಿವಾರು, ದುರ್ಗಾಪರಮೇಶ್ವರೀ ಭಜನಾ ಮಂಡಳಿ ಕೆಮ್ಮಾರ, ರಾಮ ಭಜನಾ ಮಂಡಳಿ ತುಂಬೆತ್ತೋಡಿ, ಅದಿಶಕ್ತಿ ಭಜನಾ ಮಂಡಳಿ ಶರವೂರು, ಶಾರದ ಮಹಿಳಾ ಸಮಿತಿ ಕುಂತೂರು, ದುರ್ಗಾಶಕ್ತಿ ಭಜನಾ ಮಂಡಳಿ ಆಲಂಕಾರು, ವಿಷ್ಣುಮೂರ್ತಿ ಭಜನಾ ಮಂಡಳಿ ದೇವರಗುಡ್ಡೆ ಪೂಂಜ, ಮಹಮ್ಮಾಯಿ ಭಜನಾ ತಂಡ ಕುಂತೂರು, ಗಡಿಯರನಡ್ಕ, ವಿಷ್ಣುಮೂರ್ತಿ ಭಜನಾ ಮಂಡಳಿ, ದೇವರಗುಡ್ಡೆ ಪೂಂಜ, ಶ್ರೀಭಾರತಿ ಹಿರಿಯ ಪ್ರಾಥಮಿಕ ಶಾಲೆ ಆಲಂಕಾರು ಇವರಿಂದ ಭಜನೆ ನಡೆಯಲಿದೆ ಎಂದು ಮನವಳಿಕೆಗುತ್ತು ಕುಟುಂಬದ ಯಾಜಮಾನ ರಮಾನಾಥ ರೈ ಮತ್ತು ಕುಟುಂಬಸ್ಥರು, ಮನವಳಿಕೆಗುತ್ತು ಕುಟುಂಬದ ದೈವ ದೇವರುಗಳ ಟ್ರಸ್ಟ್ ಅಧ್ಯಕ್ಷ ದಯಾನಂದ ರೈ ಮನವಳಿಕೆ, ಕಾರ್ಯದರ್ಶಿ ಪ್ರಶಾಂತ ರೈ ಮನವಳಿಕೆ, ಪಾಂಡುರಂಗ ಭಜನಾ ಮಂಡಳಿಯ ಅಧ್ಯಕ್ಷ ಕವನ್ ರೈ, ಕಾರ್ಯದರ್ಶಿ ವಿಖ್ಯಾತ್ ರೈ ಮನವಳಿಕೆ, ಜೊತೆ ಕಾರ್ಯದರ್ಶಿ ಆಖಿಲೇಶ್ ರೈ ಮನವಳಿಕೆ ಹಾಗೂ ಪಾಂಡುರಂಗ ಭಜನಾ ಮಂಡಳಿಯ ಸದಸ್ಯರು ಹಾಗೂ ಕುಟುಂಬಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.