ಅಧ್ಯಕ್ಷರಾಗಿ ಮೋನಪ್ಪ ಮೂಲ್ಯ ಕೆ ಬೊಳಿಕಳ, ಉಪಾಧ್ಯಕ್ಷೆಯಾಗಿ ಕವಿತಾ.ಎಂ ಬೊಳಿಕಳ ಕಾನ ಮನೆ
ಕೆಯ್ಯೂರು :ದ.ಕ. ಜಿ. ಪಂ.ಹಿ.ಪ್ರಾ. ಶಾಲೆ, ಬೊಳಿಕಳ ಇದರ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯನ್ನು ಇತ್ತೀಚೆಗೆ ರಚಿಸಲಾಯಿತು.
ನೂತನ ಅಧ್ಯಕ್ಷರಾಗಿ ಮೋನಪ್ಪ ಮೂಲ್ಯ.ಕೆ, ಉಪಾಧ್ಯಕ್ಷರಾಗಿ ಕವಿತಾ.ಎಂ ಬೊಳಿಕಳ, ಸದಸ್ಯರಾಗಿ ಕೆ. ಲೇಖಾ ಬೊಳಿಕಳ, ಬಾಲಕೃಷ್ಣ ಕೆ ಕಲಾಯಿ, ಪ್ರೇಮ ಪರ್ತ್ಯಡ್ಕ , ಲಲಿತ ಪರ್ತ್ಯಡ್ಕ, ಗಿರಿಜಾ ಬೈಲಮೂಲೆ, ಅಸ್ಮ ಮಾಡಾವು, ಉಮೈಮಾ ಕೆ.ಮಾಡಾವು, ಮೈಮುನಾ ಕಂಚಿನಪದವು, ಅಬ್ದುಲ್ ಖಾದರ್ ಮಾಡಾವು, ಮೋಹಿನಿ ಕುಮಾರಮಂಗಲ, ಜಯರಾಮ ಗೌಡ ಡಿ. ದೇವಳಿಕೆ, ದುಗ್ಗಪ್ಪ ಗೌಡ ಅಂಬಟೆಕೋಡಿ, ಮಮತಾ ಕೆ. ಕುಮಾರಮಂಗಲ, ವಿಶಾಲಾಕ್ಷಿ ಕುಮಾರಮಂಗಲ, ಸುರೇಶ ರೈ ಬಿ.ಕೆ ಮಾಡಾವು ಕಜೆ , ರಾಜೇಶ ಎ ಅಂಬಟೆಕೋಡಿ, ಆಯ್ಕೆಯಾದರು. ಈ ಸಭೆಯಲ್ಲಿ ಶಾಲಾ ಮುಖ್ಯಗುರು ಸೋಮಾವತಿ. ಎ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ನೇತ್ರಾವತಿ.ಎ ಸ್ವಾಗತಿಸಿ. ಶಿಕ್ಷಕಿ ಶೃತಿ ಕೆ.ಎ ಕಾರ್ಯಕ್ರಮವನ್ನು ನಿರೂಪಿಸಿದರು. ಗೌರವ ಶಿಕ್ಷಕ ಪದ್ಮಯ್ಯ. ಪಿ ವಂದನಾರ್ಪಣೆ ಗೈದರು.
ಈ ಸಂದರ್ಭದಲ್ಲಿ ಕೆಯ್ಯೂರು ಗ್ರಾಮ ಪಂಚಾಯತ್ ಸದಸ್ಯರಾದ ತಾರನಾಥ ಕಂಪ, ಸುಭಾಷಿಣಿ ಸಣಂಗಳ,ಶಾಲಾ ಮುಖ್ಯ ಗುರುಗಳು, ಶಿಕ್ಷಕ ವೃಂದ ಹಾಗೂ ಪೋಷಕರು ಉಪಸ್ಥಿತರಿದ್ದರು.