ಪುತ್ತೂರು: ಪುತ್ತೂರು – ದರ್ಬೆ- ಸುಬ್ರಹ್ಮಣ್ಯ ರಸ್ತೆಯಲ್ಲಿ 15ಕಿ.ಮೀ. ಪ್ರಯಾಣಿಸಿದಾಗ ಬಲಗಡೆಯ ಎತ್ತರದಲ್ಲಿ ವಿದ್ಯಾಕಾಂಕ್ಷಿಗಳನ್ನು ಕೈಬೀಸಿ ಕರೆಯುತ್ತದೆ ವಿದ್ಯಾಗಂಗೋತ್ರಿ ಸವಣೂರು ವಿದ್ಯಾರಶ್ಮಿ ವಿದ್ಯಾಲಯ, ಸುಂದರ ಗ್ರಾಮೀಣ ಪರಿಸರದ 27 ಎಕರೆ ಜಾಗದಲ್ಲಿವೆ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳು. ಈ ಶಿಕ್ಷಣ ಸಮುಚ್ಛಯದಲ್ಲಿ LKGಯಿಂದ ತೊಡಗಿ PUC (Science-PCMB/PCMC & Commerce-BAS/BAC) Degree – B.C.A. (Artificial Intellignece), B.Com. & B.A.) ವರೆಗಿನ ವ್ಯಾಸಂಗ ಒಂದೇ ಸೂರಿನಡಿ ಲಭ್ಯ. ‘In pursuit of completeness ಪರಿಪೂರ್ಣತೆಯ ಕಡೆಗೆ’ ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಯಾಚರಿಸುತ್ತಿರುವ ಈ ಸಂಸ್ಥೆಗಳಲ್ಲಿ ಕರ್ನಾಟಕ, ಕೇರಳ ಮತ್ತು ಆಂಧ್ರಪ್ರದೇಶ ಹಾಗೂ ಇನ್ನಿತರ ಪ್ರದೇಶಗಳ ವಿದ್ಯಾರ್ಥಿಗಳು ವ್ಯಾಸಂಗ ನಿರತರಾಗಿದ್ದಾರೆ ಎಂದು ಸಂಸ್ಥೆಯ ಸಂಚಾಲಕ ಸವಣೂರು ಕೆ.ಸೀತಾರಾಮ ರೈ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಶೈಕ್ಷಣಿಕ ಮತ್ತು ಶೈಕ್ಷಣಿಕೇತರ ಸೌಲಭ್ಯಗಳು ಅತ್ಯಾಧುನಿಕ ತಂತ್ರಜ್ಞಾನದ ಡ್ರೋನ್, 3ಡಿ ಪ್ರಿಂಟರ್, ಹೊಸತಲೆಮಾರಿನ ದೂರದರ್ಶಕಗಳು ಸಹಿತವಾದ Atal Tinkering Lab ಸ್ಮಾರ್ಟ್ ಬೋರ್ಡ್., ಕೆ.ಜಿ. ವಿಭಾಗದ ಮಕ್ಕಳಿಗಾಗಿ ಅತ್ಯಾಧುನಿಕ ತಂತ್ರಜ್ಞಾನದ, ಅತ್ಯಾಕರ್ಷಕವಾದ Double Doom Building ಮಕ್ಕಳ ಸುಭದ್ರತೆಗಾಗಿ ಎಲ್ಲೆಡೆ ಸಿ.ಸಿ.ಟಿ.ವಿ. ಕ್ಯಾಮರಾಗಳ ಕಣ್ಗಾವಲು. 6ನೇ ತರಗತಿಯಿಂದ ಮೇಲ್ಪಟ್ಟ ಹುಡುಗ ಮತ್ತು ಹುಡುಗಿಯರಿಗಾಗಿ ಸುಸಜ್ಜಿತ ವಸತಿ ನಿಲಯಗಳು. (ಬೇಡಿಕೆಯನ್ನಾಧರಿಸಿ ಪುಟ್ಟ ಮಕ್ಕಳಿಗೂ ಹಾಸ್ಟೆಲ್ ವ್ಯವಸ್ಥೆ) ಸುಸಜ್ಜಿತವಾದ ಆಟದ ಮೈದಾನದೊಂದಿಗೆ ಪುಟಾಣಿ ಮಕ್ಕಳಿಗಾಗಿ ಆಟೋಪಕರಣಗಳು.ಉದ್ಯಾನವನ, ಕಲಿಕಾ ತೋಟ.ಮಕ್ಕಳ ಪ್ರಾಯೋಗಿಕ ಕಲಿಕೆಗಾಗಿ ಕೃಷಿ ತೋಟ. ವಿಶಾಲವಾದ ಮತ್ತು ವ್ಯವಸ್ಥಿತವಾದ ಸಭಾಂಗಣ.
ಬೃಹತ್ ಹೊರಾಂಗಣ ವೇದಿಕೆ.ಶಾಲೆಯ ವಿಶೇಷತೆಗಳಾಗಿದೆ.
