ಅಕ್ಷಯ(ಗ್ಲೋರಿಯಾ)ಕಾಲೇಜಿನ ಹಳೇ ವಿದ್ಯಾರ್ಥಿ ಸಂಘದ ಉದ್ಘಾಟನೆ

0

ಪುತ್ತೂರು:ಅಕ್ಷಯ(ಗ್ಲೋರಿಯಾ)ಕಾಲೇಜಿನ ಹಳೇ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.ನೂತನ  ಹಳೇ  ವಿದ್ಯಾರ್ಥಿ ಸಂಘದ  ಅಧ್ಯಕ್ಷರಾಗಿ ಪ್ರಶಾಂತ್  ಪೂವಾಜೆ,ಉಪಾಧ್ಯಕ್ಷರಾಗಿ ಸ್ವರೂಪ್  ರೈ,  ಚಂದ್ರಹಾಸ  ಕಿಲಾರ್  ಕಜೆ  ಮತ್ತು ವೀಣಾ  ಬಿ. ಕೆ, ಪ್ರಧಾನ  ಕಾರ್ಯದರ್ಶಿಯಾಗಿ  ಮೊನಿಶಾ ಕೆ., ಜತೆ ಕಾರ್ಯದರ್ಶಿಯಾಗಿ  ಲಿಖಿತ್  ಎ. ವಿ  ಮತ್ತು  ನಿಸ್ಮಿತ ಶೆಟ್ಟಿ, ಹಾಗೂ ಕೋಶಾಧಿಕಾರಿಯಾಗಿ  ಶಮಂತ್ ಕೊಲ್ಯ ಆಯ್ಕೆಯಾದರು.

ಹಳೇ ವಿದ್ಯಾರ್ಥಿ ಸಂಘದ ಉದ್ಘಾಟನೆಯನ್ನು ಪೂರ್ವ ವಿದ್ಯಾರ್ಥಿ ಚಂದ್ರಶೇಖರ ಕಿಲಾರ್ ಕಜೆ ನಿರ್ವಹಿಸಿ ಮಾತನಾಡಿ,  ಅಕ್ಷಯ ಕಾಲೇಜ್  ತನ್ನ ಪೂರ್ವದಲ್ಲಿ  ದಿ. ಆನಂದ ಆಚಾರ್ಯ  ಅವರು ಸ್ಥಾಪಿಸಿದ ಗ್ಲೋರಿಯಾ ಎಂಬ ಸಂಸ್ಥೆಯನ್ನು ಮುನ್ನಡೆಸಿದ ಮತ್ತು ಕಟ್ಟಿ  ಬೆಳೆಸಿದ ಕೀರ್ತಿ ಜಯಂತ್  ನಡುಬೈಲ್  ಅವರಿಗೆ ಸಲ್ಲುತ್ತದೆ . ಪುತ್ತೂರಿನಲ್ಲಿ  ವಿದ್ಯಾಭ್ಯಾಸ  ಕ್ಷೇತ್ರಕ್ಕೆ ದಿ. ಆನಂದ ಆಚಾರ್ಯ ಕೊಟ್ಟ  ಕೊಡುಗೆ,ಅವರ ನೆನಪು ಮತ್ತು  ಸಾಧನೆ  ಸದಾ  ಜೀವಂತವಾಗಿದೆ. ಹಳೇ  ವಿದ್ಯಾರ್ಥಿ ಸಂಘ  ಮುಂದಿನ  ಯುವ ಪೀಳಿಗೆಗೆ  ಸಹಕಾರ  ಕೊಟ್ಟು ಮಾರ್ಗದರ್ಶಿಯಾಗಲಿದೆ ಎಂದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಮೊನೀಶಾ  ಹಳೇ  ವಿದ್ಯಾರ್ಥಿ ಸಂಘದ  ಸ್ಥಾಪನೆ  ಒಂದು ಮೈಲಿಗಲ್ಲು  ಆಗಲಿದೆ.  ಮುಂದಿನ ದಿನಗಳಲ್ಲಿ  ಅಕ್ಷಯ ಕಾಲೇಜ್ ಶಿಕ್ಷಣ ಕ್ಷೇತ್ರದಲ್ಲಿ   ಕ್ರಾಂತಿಯನ್ನು  ನಿರ್ಮಿಸಲಿದೆ  ಅದಕ್ಕೆ  ಹಳೇ ವಿದ್ಯಾರ್ಥಿ ಸಂಘವು  ಧನಾತ್ಮಕವಾಗಿ  ಕಾರ್ಯ ನಿರ್ವಹಿಸಲಿದೆ ಎಂದರು.

