ಮಾಜಿ ಪ್ರಧಾನಿ ವಾಜಪೇಯಿ ಜನ್ಮ ಶತಾಬ್ಧಿ : ಚಂದ್ರಶೇಖರ್ ರಾವ್ ಬಪ್ಪಳಿಗೆಯವರಿಗೆ ಸನ್ಮಾನ

0

ನಿರೀಕ್ಷೆ ಮಾಡಿದ್ದು ಯಾವುದು ಸಿಗದಿದ್ದರೂ ಪಕ್ಷದಿಂದ ವಿಚಲಿತರಾಗದ ವ್ಯಕ್ತಿ ಚಂದ್ರಣ್ಣ – ವಿಶ್ವೇಶ್ವರ ಭಟ್ ಬಂಗಾರಡ್ಕ


ಪುತ್ತೂರು: ದೇಶದ ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮ ಶತಾಬ್ಧಿಯ ಅಂಗವಾಗಿ ಪುತ್ತೂರು ಬಿಜೆಪಿಯಿಂದ ವಾಜಪೇಯಿಯವರು ಪುತ್ತೂರು ಭೇಟಿ ಕಾರ್ಯಕ್ರಮದಲ್ಲಿ ಭಾಗಹಿಸಿದವರಿಗೆ ಸನ್ಮಾನ ಕಾರ್ಯಕ್ರಮವು ಕಳೆದ ಒಂದು ವಾರದಿಂದ ನಿರಂತರ ನಡೆಯತ್ತಿದ್ದು 1991 ರಲ್ಲಿ ವಾಜಪೇಯಿ ಅವರು ಬರುವ ಸಂದರ್ಭ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿದ್ದ ಪಕ್ಷದ ಹಿರಿಯರಾದ ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ನಿರ್ದೇಶಕ ಚಂದ್ರಶೇಖರ್ ರಾವ್ ಬಪ್ಪಳಿಗೆ ಅವರನ್ನು ಫೆ.22 ರಂದು ಅವರ ನಿವಾಸದಲ್ಲಿ ಸನ್ಮಾನಿಸಲಾಯಿತು.


1991ರಲ್ಲಿ ಪುತ್ತೂರಿನಲ್ಲಿ ಬಿಜೆಪಿ ವತಿಯಿಂದ ನಿಧಿ ಸಂಚಯನ ಕಾರ್ಯಕ್ರಮಕ್ಕೆ ಆಗಮಿಸಿದ್ದ ವಾಜಪೇಯಿ ಅವರನ್ನು ಚಂದ್ರಶೇಖರ್ ಬಪ್ಪಳಿಗೆ ಅವರಿಗೆ ಅಭಿನಂದಿಸುವ ಅವಕಾಶ ಲಭಿಸಿತ್ತು. ಈ ಹಿನ್ನಲೆಯಲ್ಲಿ ಬಿಜೆಪಿಯಿಂದ ಸನ್ಮಾನಿಸಲಾಯಿತು.


ನಿರೀಕ್ಷೆ ಮಾಡಿದ ಯಾವುದು ಸಿಗದಿದ್ದರೂ ಪಕ್ಷದಿಂದ ವಿಚಲಿತರಾಗದ ವ್ಯಕ್ತಿ ಚಂದ್ರಣ್ಣ:
ಪಕ್ಷದ ಹಿರಿಯರಾದ ಬಂಗಾರಡ್ಕ ವಿಶ್ವೇಶ್ವರ ಭಟ್ ಅವರು ಮಾತನಾಡಿ, ವಾಜಪೇಯಿ ಅವರು ಸಾರ್ವಜನಿಕವಾಗಿ ಜನರನ್ನು ಅಕರ್ಷಿಸುವ ಕೇಂದ್ರವಾಗಿದ್ದರು. ಅಡ್ವಾಣಿಯವರು ಹೋರಾಟದ ಮುಂಚೂಣಿಯಲ್ಲಿದ್ದರು. ಇಂತಹ ಸಂದರ್ಭದಲ್ಲಿ ಸಣ್ಣ ಹುಡುಗರಾಗಿದ್ದ ಚಂದ್ರಶೇಖರ್ ಬಪ್ಪಳಿಗೆ ಅವರು ಹಲವು ಹೋರಾಟಪರ ಕಾರ್ಯದಲ್ಲಿ ಭಾಗವಹಿಸಿದರು. ಆದರೆ ಚಂದ್ರಣ್ಣ ಅವರು ಸಣ್ಣ ಪ್ರಾಯ ಹುಡುಗರಾಗಿದ್ದ ಸಂದರ್ಭ ನಿರೀಕ್ಷೆ ಮಾಡಿದ್ದ ಯಾವುದು ಸಿಗದಿದ್ದರೂ ಪಕ್ಷದಿಂದ ವಿಚಲಿತಾಗಿಲ್ಲ. ಹಾಗಾಗಿ ಅವರು ವಂದನಿಯರು ಪಕ್ಷಕ್ಕೆ ವಿರೋಧವಾಗಿ ಹೋಗದೆ ಶ್ಲಾಘನೀಯ ಕೆಲಸ ಮಾಡಿದ್ದಾರೆ. ಪಕ್ಷಕ್ಕೆ ಚಂದ್ರಕೊಟ್ಟ ಸೇವೆ ಗಣನೀಯ ಎಂದರು.


