ಪುತ್ತೂರು: ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು, ದ.ಕ.ಜಿಲ್ಲೆ, ಪುತ್ತೂರು ತಾಲೂಕು ಘಟಕದ ವತಿಯಿಂದ ಮಾ.15ರಂದು ಗಮಕ ವಾಚನ- ವ್ಯಾಖ್ಯಾನ ಕಾರ್ಯಕ್ರಮ ಸಂಪ್ಯದಲ್ಲಿರುವ ಆನಂದಾಶ್ರಮದಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಕುಮಾರವ್ಯಾಸ ಕವಿಯ ಕರ್ನಾಟ ಭಾರತದಿಂದ ಆಯ್ದ “ಕರ್ಣ ಭೇದನ” ಎಂಬ ಕಥಾಭಾಗವನ್ನು ಪ್ರಸ್ತುತಪಡಿಸಿದರು.

ಗಮಕಿ ಕರ್ನಾಟಕ ಗಮಕ ಕಲಾ ಪರಿಷತ್ತು(ರಿ) ಬೆಂಗಳೂರು ಪೂರ್ವಾಧ್ಯಕ್ಷೆ ಗಂಗಮ್ಮ ಕೇಶವಮೂರ್ತಿ ಇವರು ಗಮಕ ವಾಚನಗೈದರು.ಬಿಲ್ಲಂಪದವು ನಿವೃತ್ತ ಪ್ರಾಂಶುಪಾಲ ಪ್ರೊ. ಮಹಾಲಿಂಗ ಭಟ್ ವ್ಯಾಖ್ಯಾನವನ್ನು ನಡೆಸಿಕೊಟ್ಟರು.
ಘಟಕದ ಅಧ್ಯಕ್ಷ ಪ್ರೊ. ವೇದವ್ಯಾಸ ರಾಮಕುಂಜ ಸ್ವಾಗತಿಸಿ, ಕಲಾವಿದರನ್ನು ಪರಿಚಯಿಸಿ, ವಂದಿಸಿದರು. ಆನಂದಾಶ್ರಮ ಟ್ರಸ್ಟ್ ಸಂಚಾಲಕ ಸದಾಶಿವ ಪೈ ಕಲಾವಿದರನ್ನು ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು.

ಘಟಕದ ಕಾರ್ಯದರ್ಶಿ ಶಂಕರಿ ಶರ್ಮ, ಸಹಕಾರ್ಯದರ್ಶಿ ಸುಮನಾ ರಾವ್, ಸದಸ್ಯರಾದ ಪ್ರೇಮಾ ನೂರಿತ್ತಾಯ, ಜಯಲಕ್ಷ್ಮಿ ವಿ.ಭಟ್, ಭವಾನಿ ಶಂಕರ ಶೆಟ್ಟಿ, ಕುl ಸುಪ್ರಜಾ ರಾವ್, ದ.ಕ.ಜಿಲ್ಲಾ ಸಂಸ್ಕಾರ ಭಾರತಿಯ ಗಮಕ ಪ್ರಮುಖರಾದ ಡಾl ವಾರಿಜ, ಆಶ್ರಮ ನಿವಾಸಿಗಳು, ಸ್ವಯಂಸೇವಕರು ಹಾಗೂ ಊರ ಮಹನೀಯರು ಉಪಸ್ಥಿತರಿದ್ದರು.