ಐತ್ತೂರು ಗ್ರಾ.ಪಂ ಉದ್ಯೋಗ ಖಾತರಿ ಯೋಜನೆಯ ವಿಶೇಷ ಗ್ರಾಮ ಸಭೆ 

0

ಕಡಬ:ಐತ್ತೂರು ಗ್ರಾಮ ಪಂಚಾಯತ್ 2024-25 ನೇ ಸಾಲಿನ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಹಾಗೂ 15ನೇ ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮ ಸಭೆ ಐತ್ತೂರು ಗ್ರಾ.ಪಂ ರಾಜೀವ್ ಗಾಂಧಿ ಸೇವಾ ಕೇಂದ್ರ ಸಭಾ ಭವನದಲ್ಲಿ ಗ್ರಾ.ಪಂ  ಅಧ್ಯಕ್ಷೆ  ವತ್ಸಲಾ ಜೆ ಅಧ್ಯಕ್ಷತೆಯಲ್ಲಿ  ನಡೆಯಿತು. 

ಸಾಮಾಜಿಕ ಲೆಕ್ಕ ಪರಿಶೋಧನೆಯ ನೋಡೆಲ್ ಅಧಿಕಾರಿಯಾಗಿ ನೂಜಿಬಾಳ್ತಿಲ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಗಣೇಶ್ ಉಪಸ್ಥಿತರಿದ್ದರು. 2024-25ನೇ ಸಾಲಿನ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಪರಿಶೋಧನೆಯ ಅನುಪಾಲನಾ ವರದಿಯನ್ನು ಲೆಕ್ಕ ಪರಿಶೋಧಕರಾದ ಪ್ರಣಮ್ಯ.ಪಿ ವಾಚಿಸಿದರು. ಐತ್ತೂರು ಗ್ರಾ.ಪಂ  ಅಭಿವೃದ್ಧಿ ಅಧಿಕಾರಿ ಸುಜಾತ.ಕೆ ಸ್ವಾಗತಿಸಿ ವಂದಿಸಿದರು. ಗ್ರಾ.ಪಂ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here