ಜ.26: ಕುಂಬ್ರದಲ್ಲಿ ವೈಭವದ ಶ್ರೀರಾಮ ಲೀಲೋತ್ಸವ

0

ಪುತ್ತೂರು: ಸ್ಪಂದನಾ ಸೇವಾ ಬಳಗ ಕುಂಬ್ರ ಇದರ ಆಯೋಜನೆಯಲ್ಲಿ ಪುತ್ತೂರಿನ ಇತಿಹಾಸದಲ್ಲೇ ವಿನೂತನ ಧಾರ್ಮಿಕ ಕಾರ್ಯಕ್ರಮ ‘ ಶ್ರೀ ರಾಮ ಲೀಲೋತ್ಸವ’ ಜ.26 ರಂದು ಕುಂಬ್ರದ ಅಲ್ಲಂಗಾರ್ ಗದ್ದೆಯಲ್ಲಿ ವಿಜೃಂಭಿಸಲಿದೆ.

ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠೆ ವಾರ್ಷಿಕೋತ್ಸವದ ಪ್ರಯುಕ್ತ ಮನೆ ಮನೆಗಳಲ್ಲಿ ರಾಮ ರಾಜ್ಯ ನಿರ್ಮಾಣದ ಕನಸು ನನಸಾಗಿಸುವ ಸಂಕಲ್ಪದೊಂದಿಗೆ ಸನಾತನ ಹಿಂದೂ ಧರ್ಮದ ಆಚಾರ ವಿಚಾರಗಳು ಮತ್ತು ನಂಬಿಕೆಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ‘ನಂಬಿಕೆಗಳು ಮತ್ತು ಅದರ ಅರ್ಥ ವಿವರಣೆ’ಯ ಪುಸ್ತಕ ವಿತರಣೆ ಮತ್ತು ಮೌಲ್ಯಮಾಪನ ಉದ್ದೇಶ ಹೊಂದಿರುವ ‘ಸುಜ್ಞಾನ ದೀಪಿಕೆ’ ಕಾರ್ಯಕ್ರಮ, ಭಜನಾ ತಂಡಗಳಿಂದ ಕುಣಿತ ಭಜನೆಯ ಮೂಲಕ ಶ್ರೀರಾಮ ಸಂಕೀರ್ತನೆಯ ಭಕ್ತಿ ಲಾಸ್ಯ ಅನಾವರಣ ಧರ್ಮ ಜಾಗೃತಿಗಾಗಿ ಧಾರ್ಮಿಕ ಕೇಂದ್ರಗಳ ಮುಖ್ಯಸ್ಥರ ಸಮ್ಮಿಲನ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಅಮೂಲ್ಯ ಸೇವೆಗೈದವರಿಗೆ ಗೌರವಾರ್ಪಣೆ ಇತ್ಯಾದಿ ಕಾರ್ಯಕ್ರಮಗಳು ಶ್ರೀರಾಮ ಲೀಲೋತ್ಸವದಲ್ಲಿ ಮೇಳೈಸಲಿದೆ.


ಕಾರ್ಯಕ್ರಮದ ವಿವರ ಈ ರೀತಿ ಇದೆ:
ಸಂಜೆ 4 ಕ್ಕೆ ಕುಂಬ್ರ ಶ್ರೀ ರಾಮ ಭಜನಾ ಮಂದಿರದಿಂದ ಅಲ್ಲಂಗಾರ್ ಗದ್ದೆ ತನಕ ವೈಭವದ ಶೋಭಾಯಾತ್ರೆ ನಡೆಯಲಿದೆ. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಶೋಭಾಯಾತ್ರೆಗೆ ಚಾಲನೆ ನೀಡಲಿದ್ದಾರೆ. ಬಳಿಕ ಅಲ್ಲಂಗಾರ್ ಗದ್ದೆಯಲ್ಲಿ ದೀಪ ಬೆಳಗಿಸುವ ಮೂಲಕ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರು ಕುಣಿತ ಭಜನೆಗೆ ಚಾಲನೆ ನೀಡಲಿದ್ದಾರೆ. 6 ಗಂಟೆಗೆ ಕುಂಬ್ರ ಮನೆ ದಿ.ತಾರವತಿ ರೈ ವೇದಿಕೆಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಸ್ಪಂದನಾ ಸೇವಾ ಬಳಗದ ಅಧ್ಯಕ್ಷ ರತನ್ ರೈ ಕುಂಬ್ರರವರ ಸಭಾಧ್ಯಕ್ಷತೆಯಲ್ಲಿ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಸಂಸದ ಕ್ಯಾ.