ಪುತ್ತೂರು:ಕೂಡುರಸ್ತೆ ಸಮಸ್ತ ಕೇರಳ ಸುನ್ನಿ ಸ್ಟೂಡೆಂಟ್ ಫೆಡರೇಶನ್ ಇದರ ಸ್ಥಾಪಕ ದಿನಾಚರಣೆ ಕೂಡುರಸ್ತೆ ಕಛೇರಿಯಲ್ಲಿ ನಡೆಯಿತು.ಕೂಡುರಸ್ತೆ ಖತೀಬರಾದ ಬದ್ರುದ್ದೀನ್ ರಹ್ಮಾನಿ ಉಸ್ತಾದ್ ಪ್ರಾರ್ಥನೆಗೆ ನೇತೃತ್ವ ನೀಡಿ ಸಮಸ್ತ ಹಾಗು ಸಂಘಟನೆಯ ಉದ್ದೇಶಗಳನ್ನು ತಿಳಿಸಿ ಸಬೆಯನ್ನು ಉದ್ಘಾಟಿಸಿದರು.
ಕೂಡುರಸ್ತೆ ಯುನಿಟ್ ಅದ್ಯಕ್ಷರಾದ ಮಜೀದ್ ಬಾಳಾಯ ಧ್ವಜಾರೋಹಣ ಗೈದು ಸಂದೇಶ ಭಾಷಣ ಮಾಡಿದರು. ಕುಂಬ್ರ ವಲಯ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಸುಲ್ತಾನ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಮಾರಂಭದಲ್ಲಿ ದ.ಕ.ಜಿಲ್ಲಾ ಸಂಘಟನಾ ಕಾರ್ಯದರ್ಶಿ ಯಾಸಿರ್ ಅರಾಫತ್ ಕೌಸರಿ , ಕೂಡುರಸ್ತೆ ಜಮಾಅತ್ ಮಾಜಿ ಅದ್ಯಕ್ಷರಾದ ಪಿ. ಕೆ. ಮಹಮ್ಮದ್ , ಇಸ್ಮಾಯಿಲ್ ದರ್ಬೆ , ಜಮಾಅತ್ ಉಪಾದ್ಯಕ್ಷರಾದ ಇಸ್ಮಾಯಿಲ್ ಅಜ್ಜಿಕಲ್ಲು , ವಲಯ ಸಮಿತಿ ಸರ್ಗಲಯ ಚೆಯರ್ಮೇನ್ ನೌಫಲ್ ಅಜ್ಜಿಕಲ್ಲು , ಯುನಿಟ್ ಉಪಾದ್ಯಕ್ಷರಾದ ಹಾರಿಸ್ ದರ್ಬೆ , ಕ್ಲಸ್ಟರ್ ಸಂಘಟನಾ ಕಾರ್ಯದರ್ಶಿ ನೌಷಾದ್ ಕಳಂಜ , ಮಹಮ್ಮದ್ ಹನೀಫ್ ದರ್ಬೆ , ಮಹಮ್ಮದ್ ಆರಿಫ್ , ಯಾಕೂಬ್ ಕೂಡುರಸ್ತೆ , ಮಹಮ್ಮದ್ ಜಂಶೀದ್ , ಪಾಯಿಝ್ ಬಾಳಾಯ ಮುಂತಾದವರು ಉಪಸ್ಥಿತರಿದ್ದರು. ಯುನಿಟ್ ಕಾರ್ಯದರ್ಶಿ ಮಹಮ್ಮದ್ ಅಝರುದ್ದೀನ್ ವಂದಿಸಿದರು.