





ಪಾಣಾಜೆ: ಇಲ್ಲಿನ ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವರ್ಷಾವಧಿ ಉತ್ಸವದ ಅಂಗವಾಗಿ ಶ್ರೀ ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ ಜ. 24 ರಂದು ನಡೆಯಿತು.


ಬೆಳಿಗ್ಗೆ ದೇವರ ಬಲಿ ಹೊರಟು, ದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಂಗಣದಲ್ಲಿ ಪ್ರಸಾದ ವಿತರಣೆ ನಡೆಯಿತು. ಬಳಿಕ ಶ್ರೀ ದೇವರ ಅನ್ನಸಂತರ್ಪಣೆ ಜರಗಿತು. ಆರ್ಲಪದವು ಶ್ರೀ ಕಿನ್ನಿಮಾಣಿ ಪೂಮಾಣಿ ಪಿಲಿಭೂತ ದೈವಸ್ಥಾನದ ಬ್ರಹ್ಮಕಲಶೋತ್ಸವ ಜ. 19, 20 ರಂದು ನಡೆದಿದ್ದು, ಇದೇ ಹಿನ್ನೆಲೆಯಲ್ಲಿ ಶ್ರೀದೇವರ ಜಾತ್ರೋತ್ಸವದ ದಿನವೂ ಭಕ್ತರ ಸಂಖ್ಯೆ ಭಾರೀ ಹೆಚ್ಚಳ ಕಂಡಿತ್ತು.






ಜ. 26 ರಿಂದ ಆರ್ಲಪದವು ಮಾಡದಲ್ಲಿ ಶ್ರೀ ಕಿನ್ಮಿಮಾಣಿ-ಪೂಮಾಣಿ, ಪಿಲಿಭೂತ ದೈವಗಳ ನೇಮೋತ್ಸವವು ನಡೆಯಲಿವೆ.