ಬ್ರಿಜೇಶ್ ಚೌಟ ಉದ್ಘಾಟಿಸಲಿದ್ದಾರೆ. ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.ವಿಜಯ ಸಾಮ್ರಾಟ್ ಪುತ್ತೂರು ಇದರ ಸ್ಥಾಪಕ ಅಧ್ಯಕ್ಷ ಸಹಜ್ ರೈ ಬಳಜ್ಜರವರು ಶ್ರೀರಾಮನಿಗೆ ಪುಷ್ಪಾರ್ಚನೆ ಮಾಡಲಿದ್ದಾರೆ. ರಾಷ್ಟ್ರೀಯ ಕೃಷಿ ಪ್ರಶಸ್ತಿ, ಚಿನ್ನದ ಪದಕ ಪುರಸ್ಕೃತರಾದ ಕಡಮಜಲು ಸುಭಾಷ್ ರೈಯವರು ಸುಜ್ಞಾನ ದೀಪಿಕೆ ಪುಸ್ತಕ ಅನಾವರಣ ಮಾಡಲಿದ್ದಾರೆ. ಬೆಂಗಳೂರು ಉದ್ಯಮಿ ಕಿಶೋರ್ ಶೆಟ್ಟಿ ಅರಿಯಡ್ಕರವರು ಸುಜ್ಞಾನ ದೀಪಿಕೆ ಪುಸ್ತಕ ಚಾಲನೆ ನೀಡಲಿದ್ದಾರೆ. ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಗೌರವಾರ್ಪಣೆ ಮಾಡಲಿದ್ದಾರೆ. ವಿಧಾನ ಪರಿಷತ್ತು ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿಯವರು ಸನ್ಮಾನ ಕಾರ್ಯಕ್ರಮ ನೆರವೇರಿಸಲಿದ್ದಾರೆ.


ಕಾರ್ಯಕ್ರಮದಲ್ಲಿ ವೈದ್ಯಕೀಯ ಕ್ಷೇತ್ರ ಮತ್ತು ಸಮಾಜ ಸೇವೆಯ ಸಾಧನೆಗಾಗಿ ಪುತ್ತೂರು ಶ್ರೀಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ.ಎಂ.ಕೆ ಪ್ರಸಾದ್ ಮತ್ತು ಧಾರ್ಮಿಕ ಕ್ಷೇತ್ರದ ಸಾಧನೆಗಾಗಿ ಪುತ್ತೂರು ಶ್ರೀ ಕ್ಷೇತ್ರದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯರವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಗೌರವ ಮಾರ್ಗದರ್ಶಕರಾದ ಮಾಜಿ ಶಾಸಕ ಸಂಜೀವ ಮಠಂದೂರು, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಕರಾವಳಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಪ್ರಗತಿಪರ ಕೃಷಿಕ ಯತೀಂದ್ರ ಕೊಚ್ಚಿರವರುಗಳು ಕುಣಿತ ಭಜನಾ ತರಬೇತುದಾರರಿಗೆ ಗೌರವಾರ್ಪಣೆ ನೆರವೇರಿಸಲಿದ್ದಾರೆ.


ಮುಖ್ಯ ಅತಿಥಿಗಳಾಗಿ ಪುತ್ತೂರು ಶ್ರೀ ಕ್ಷೇತ್ರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಕೌಡಿಚ್ಚಾರು ಶ್ರೀ ಕೃಷ್ಣ ಭಜನಾ ಮಂದಿರದ ಗೌರವಾಧ್ಯಕ್ಷ ಗುಂಡ್ಯಡ್ಕ ವಾಸು ಪೂಜಾರಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಕುಂಬ್ರ ದುರ್ಗಾಪ್ರಸಾದ್ ರೈ, ಹಿಂದೂ ಮುಖಂಡ ಮುರಳೀಕೃಷ್ಣ ಹಸಂತಡ್ಕ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿಟ್ರಸ್ಟ್ ಪುತ್ತೂರು ಇದರ ಯೋಜನಾಧಿಕಾರಿ ಶಶಿಧರ ಎಂ, ಪರ್ಪುಂಜ ರಾಮಜಾಲು ಶ್ರೀ ಬ್ರಹ್ಮಬೈದೆರ್ಕಳ ಗರಡಿಯ ಆಡಳಿತ ಮೊಕ್ತೇಸರ ಸಂಜೀವ ಪೂಜಾರಿ ಕೂರೇಲು, ಪೆರಿಗೇರಿ ಉದ್ಯಮಿ ಶ್ರೀನಿವಾಸ ಗೌಡ ಕನ್ನಯ, ಬ್ರೈಟ್ ವೇ ಇಂಡಿಯಾದ ಆಡಳಿತ ನಿರ್ದೇಶಕ ಡಾ.ಹರ್ಷ ಕುಮಾರ್ ರೈ ಮಾಡಾವು, ಉದ್ಯಮಿ ಎಮ್.ಡಿ ವೆಂಕಟೇಶ್ ಹಿಂದಾರು, ಪ್ರಗತಿಪರ ಕೃಷಿಕ ಮನಮೋಹನ್ ರೈ ಕುಂಬ್ರ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರುಮಾರು, ಪುತ್ತೂರು ಅಕ್ಷಯ ಕಾಲೇಜಿನ ಸಂಚಾಲಕ, ಉದ್ಯಮಿ ಜಯಂತ ನಡುಬೈಲ್, ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಬಿಜೆಪಿ ಗ್ರಾಮಾಂತರ ಮಂಡಲ ಮಾಜಿ ಅಧ್ಯಕ್ಷ ರಾಧಾಕೃಷ್ಣ ಆಳ್ವ ಸಾಜ, ಉದ್ಯಮಿ ಹರಿಹರ ಕೋಡಿಬೈಲ್, ಕುಂಬ್ರ ಪ್ರಾ.ಕೃ.ಪ.ಸಹಕಾರ ಸಂಘದ ನಿರ್ದೇಶಕ ವಿನೋದ್ ಶೆಟ್ಟಿ ಅರಿಯಡ್ಕ, ಉಜಿರೆ ಎಸ್‌ಡಿಎಮ್ ಉಪನ್ಯಾಸಕಿ ಹರಿಣಿ ಪುತ್ತೂರಾಯ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ವಿದ್ಯಾ ಆರ್.ಗೌರಿ,ನಿವೃತ್ತ ಸೈನಿಕ ಕಣ್ಣೂರು ಗುತ್ತು ಶ್ರೀನಿವಾಸ ರೈ ಕುಂಬ್ರ, ಆಲಡ್ಕ ಶ್ರೀ ಸದಾಶಿವ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶೀನಪ್ಪ ರೈ ಕೊಡಂಕೀರಿ, ಬೆಂಗಳೂರು ಉದ್ಯಮಿ ಗುರುಪ್ರಸಾದ್ ರೈ ಮೊರಂಗಲ್ಲು, ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯ ಭಾಸ್ಕರ ಬಲ್ಯಾಯ ಮದ್ಲ ಭಾಗವಹಿಸಲಿದ್ದಾರೆ. ಇದಲ್ಲದೆ ಕುಂಬ್ರ ಶ್ರೀ ರಾಮ ಭಜನಾ ಮಂದಿರದ ಅಧ್ಯಕ್ಷ ಮೋನಪ್ಪ ಪೂಜಾರಿ ಬಡಕ್ಕೋಡಿ, ಪ್ರವೀಣ್ ರೈ ಪನೆಕ್ಕಳ ಮಡ್ಯಂಗಳ, ಈಶ್ವರ ನಾಯ್ಕ ಮುಂಡೋವುಮೂಲೆ, ಸತೀಶ್ ಹೆಚ್.