ಉದಯಗಿರಿ ವಿಷ್ಣುಮೂರ್ತಿ ಭಜನಾ ಮಂಡಳಿಗೆ ಆಯ್ಕೆ

0

ಅಧ್ಯಕ್ಷ ಚೇತನ್ ಕುಮಾರ್, ಕಾರ್ಯದರ್ಶಿ ರಾಮ, ಕೋಶಾಧಿಕಾರಿ ಚಂದ್ರಹಾಸ

ಪುತ್ತೂರು:ಮುಂಡೂರು ಗ್ರಾಮದ ಉದಯಗಿರಿ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿಯ ನೂತನ ಅಧ್ಯಕ್ಷರಾಗಿ ಚೇತನ್ ಕುಮಾರ್ ಬೊಲ್ಲಗುಡ್ಡೆ, ಕಾರ್ಯದರ್ಶಿಯಾಗಿ ರಾಮ ದಂಡ್ಯನಕುಕ್ಕು, ಕೋಶಾಧಿಕಾರಿಯಾಗಿ ಚಂದ್ರಹಾಸ ಕೊರುಂಗು ಆಯ್ಕೆಯಾಗಿದ್ದಾರೆ.


ಸಮಿತಿ ಗೌರವ ಸಲಹೆಗಾರರಾಗಿ ಅಕ್ಷಯ ಕಾಲೇಜಿನ ಅಧ್ಯಕ್ಷ ಜಯಂತ ನಡುಬೈಲು ಹಾಗೂ ರೈ ಸರ್ವೀಸಸ್‌ನ ವಸಂತ ರೈ ಶಿಬರ, ಮುಂದಿನ ಐದು ವರ್ಷಗಳ ಅವಧಿಗೆ ಗೌರವಾಧ್ಯಕ್ಷರಾಗಿ ರವೀಂದ್ರನಾಥ ರೈ ಬಳ್ಳಮಜಲುರವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಸಂತೋಷ್ ಶೆಟ್ಟಿ ಪಂಜಳ, ಜತೆ ಕಾರ್ಯದರ್ಶಿಯಾಗಿ ಗಣೇಶ್ ಸುವರ್ಣ ಬೊಲ್ಲಗುಡ್ಡೆರವರು ಆಯ್ಕೆಯಾಗಿದ್ದಾರೆ.


ಉದಯಗಿರಿ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಮುಲಾರ್‌ರವರ ಅಧ್ಯಕ್ಷತೆಯಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿ ದೇವಿದಾಸ್ ಕುರಿಯ ಸ್ವಾಗತಿಸಿ, ಲೆಕ್ಕಪತ್ರ ಮಂಡಿಸಿದರು. ಉಪಾಧ್ಯಕ್ಷ ಗಣೇಶ್ ಸುವರ್ಣ ಬೊಲ್ಲಗುಡ್ಡೆ ವಂದಿಸಿದರು.

LEAVE A REPLY

Please enter your comment!
Please enter your name here