 ಮುಖ್ಯ ಅತಿಥಿ  ಪೂರ್ವ ವಿದ್ಯಾರ್ಥಿ ಶಮಂತ್ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಗಳಿಗೆ ಚಿರಋಣಿ  ಹೊಂದಿದ್ದಾರೆ , ತಮ್ಮ ಜೀವನದ  ಮೌಲ್ಯಗಳನ್ನು, ಲಕ್ಷ್ಯ ಗಳನ್ನು ನಿರ್ಣಯಿಸುವಲ್ಲಿ  ಶಿಕ್ಷಣ ಸಂಸ್ಥೆಗಳ  ಮೂಲಕ ಉಪನ್ಯಾಸಕರ ಮಾರ್ಗದರ್ಶನ ಅವಿಸ್ಮರಣೀಯ. ಈ  ನಿಟ್ಟಿನಲ್ಲಿ  ಹಳೇ ವಿದ್ಯಾರ್ಥಿಗಳ ಒಕ್ಕೂಟ ವು  ಸಂಸ್ಥೆಯ ಯಶಸ್ವಿಗೆ ಬದ್ಧವಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಅಧ್ಯಕ್ಷ ಜಯಂತ್  ನಡುಬೈಲ್  ಮಾತನಾಡಿ, ಹಳೆ  ವಿದ್ಯಾರ್ಥಿ ಸಂಘವು   ಶಿಕ್ಷಣ ಸಂಸ್ಥೆಯ ಅವಿಭಾಜ್ಯ ಅಂಗ ಮಾತ್ರವಲ್ಲ  ಸಂಸ್ಥೆಯ ಯಶಸ್ವಿಗೆ ಮತ್ತು  ಕೀರ್ತಿಯನ್ನು  ಉತ್ತುಂಗಕ್ಕೆ ತಲುಪಿಸುವ ನಿಟ್ಟಿನಲ್ಲಿ ನಿರ್ಣಾಯಕ ಪಾತ್ರ  ವಹಿಸಲಿದ್ದಾರೆ.  ಸಂಸ್ಥೆ  ಹಳೇ  ವಿದ್ಯಾರ್ಥಿಗಳಿಗೆ ವೇದಿಕೆಯನ್ನು  ನಿರ್ಮಿಸಿದೆ. ಸಂಘದ ನಿಕಟ ಪೂರ್ವ  ಬಾಂಧವ್ಯ ಹೊಸ ತಲೆಮಾರಿಗೆ  ಮಾರ್ಗದರ್ಶನವಾಗಲಿ ಎಂದು ಹಾರೈಸಿದರು. 

ಪ್ರಾಂಶುಪಾಲ ಸಂಪತ್ ಕೆ ಪಕ್ಕಳ ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಹಳೇ ವಿದ್ಯಾರ್ಥಿಗಳಿಗೆ  ತಮ್ಮ  ಸಂಸ್ಥೆಯ ಸಂಬಂಧ , ನಿಕಟ ಬಾಂಧವ್ಯ  ಬೆಳೆಯಲು ಹಳೇ ವಿದ್ಯಾರ್ಥಿಗಳ ಸಂಘದಿಂದ  ಮಾತ್ರ ಸಾಧ್ಯ.   ಅಕ್ಷಯ ಕಾಲೇಜ್ ಪೂರ್ವ ವಿದ್ಯಾರ್ಥಿಗಳಿಗೆ  ವೇದಿಕೆಯನ್ನು  ಒದಗಿಸಿದೆ   . ಮುಂದಿನ  ದಿನಗಳಲ್ಲಿ ಸಾಕಷ್ಟು ಅವಕಾಶಗಳು  ಸಂಸ್ಥೆಯ ಮತ್ತು  ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಲ್ಲಿ ಹೊಸ  ಅಧ್ಯಾಯ ಸೃಷ್ಟಿ ಯಾಗಲಿದೆ  ಎಂದು ಅಭಿಪ್ರಾಯಪಟ್ಟರು. 

ಆಡಳಿತಾಧಿಕಾರಿ ಅರ್ಪಿತ್   ಟಿ.  ಎ ಮಾತನಾಡಿ, ಸಂಸ್ಥೆಯು ಬೆಳೆಯಲು ಹಳೇ ವಿದ್ಯಾರ್ಥಿಗಳ  ಒಕ್ಕೂಟದ  ಸಹಕಾರ  ಅತ್ಯಗತ್ಯ,ತಮ್ಮ  ಮಾತೃ ಸಂಸ್ಥೆಯಿಂದ  ಪದವಿ ಪಡೆದು ಹೊರ ಬರುವ ವಿದ್ಯಾರ್ಥಿಗಳಿಗೆ ಉದ್ಯೋಗ ಗಿಟ್ಟಿಸುವಲ್ಲಿ ಹಳೇ ವಿದ್ಯಾರ್ಥಿಗಳು ಶ್ರಮವಹಿಸಬೇಕು ಆ ಮೂಲಕ ತಮ್ಮ ಸಂಸ್ಥೆಯ ಮುಂಬರುವ  ವಿದ್ಯಾರ್ಥಿಗಳಿಗೆ  ಪ್ರೇರಣೆ ಮತ್ತು ಜೀವನದ ದಾರಿ ದೀಪ ವಾಗಬೇಕು ಎಂದರು.

ಆಡಳಿತ ನಿರ್ದೇಶಕಿ ಕಲಾವತಿ ಜಯಂತ್ ಉಪಸ್ಥಿತರಿದ್ದರು. ಉಪ ಪ್ರಾಂಶುಪಾಲ  ರಕ್ಷಣ್ ಟಿ ಆರ್  ಸ್ವಾಗತಿಸಿ,  ನೂತನ ಹಳೇ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಮೊನೀಷಾ ವಂದಿಸಿದರು. ಪ್ರಕೃತಿ ಪ್ರಾರ್ಥನೆ ಹಾಡಿದರು. ಬಿ ಎಚ್ ಎಸ್ ವಿಭಾಗದ ಉಪನ್ಯಾಸಕಿ ಶ್ರುತ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ  ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.  

LEAVE A REPLY

Please enter your comment!
Please enter your name here