ಕೆ ಸ್ವಾಮಿನಗರ, ಜೈಶಂಕರ ರೈ ಬೆದ್ರುಮಾರು ಸನ್ಯಾಸಿಗುಡ್ಡೆ, ಸುಂದರ ಗಾಂಧಿನಗರ ತಿಂಗಳಾಡಿ,ರಮೇಶ್ ಆಳ್ವ ಕಲ್ಲಡ್ಕ ಸದಾಶಿವನಗರ,ಜಯರಾಮ ರೈ ಮಿತ್ರಂಪಾಡಿ ದೇವಗಿರಿ ತಿಂಗಳಾಡಿ, ರವಿಕುಮಾರ್ ಕೌಡಿಚ್ಚಾರು, ಅರುಣ್ ಆಳ್ವ ಬೋಳೋಡಿ ಆಲಡ್ಕ, ರಾಮದಾಸ್ ರೈ ಮದ್ಲ ಕೌಡಿಚ್ಚಾರು, ವಾಸು ಮಣಿಯಾಣಿ ದರ್ಬೆತ್ತಡ್ಕ, ಅಜಿತ್ ಹೊಸಮನೆ ಅಜ್ಜಿಕಲ್ಲು ವಿವಿಧ ಭಜನಾ ಮಂದಿರದ ಅಧ್ಯಕ್ಷರುಗಳು ಭಾಗವಹಿಸಲಿದ್ದಾರೆ.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸ್ಪಂದನಾ ಸೇವಾ ಬಳಗದ ಅಧ್ಯಕ್ಷ ರತನ್ ರೈ ಕುಂಬ್ರ, ಗೌರವಾಧ್ಯಕ್ಷರಾದ ಮೋಹನ್‌ದಾಸ ರೈ ಕುಂಬ್ರ, ವೆಂಕಪ್ಪ ಗೌಡ ಬೊಳ್ಳಾಡಿ, ಮನ್ಮಿತ್ ರೈ ಓಲೆಮುಂಡೋವು, ಪ್ರಧಾನ ಕಾರ್ಯದರ್ಶಿ ಹರೀಶ್ ರೈ ಜಾರತ್ತಾರು, ಕಾರ್ಯಾಧ್ಯಕ್ಷ ಅಶೋಕ್ ತ್ಯಾಗರಾಜನಗರ, ಉಪಾಧ್ಯಕ್ಷರುಗಳಾದ ರಾಜೇಶ್ ರೈ ಪರ್ಪುಂಜ, ಸಂತೋಷ್ ಮಣಿಯಾಣಿ ಕುತ್ಯಾಡಿ, ಉಷಾ ನಾರಾಯಣ್, ಕೋಶಾಧಿಕಾರಿ ಜನಾರ್ದನ ರೈ ಪಡ್ಡಂಬೈಲು, ಕಾರ್ಯದರ್ಶಿಗಳು ಚಂದ್ರ ಇದ್ಪಾಡಿ, ಹರೀಶ್ ಬಿಜತ್ರೆ, ಪುಷ್ಪ ಬೋಳೋಡಿ, ಗೌರವ ಸಲಹೆಗಾರ ಪ್ರಕಾಶ್ಚಂದ್ರ ರೈ ಕೈಕಾರ, ಸುಧಾಕರ ರೈ ಕುಂಬ್ರ, ಹರಿಹರ ಕೋಡಿಬೈಲು, ತಿಲಕ್ ರೈ ಕುತ್ಯಾಡಿ, ನಿತೀಶ್ ಕುಮಾರ್ ಶಾಂತಿವನ, ತ್ರಿವೇಣಿ ಪಲ್ಲತ್ತಾರು, ಸುಂದರ ರೈ ಮಂದಾರ,ಸಂಚಾಲಕರು ಶರತ್ ಗುತ್ತು, ಸುಕುಮಾರ ಮಡ್ಯಂಗಳ, ಮಹೇಶ್ ಕೇರಿ, ಶ್ರೀರಾಮ ಲೀಲೋತ್ಸವ ಸಮಿತಿ ಸಂಚಾಲಕ ಸುಧಾಕರ್ ರೈ ಕುಂಬ್ರ, ಸಹ ಸಂಚಾಲಕ ಉಷಾ ನಾರಾಯಣ್, ಕೋಶಾಧಿಕಾರಿ ಚಂದ್ರ ಇದ್ಪಾಡಿ, ಆರ್ಥಿಕ ಸಮಿತಿ ಸಂಚಾಲಕ ಪ್ರಕಾಶ್ಚಂದ್ರ ರೈ ಕೈಕಾರ, ಕುಣಿತ ಭಜನೆ ನಿರ್ವಹಣ ಸಮಿತಿ ಸಂಚಾಲಕ ಅರುಣ್ ರೈ ಬಿಜಳ, ಮುದ್ರಣ ಸಮಿತಿ ಸಂಚಾಲಕ ಸಂತೋಷ್ ರೈ ಕೈಕಾರ, ಪ್ರಚಾರ ಸಮಿತಿ ಸಂಚಾಲಕ ತಿಲಕ್ ರೈ ಕುತ್ಯಾಡಿ, ವೇದಿಕೆ ಮತ್ತು ವಿದ್ಯುತ್ ಅಲಂಕಾರ ಸಮಿತಿ ಸಂಚಾಲಕ ಚಂದ್ರಕಾಂತ್ ಶಾಂತಿವನ, ಆಲಂಕಾರ ಸಮಿತಿ ಸಂಚಾಲಕ ಪದ್ಮನಾಭ ಗೌಡ ಮುಂಡಾಲ, ಆಹಾರ ಸಮಿತಿ ಸಂಚಾಲಕ ಉದಯ ಕುಂಬ್ರ, ಶೋಭಾಯಾತ್ರೆ ನಿರ್ವಹಣಾ ಸಮಿತಿ ಸಂಚಾಲಕ ಎಸ್.ಮಾಧವ ರೈ ಕುಂಬ್ರ, ಮಹಿಳಾ ಸಮಿತಿ ಸಂಚಾಲಕಿ ತ್ರಿವೇಣಿ ಪಲ್ಲತ್ತಾರು ಹಾಗು ವಿವಿಧ ಸಮಿತಿಗಳ ಪದಾಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here