ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯ: ವಿಶ್ವ ಯೋಗ ದಿನಾಚರಣೆ

0

puttur: ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿಶ್ವ ಯೋಗ ದಿನಾಚರಣೆ ಜೂನ್ 26ರಂದು ಆಚರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಯೋಗ ಶಿಕ್ಷಕಿ ಶರಾವತಿ ಅವರು ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಯೋಗದ ಮಹತ್ವವನ್ನು ವಿವರಿಸಿ, ಈ ವರ್ಷದ ಯೋಗ ಥೀಮ್‌ನ ಆಧಾರದಲ್ಲಿ ವಿವಿಧ ಯೋಗಾಸನಗಳ ಅಭ್ಯಾಸವನ್ನು ಮಾಡಿಸಿದರು. ಅವರು ಯೋಗದ ದೈನಂದಿನ ಅನುಷ್ಠಾನದಿಂದ ಉಂಟಾಗುವ ಶಾರೀರಿಕ ಹಾಗೂ ಮಾನಸಿಕ ಲಾಭಗಳನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಡಾ. ಶೋಭಿತ ಸತೀಶ್ ಅವರು ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕಿ ರಾಜೀವಿ .ಬಿ ಸ್ವಾಗತಿಸಿದರು.

LEAVE A REPLY

Please enter your comment!
Please enter your name here