ಮಂಗಳೂರು ಸಹಾಯಕ ಸರಕಾರಿ ಅಭಿಯೋಜಕ ಜನಾರ್ದನ್ ಪುತ್ತೂರು ,ಸರಕಾರಿ ಅಭಿಯೋಜಕ ಬದ್ರಿನಾಥ್ ನಾಯರಿ ರವರಿಗೆ ವರ್ಗಾವಣೆ- ಬೀಳ್ಕೊಡುಗೆ ಸಮಾರಂಭ

0

ಪುತ್ತೂರು: ಮಂಗಳೂರಿನ ಪೋಕ್ಸೋ ನ್ಯಾಯಾಲಯದಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರಾಗಿ ಸೇವೆ ಸಲ್ಲಿಸಿ ಹಲವಾರು ಪ್ರಕರಣದಲ್ಲಿ ಆರೋಪಿಗಳಿಗೆ ಕಠಿಣ ಶಿಕ್ಷೆಯ ಜೊತೆಗೆ ಒಂದು ಪ್ರಕರಣದಲ್ಲಿನ ಆರೋಪಿಗೆ ಮರಣ ದಂಡನೆಯ ಶಿಕ್ಷೆಯನ್ನು ವಿಧಿಸಿದ ಪ್ರಕರಣದಲ್ಲಿ ವಾದ ಮಂಡಿಸಿ ಹೆಸರುವಾಸಿಯಾಗಿದ್ದ ಮಂಗಳೂರಿನ ಪೋಕ್ಸೋ ವಿಶೇಷ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕ ಬದರಿನಾಥ್ ನಾಯರಿ ಅವರನ್ನು ಉತ್ತರ ಕನ್ನಡ ಜಿಲ್ಲೆಯ FTSC-1 ಪೋಕ್ಸೋ ವಿಶೇಷ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕರಾಗಿ ವರ್ಗಾವಣೆ ಮಾಡಲಾಗಿರುತ್ತದೆ. 

ಅದೇ ರೀತಿ ಮಂಗಳೂರಿನ ಆರನೇ JMFC ನ್ಯಾಯಾಲಯದಲ್ಲಿ ಸಹಾಯಕ ಸರಕಾರಿ ಅಭಿಯೋಜಕರಾಗಿ ಸೇವೆ ಸಲ್ಲಿಸಿ ಹಲವಾರು ಪ್ರಕರಣಗಳ ಆರೋಪಿಗಳಿಗೆ ಜೈಲು ಶಿಕ್ಷೆ ಕೊಡಿಸುವಲ್ಲಿ ಜನಪ್ರಿಯರಾಗಿದ್ದ ಜನಾರ್ದನ್ ಬಿ ಪುತ್ತೂರುರವರು ಮೈಸೂರಿನ 3 ನೇ ಅಧಿಕ ಸಿ ಜೆ ಯಂ ನ್ಯಾಯಾಲಯಕ್ಕೆ ವರ್ಗಾವಣೆಯಾಗಿದ್ದಾರೆ. 

ಈ ಹಿನ್ನಲೆಯಲ್ಲಿ ಸರಕಾರಿ ಅಭಿಯೋಜಕರ  ಕಚೇರಿ ಮಂಗಳೂರಿನಲ್ಲಿ ಫೆ. 7ರಂದು ಬೀಳ್ಕೊಡುಗೆ ಸಮಾರಂಭ ನಡೆಯಿತು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರಕಾರಿ ಅಭಿಯೋಜಕರಾದ ಜುಡಿತ್ ಓಲ್ಗ ಮಾರ್ಗರೇಟ್ ಕ್ರಾಸ್ತಾ ಇಬ್ಬರನ್ನು ಸನ್ಮಾನಿಸಿ ಮಾತಾಡಿದರು. 

ಸರಕಾರಿ ಅಭಿಯೋಜಕ ಮೋಹನ್ ಕುಮಾರ್ ಅವರು ಇಬ್ಬರು ಅಧಿಕಾರಿಗಳ ಬಗ್ಗೆ ಮಾತನಾಡಿ ಇಬ್ಬರು ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ ಎಂದು ಹೇಳಿ ಶುಭ ಕೋರಿದರು. ಸರಕಾರಿ ಅಭಿಯೋಜಕರಾದ ಚೌದರಿ ಮೋತಿಲಾಲ್, ಜ್ಯೋತಿ ಪ್ರಮೋದ್ ನಾಯಕ್, ಸಹಾಯಕ ಸರ್ಕಾರಿ ಅಭಿಯೋಜಕರಾದ ಗೀತಾ ರೈ, ಮನೋಜ್ ಕುಮಾರ್, ಇಬ್ರಾಹಿಂ ಭಾತಿಷ, ವಿಶೇಷ ಸರ್ಕಾರಿ ಅಭಿಯೋಜಕಿ ಸಹನಾ ದೇವಿ ಮೊದಲಾದವರು ಉಪಸ್ಥಿತರಿದ್ದರು. 

ಕಚೇರಿ ಸಿಬ್ಬಂದಿ ಅನಿಲ್ ಸ್ವಾಗತಿಸಿ ವಂದಿಸಿದರು. ಕಚೇರಿ ಮೇಲ್ವಿಚಾರಕ ರವೀಂದ್ರ ಶೆಟ್ಟಿ  ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here