ಪುತ್ತೂರು: ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜು ಇದರ ಕೊಡಗು ಜಿಲ್ಲಾ ಸಮಿತಿಯ ವತಿಯಿಂದ ಎಜುಕೇಶನ್ ಮೀಟ್-2025 ಕಾರ್ಯಕ್ರಮ ನಡೆಯಿತು. ಮಡಿಕೇರಿ ಪ್ರಸಿದ್ದ ಮೇಕೇರಿ ಮಖಾಂ ಶರೀಫ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಹಾಜಿ ಯಾಮಿನ್ ಮಡಿಕೇರಿ ವಹಿಸಿದ್ದರು.
ಸಂಸ್ಥೆ ಕಳೆದ ಎರಡೂವರೆ ದಶಕಗಳಿಂದೀಚೆಗೆ ಸಾಧಿಸಿದ ಪ್ರಗತಿಗಳ ಬಗ್ಗೆ ಸಂಸ್ಥೆಯ ಉಪಾಧ್ಯಕ್ಷರಾದ ಡಾ.ಎಂಎಸ್ಎಂ ಅಬ್ದುಲ್ ರಶೀದ್ ಝೈನಿ ಮಾಹಿತಿ ನೀಡಿದರು. ಕುಂಬ್ರ ಮರ್ಕಝುಲ್ ಹುದಾದ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ಪ್ರಧಾನ ಕಾರ್ಯದರ್ಶಿ ಬಶೀರ್ ಇಂದ್ರಾಜೆ, ಕೊಡಗು ಸಮಿತಿ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಹೊಸಕೋಟೆ, ಶರೀಫ್, ಹನೀಫ್ ಮುಂತಾದವರು ಉಪಸ್ಥಿತರಿದ್ದರು. ಕೊಡಗು ಜಿಲ್ಲಾ ಸಮಿತಿ ಉಪಾಧ್ಯಕ್ಷ ಮುಹಮ್ಮದ್ ಸಖಾಫಿ ಸ್ವಾಗತಿಸಿದರು.