ಪುತ್ತೂರು: ಬಾಲಕೃಷ್ಣ ಪೂಜಾರಿ ನಿರಾಲ ಪೆರುವಾಯಿ ಸಾರಥ್ಯದ ಗಯಾಪದ ಕಲಾವಿದೆರ್ ಉಬಾರ್ ಅಭಿನಯದ “ಮುರಳಿ ಈ ಪಿರ ಬರೋಲಿ” ತುಳು ಹಾಸ್ಯಮಯ ನಾಟಕವು ಜ.25ರಂದು ದ.ಕ.ಜಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದೇವಚಳ್ಳ ಎಲಿಮಲೆ ಸುಳ್ಯ ತಾಲೂಕು ಇದರ ಶಾಲಾ ಶತ ಸಮಾರಂಭದಲ್ಲಿ ರಾತ್ರಿ ಗಂಟೆ 11.00 ಕ್ಕೆ ನಡೆಯಲಿದೆ.
ಬಾಲಕೃಷ್ಣ ಪೂಜಾರಿ ನಿರಾಲ, ಪೆರುವಾಯಿ ಸಾರಥ್ಯ ವಹಿಸಿದ್ದಾರೆ. ಶಶಿರಾಜ್ ಕೂಳೂರು ನಿರ್ದೇಶನವನ್ನು ಮಾಡಿದ್ದಾರೆ. ಸಂಗೀತ ಕಾರ್ತಿಕ್ ಶಾಸ್ತ್ರಿ ಮಣಿಲ, ರಾಜೇಶ್ ಶಾಂತಿನಗರ ಇವರ ಸಂಪೂರ್ಣ ಸಲಹೆ ಸಹಕಾರ, ರಂಗ ವಿನ್ಯಾಸದ ವಿಶೇಷ ಪರಿಕಲ್ಪನೆ , ಲಿತು ಸೌಂಡ್ಸ್ ಮತ್ತು ಲೈಟ್ಸ್ ಇದರ ಕೃಷ್ಣ ಮುಂಡ್ಯ, ಸಿದ್ದು ಬೆದ್ರ ಇವರ ಕೈ ಚಳಕ , ಪ್ರದೀಪ್ ಕಾವು ಮತ್ತು ನವ್ಯಾ ರಾಜ್ ಕಲ್ಲಡ್ಕ ಇವರ ಮುಖವರ್ಣಿಕೆಯೊಂದಿಗೆ ಪ್ರದರ್ಶನಗೊಳ್ಳಲಿದೆ.
ಕಲಾವಿದರಾಗಿ ಕಿಶೋರ್ ಜೋಗಿ ಉಬಾರ್, ದಿವಾಕರ್ ಸೂರ್ಯ,ಸತೀಶ್ ಶೆಟ್ಟಿ ಹೆನ್ನಾಳ,ರಂಗಯ್ಯ ಬಲ್ಲಾಳ್ ಕೆದಂಬಾಡಿ ಬೀಡು, ರಾಜೇಶ್ ಶಾಂತಿ ನಗರ, ರಾಜಶೇಖರ ಶಾಂತಿ ನಗರ, ಅನುಷಾ ಜೋಗಿ ಪುರುಷರ ಕಟ್ಟೆ,ಸಂಧ್ಯಾ ಹಿರೇಬಂಡಾಡಿ, ಸುನಿಲ್ ಪೆರ್ನೆ, ಚೇತನ್ ಪಡೀಲ್, ಲಕ್ಷ್ಮಣ ಬೆಳ್ಳಿಪ್ಪಾಡಿ, ಉಷಾ ಲಕ್ಷ್ಮಣ ಬೆಳ್ಳಿಪ್ಪಾಡಿ, ಉದಯ್. ಆರ್.ಪುತ್ತೂರು, ಅನೀಶ್ ಉಬಾರ್ ಅಭಿನಯಿಸಿದ್ದಾರೆ.ಎಂದು ತಂಡದ ಸಂಚಾಲಕ ಕಿಶೋರ್ ಜೋಗಿ ಉಬಾರ್ ಇವರು ತಿಳಿಸಿದ್ದಾರೆ.
ನಾಟಕ ಪ್ರದರ್ಶನದ ಬುಕಿಂಗ್ ಗೆ ಈ ದೂರವಾಣಿ ಸಂಖ್ಯೆ ಯನ್ನು ಸಂಪರ್ಕಿಸಿ. 9902543273,8073641071,9008136330,9980389016