puttur: ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿಶ್ವ ಯೋಗ ದಿನಾಚರಣೆ ಜೂನ್ 26ರಂದು ಆಚರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಯೋಗ ಶಿಕ್ಷಕಿ ಶರಾವತಿ ಅವರು ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಯೋಗದ ಮಹತ್ವವನ್ನು ವಿವರಿಸಿ, ಈ ವರ್ಷದ ಯೋಗ ಥೀಮ್ನ ಆಧಾರದಲ್ಲಿ ವಿವಿಧ ಯೋಗಾಸನಗಳ ಅಭ್ಯಾಸವನ್ನು ಮಾಡಿಸಿದರು. ಅವರು ಯೋಗದ ದೈನಂದಿನ ಅನುಷ್ಠಾನದಿಂದ ಉಂಟಾಗುವ ಶಾರೀರಿಕ ಹಾಗೂ ಮಾನಸಿಕ ಲಾಭಗಳನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಡಾ. ಶೋಭಿತ ಸತೀಶ್ ಅವರು ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕಿ ರಾಜೀವಿ .ಬಿ ಸ್ವಾಗತಿಸಿದರು.