10ನೇ ತರಗತಿಯಲ್ಲಿ 15 ಬಾರಿ 100% ಫಲಿತಾಂಶ
ದ್ವಿತೀಯ ಪಿ.ಯು.ಸಿ ವಾಣಿಜ್ಯ ವಿಭಾಗದಲ್ಲಿ 9 ಬಾರಿ ಮತ್ತು ವಿಜ್ಞಾನ ವಿಭಾಗದಲ್ಲಿ 4 ಬಾರಿ 100% ಫಲಿತಾಂಶ. 50mbps ವೇಗದ ಅಂತರ್ಜಾಲ ಸಂಪರ್ಕವಿರುವ ಕಂಪ್ಯೂಟರ್ ಪ್ರಯೋಗಾಲಯಗಳು. ಗೋಡೆಯ ತುಂಬಾ ವರ್ಣಮಯ ವರ್ಲಿ ಚಿತ್ರಗಳ ಮೂಲಕ ಭಾರತೀಯ ಸಂಸ್ಕೃತಿಯ ಪ್ರಸಾರ. ಉಚಿತವಾದ ವಿಜ್ಞಾನ ಪ್ರಯೋಗಾಲಯಗಳ ವ್ಯವಸ್ಥೆ. ಮನಕ್ಕೆ ಮುದ ನೀಡುವ ಕ್ರಿಯಾತ್ಮಕ ರಚನೆಯ ಆವರಣಗೋಡೆ, ಡ್ರೋನ್ ನಿರ್ಮಾಣ ತರಬೇತಿ, ಕಂಪ್ಯೂಟರ್ ಕೋಡಿಂಗ್ ತರಬೇತಿ, ವಿಜ್ಞಾನ ಮಾದರಿ ತಯಾರಿ ತರಬೇತಿ, ಕ್ರಿಯೇಟಿವ್ ಆರ್ಟ್ ತರಬೇತಿ, ಭಾಷಣ ಕಲೆ, ಯೋಗ-ಪ್ರಾಣಾಯಾಮ, Spoken English ತರಬೇತಿಗಳು. ಉಚಿತ ಸಂಸ್ಕೃತ ಕಲಿಕೆ. ಭಜನೆ, ಕರಾಟೆ, ಶಾಸ್ತ್ರೀಯ ಸಂಗೀತ, ವೆಸ್ಟರ್ನ್ ಡ್ಯಾನ್ಸ್ , ವಾಲಿಬಾಲ್ / ತ್ರೋಬಾಲ್ / ಕಬಡ್ಡಿ / ಲಗೋರಿ / ಇತರ ಆಟೋಟಗಳ ತರಬೇತಿಯನ್ನು ನೀಡಲಾಗುತ್ತಿದೆ. ಮೂಲತಃ ಇಂಜಿನಿಯರ್ ಆಗಿರುವ ಅಶ್ವಿನ್ ಎಲ್. ಶೆಟ್ಟಿಯವರು ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ರೋಬೋಟಿಕ್ಸ್, ರಾಕೆಟ್, ಡ್ರೋನ್ ತಂತ್ರಜ್ಞಾನಗಳಲ್ಲಿ ಸಿದ್ಧಹಸ್ತರಾಗಿರುವ ಇವರು, ಇದೀಗ ತನ್ನ ದೂರದರ್ಶಿತ್ವದ ಫಲವಾಗಿ ವಿದ್ಯಾರಶ್ಮಿ ಆವರಣವನ್ನು ಆಧುನೀಕರಣಗೊಳಿಸುತ್ತಾ ನವೀನ ಶಿಕ್ಷಣ ಪದ್ಧತಿಯನ್ನು ಅಳವಡಿಸಿದ್ದಾರೆ ಎಂದು ಸೀತಾರಾಮ ರೈ ತಿಳಿಸಿದರು. ಶಿಕ್ಷಣದಲ್ಲಿ ಹೊಸ ಸಾಧ್ಯತೆಗಳನ್ನು ತೆರೆದಿಡುವ ಪ್ರಯತ್ನ ವನ್ನು ಮಾಡಲು ನಿರಂತರ ಪ್ರಯತ್ನ ಸಂಸ್ಥೆಯಲ್ಲಿ ನಡೆಯುತ್ತದೆ. ಕಲಿಕೆಗೆ ಸಂಬಂಧಿಸಿದಂತೆ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವ ತರಗತಿ, ಲ್ಯಾಬೊರೇಟರಿ, ಸ್ಮಾರ್ಟ್ ಬೋರ್ಡ್, ಅಟಲ್ ಟಿಂಕರಿಂಗ್ ಲ್ಯಾಬ್, ವಸತಿನಿಲಯಗಳು ಆಟದ ಮೈದಾನ, ಮಕ್ಕಳ ಸುಭದ್ರತೆಗಾಗಿ ಎಲ್ಲೆಡೆ ಸಿ ಸಿ ಟಿವಿ ಕ್ಯಾಮರಗಳ ಕಣ್ಗಾವಲು, ಶಾಲಾವಾಹನಗಳನ್ನು ಹೊಂದಿವೆ. ಹತ್ತನೇ ತರಗತಿಯಲ್ಲಿ 15 ಬಾರಿ ಶೇ 100 ಫಲಿತಾಂಶ, ಪಿಯುಸಿ ವಿಭಾಗದ ವಾಣಿಜ್ಯ ವಿಭಾಗದಲ್ಲಿ 10 ಬಾರಿ, ಮತ್ತು ವಿಜ್ಙಾನ ವಿಭಾಗದಲ್ಲಿ 4ಬಾರಿ ಶೇ 100 ಫಲಿತಾಂಶ ಪಡೆದು ಅತ್ಯುತ್ತಮ ಶಿಕ್ಷಣ ಸಂಸ್ಥೆಯೆಂದು ಹೆಸರನ್ನು ಪಡೆದಿದೆ ಎಂದು ಸವಣೂರು ಸೀತಾರಾಮ ರೈ ತಿಳಿಸಿದರು.