ವಾಜಪೇಯಿ ಅವರು ಮಾತನಾಡಿದ್ದು ನಮಗೆ ವೇದ ವಾಕ್ಯ:
ಸನ್ಮಾನ ಸ್ವೀಕರಿಸಿದ ಚಂದ್ರಶೇಖರ್ ರಾವ್ ಬಪ್ಪಳಿಗೆ ಅವರು ಮಾತನಾಡಿ, ಎಳೆ ವಯಸ್ಸಿನಲ್ಲೇ ಪಕ್ಷದ ಕೆಲಸ ಮಾಡುತ್ತಾ ಮಾಡುತ್ತಾ ಹೋರಾಟ ಬಂತು. ಎಲ್ಲಾ ಹೋರಾಟದಲ್ಲೂ ಭಾಗವಹಿಸಿದೆವು. ವಾಜಪೇಯಿ ಎನೂ ಹೇಳಿದರೂ ನಮಗೆ ವೇದ ವಾಕ್ಯ ಎಂದ ಅವರು ಹಲವು ಹೋರಾಟದ ಕಥನವನ್ನು ತಿಳಿಸಿದರು.

ಈ ಸಂದರ್ಭ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷ ಸಾಜರಾಧಕೃಷ್ಣ ಆಳ್ವ, ನಗರಮಂಡಲದ ಅಧ್ಯಕ್ಷ ಶಿವಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ನಾಗೇಶ್ ಪ್ರಭು, ಅನಿಲ್ ತೆಂಕಿಲ, ಹಿರಿಯರಾದ ಎಸ್ ಅಪ್ಪಯ್ಯ ಮಣಿಯಾಣಿ, ಬಿಜೆಪಿ ಮಂಗಳೂರು ವಿಭಾಗ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ, ನಗರಸಭಾ ಸದಸ್ಯರಾದ ಜೀವಂಧರ್ ಜೈನ್, ವಿದ್ಯಾ ಗೌರಿ, ಪಿ ಜಿ ಜಗನ್ನಿವಾಸ ರಾವ್, ಗೌರಿ ಬನ್ನೂರು, ಮಾಜಿ ಪುರಸಭೆ ಅಧ್ಯಕ್ಷರಾದ ರಾಜೇಶ್ ಬನ್ನೂರು, ಯು ಲೋಕೇಶ್ ಹೆಗ್ಡೆ, ಬಿಜೆಪಿ ಪ್ರಮುಖರಾದ ಶಶಿಧರ್ ನಾಯಕ್, ನಾಗೇಂದ್ರ ಬಾಳಿಗ, ಜಿಲ್ಲಾಯುವ ಮೋರ್ಚಾ ಕಾರ್ಯದರ್ಶಿ ವಿರೂಪಾಕ್ಷ ಭಟ್ ಮಚ್ಚಿಮಲೆ, ಕಿರಣ್ ಶಂಕರ್ ಮಲ್ಯ, ಸತೀಶ್ ನಾಕ್, ಉದಯ ಹೆಚ್, ಅಭಿಜೀತ್ ಕೊಡಿಪ್ಪಾಡಿ, ಹರಿಪ್ರಸಾದ್ ಯಾದವ್, ಪುತ್ತೂರು ಟೌನ್ ಬ್ಯಾಂಕ್ ಉಪಧ್ಯಾಕ್ಷ ಶ್ರೀಧರ್ ಕಣಜಾಲು, ನಿರ್ದೇಶಕರಾದ ಕಿರಣ್ ಬಲ್ನಾಡು, ಗಣೇಶ್ ಕೌಕ್ರಾಡಿ, ಶ್ರೀಧರ ಪಟ್ಲ, ಮಾಜಿ ಉಪಾಧ್ಯಕ್ಷ ವಿಶ್ವಾಸ್ ಶೆಣೈ, ಹೇಮಾವತಿ, ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕಿ ಜಯಶ್ರೀ ಎಸ್ ಶೆಟ್ಟಿ, ಪಕ್ಷದ ಪ್ರಮುಖರಾದ ಅಶೋಕ್, ನಿರಂಜನ, ಪುಷ್ಪಾ ಕೌಕ್ರಾಡಿ, ರಾಧಾಕೃಷ್ಣ ನಂದಿಲ, ಹಲವಾರು ಮಂದಿ ಉಪಸ್ಥಿತರಿದ್ದರು. ವಾಜಪೇಯಿ ಜನ್ಮಶತಾಬ್ದಿ ಕಾರ್ಯಕ್ರಮ ಸಂಚಾಲಕ ಯುವರಾಜ್ ಪೆರಿಯತ್ತೋಡಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here