ಪುತ್ತೂರು ಮುಳಿಯ ಕೇಶವ ಭಟ್ & ಸನ್ಸ್ ಜ್ಯುವೆಲ್ಸ್‌ನಲ್ಲಿ ಡೈಮಂಡ್ ಫೆಸ್ಟ್
ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಮಂದಿರದ ಸಭಾಭವನದಲ್ಲಿ ಬೆಳಿಗ್ಗೆ ೧೦ಕ್ಕೆ ಪುತ್ತೂರು ತಾಲೂಕು ಸ್ತ್ರೀ-ಶಕ್ತಿ ಬ್ಲಾಕ್ ಸೊಸೈಟಿಯ ವಾರ್ಷಿಕ ಮಹಾಸಭೆ
ಪುತ್ತೂರು ಚತನಾ ಆಸ್ಪತ್ರೆಯಲ್ಲಿ ಬೆಳಿಗ್ಗೆ ೯.೩೦ರಿಂದ ಥೈರಾಯಿಡ್ ಗ್ರಂಥಿಯ, ಕೊಲೆಸ್ಟ್ರಾಲ್ ಉಚಿತ ತಪಾಸಣಾ ಶಿಬಿರ
ಕಲ್ಲಾರೆ ಶ್ರೀ ಗುರು ರಾಘವೇಂದ್ರ ಮಠದಲ್ಲಿ ನವ್ಯಶ್ರೀ ಮಹಿಳಾ ಮಂಡಲ, ಪುತ್ತೂರು ವಿಶ್ವಹಿಂದು ಪರಿಷತ್ ಮಾತೃ ಶಕ್ತಿ ದುರ್ಗಾವಾಹಿನಿ ವತಿಯಿಂದ ಸಂಜೆ ೪ರಿಂದ ಸಾಮೂಹಿಕ ಶ್ರೀ ಸಂಕಷ್ಟ ಚತುರ್ಥಿ ವ್ರತ ಕಲ್ಪೋಕ್ತ ಪೂಜೆ
ಮೊಟ್ಟೆತ್ತಡ್ಕ ಮಜಲು ಸ್ವಾಮಿ ಕೊರಗಜ್ಜ, ಅಗ್ನಿ ಕಲ್ಲುರ್ಟಿ ದೈವಸ್ಥಾನದಲ್ಲಿ ಬೆಳಿಗ್ಗೆ ೬ರಿಂದ ಗಣಹೋಮ, ಕಲಶಾಭಿಷೇಕ, ದೈವಗಳಿಗೆ ತಂಬಿಲ, ಸಂಜೆ ೬.೩೦ಕ್ಕೆ ಚೌಕಿ ಪೂಜೆ, ದೈವಗಳಿಗೆ ಎಣ್ಣೆ ಕೊಡುವುದು, ೭ರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ, ಅಗ್ನಿ ಸೇವೆ, ಸಾರ್ವಜನಿಕ ಅನ್ನಸಂತರ್ಪಣೆ, ನೇಮೋತ್ಸವ
ದರ್ಬೆ ಕಲ್ಲಗುಡ್ಡೆಯಲ್ಲಿ ಚಂದ್ರಶೇಖರ ಮತ್ತು ಮನೆಯವರಿಂದ ಸಂಜೆ ೫.೩೦ಕ್ಕೆ ೭ನೇ ವರ್ಷದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಸೇವೆ
ಉಪ್ಪಿನಂಗಡಿ ಗ್ರಾ.ಪಂ ಕಚೇರಿ ಸಭಾಂಗಣದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಗ್ರಾಮಸಭೆ
ಆಲಂಕಾರು ಗ್ರಾ.ಪಂ ಕಚೇರಿ ಸಭಾಂಗಣದಲ್ಲಿ ಬೆಳಿಗ್ಗೆ ೧೧ಕ್ಕೆ ಸಾಮಾನ್ಯ ಸಭೆ
ನೆಹರುನಗರ ವಿವೇಕಾನಂದ ಕಾಲೇಜಿನಲ್ಲಿ ಅಂತರ್ ವಿಶ್ವವಿದ್ಯಾನಿಲಯ ಮಟ್ಟದ ಸಾಹಿತ್ಯ, ಸಾಂಸ್ಕೃತಿಕ ಸ್ಪರ್ಧೆ
ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬೆಳಿಗ್ಗೆ ೭ರಿಂದ ಬಲಿ ಹೊರಟು ಉತ್ಸವ, ಮಧ್ಯಾಹ್ನ ೧೨ರಿಂದ ಮಹಾಪೂಜೆ, ಸಂಜೆ ೬.೩೦ರಿಂದ ಬಲಿ ಹೊರಟು ಉತ್ಸವ, ವಸಂತ ಕಟ್ಟೆ ಪೂಜೆ, ಮಹಾಪೂಜೆ, ಭೂತಬಲಿ
ಸವಣೂರು ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬೆಳಿಗ್ಗೆ ೧೦ಕ್ಕೆ ಪ್ರತಿಷ್ಠಾ ವಾರ್ಷಿಕೋತ್ಸವ, ಜಾತ್ರೋತ್ಸವದ ಗೊನೆ ಮುಹೂರ್ತ
ಎರುಂಬು ಸಿಂಹಮೂಲೆ ಬೊಳ್ನಾಡು ಶ್ರೀ ಚೀರುಂಭ ಭಗವತಿ ಕ್ಷೇತ್ರದಲ್ಲಿ ಬೆಳಿಗ್ಗೆ ೯.೧೫ಕ್ಕೆ ಭರಣಿ ಮಹೋತ್ಸವದ ಗೊನೆ ಮುಹೂರ್ತ
ಬೆಂಗಳೂರು ಸಂಜಯನಗರ ಆರ್.ಎಂ.ವಿ. ೨ನೇ ಹಂತ, ೧೨ನೇ ಅಡ್ಡರಸ್ತೆ ಸದಾಸ್ಮಿತ ಸ್ವಗೃಹದಲ್ಲಿ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡರ ಹುಟ್ಟು ಹಬ್ಬ ಆಚರಣೆ