ದ.14- ವಾರ್ಷಿಕ ಕ್ರೀಡಾಕೂಟ, ದ.19 ಸಮ್ಮಾನ ರಶ್ಮಿ, ದ.20 ಸಂಭ್ರಮ ರಶ್ಮಿ, ಡಿಸೆಂಬರ್ 14ರಂದು ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ವಾರ್ಷಿಕ ಕ್ರೀಡಾಕೂಟ” ಕ್ರೀಡಾರಶ್ಮಿ” ನಡೆಯಲ್ಲಿದ್ದು, ಮುಖ್ಯ ಅತಿಥಿಯಾಗಿ ಆಂಜನೇಯ ರೆಡ್ಡಿ ಸಬ್ ಇನ್ಸ್ಪೆಕ್ಟರ್ ಇವರು ಭಾಗವಹಿಸಲಿದ್ದಾರೆ.
ದ.19 ಸಮ್ಮಾನ ರಶ್ಮಿ
ಡಿಸೆಂಬರ್ 19ರಂದು ಬೆಳಗ್ಗೆ 9.30 ವಿದ್ಯಾಚೇತನ ಅಡಿಟೋರಿಯಂನಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಅಶ್ವಿನ್ ಎಲ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಸಮ್ಮಾನ ರಶ್ಮಿ ಕಾರ್ಯಕ್ರಮ ನಡೆಯಲಿದೆ.
ಶ್ರೀ ಸುಬ್ರಹ್ಮಣ್ಯೇಶ್ವರ ಪಿ ಯು ಕಾಲೇಜಿನ ಪ್ರಾಂಶುಪಾಲ ಸೋಮಶೇಖರ ನಾಯಕ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಂಸ್ಥೆಯ ಸಂಚಾಲಕ ಸವಣೂರು ಸೀತಾರಾಮ ರೈ, ಎಸ್ ಎನ್ ಆರ್ ರೂರಲ್ ಎಜ್ಯುಕೇಶನ್ ಟ್ರಸ್ಟಿ ಸುಂದರ ರೈ , ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ರಾಮ್ ಪ್ರಸಾದ್ ರೈ ಕಲಾಯಿ ಉಪಸ್ಥಿತರಿರುತ್ತಾರೆ.
ದ.20ಸಂಭ್ರಮ ರಶ್ಮಿ
ದ. ೨೦ರಂದು ಸಂಜೆ 4.30ರಿಂದ ಸಂಭ್ರಮ ರಶ್ಮಿ ಶಾಲಾ ವಾರ್ಷಿಕೋತ್ಸವ ನಡೆಯಲಿದ್ದು ಪುತ್ತೂರು ಎ ಸಿ ಜುಬಿನ್ ಮೊಹಪಾತ್ರ, ಎಸಿಪಿ, ನಝ್ಮ ಫಾರೂಖಿ, ನಿವೃತ್ತ ಪ್ರಾಂಶುಪಾಲರು ಡಾ. ಡಿ ಮಾಧವ್ ಭಟ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಶಾಲಾ ಸಂಚಾಲಕ ಸವಣೂರು ಕೆ. ಸೀತಾರಾಮ ರೈಯವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಶಾಲಾ ಆಡಳಿತಾಧಿಕಾರಿ ಅಶ್ವಿನ್ ಎಲ್ ಶೆಟ್ಟಿ, ಟ್ರಸ್ಟಿ ಮಹೇಶ್ ರೈ ಸವಣೂರು, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸೀತಾರಾಮ ಕೇವಳ, ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲೆ ಶಶಿಕಲಾ ಎಸ್ ಆಳ್ವ ಉಪಸ್ಥಿತರಿದ್ದರು.