ಪುತ್ತೂರು ಮುಳಿಯ ಗೋಲ್ಡ್ & ಡೈಮಂಡ್ಸ್ನಲ್ಲಿ ಎಕ್ಸ್ಚೇಂಜ್ ಮೇಳ
ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಬೆಳಿಗ್ಗೆ ೧೦ಕ್ಕೆ ಪೆರ್ಲಂಪಾಡಿ ಜಂಕ್ಷನ್, ಮಧ್ಯಾಹ್ನ ೧೨ಕ್ಕೆ ಕೌಡಿಚ್ಚಾರ್, ಅಪರಾಹ್ನ ೩ಕ್ಕೆ ಈಶ್ವರಮಂಗಲ, ಸಂಜೆ ೫ಕ್ಕೆ ಸುಳ್ಯಪದವು ಜಂಕ್ಷನ್ನಲ್ಲಿ ಬಿಜೆಪಿ ಸುಳ್ಳುಗಾರರಿಗೆ ಉತ್ತರ-ವಲಯ ಭೇಟಿ ಜನಜಾಗೃತಿ ಸಭೆ
೩೪ನೇ ನೆಕ್ಕಿಲಾಡಿ ಗ್ರಾ.ಪಂ ಕಚೇರಿಯಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಮಹಿಳಾ ವಿಶೇಷ ಗ್ರಾಮಸಭೆ
ಐತ್ತೂರು ಗ್ರಾ.ಪಂ ಕಚೇರಿಯಲ್ಲಿ ಬೆಳಿಗ್ಗೆ ೧೧.೩೦ಕ್ಕೆ ಸಾಮಾನ್ಯ ಸಭೆ
ಪುತ್ತೂರು ಶ್ರೀ ಲಕ್ಷ್ಮೀವೆಂಕಟ್ರಮಣ ದೇವಸ್ಥಾನದ ಶ್ರೀ ಸುಕೃತೀಂದ್ರ ಕಲಾ ಮಂದಿರದಲ್ಲಿ ಸಂಜೆ ೪ಕ್ಕೆ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ಉಜಿರೆ ವತಿಯಿಂದ ಯಕ್ಷಗಾನ ತಾಳಮದ್ದಳೆ sಸಪ್ತಾಹ, ಕುರಿಯ ಪ್ರಶಸ್ತಿ ಪ್ರದಾನ ಉದ್ಘಾಟನೆ, ತರಣಿಸೇನ ಕಾಳಗ ತಾಳಮದ್ದಳೆ
ದರ್ಬೆ ಸಂತ ಫಿಲೋಮಿನಾ ಕಾಲೇಜು ಹಿರಿಯ ವಿದ್ಯಾರ್ಥಿ ಗಣೇಶೋತ್ಸವ ಸೇವಾ ಟ್ರಸ್ಟ್, ಫಿಲೋಮಿನಾ ಕಾಲೇಜು ಹಿರಿಯ ವಿದ್ಯಾರ್ಥಿ ಉತ್ಸವ ಸಮಿತಿಯಿಂದ ಬೆಳಿಗ್ಗೆ ಪರ್ಲಡ್ಕ ಏಕದಂತ ವಠಾರದಲ್ಲಿ ಫಿಲೋ ಗಣಪನ ವಿಗ್ರಹ ಮುಹೂರ್ತ
ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಕೇಂದ್ರ ಕಚೇರಿಯ ಸಂಗಮ ಕೃಪಾ ಸಭಾಭವನದಲ್ಲಿ ಸಂಜೆ ೫.೩೦ರಿಂದ ಯೋಗ ತರಬೇತಿ ಶಿಬಿರ
ಮಾಣಿಲ ಶ್ರೀಧಾಮ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದಲ್ಲಿ ಬೆಳಿಗ್ಗೆ ೬ರಿಂದ ಗಣಪತಿ ಹೋಮ, ಭಜನಾ ಸಂಕೀರ್ತನೆ, ೭ರಿಂದ ಪಂಚಾಮೃತ ಅಭಿಷೇಕ, ಕಲ್ಪೋಕ್ತ ಲಕ್ಷ್ಮೀ ಪೂಜೆ, ವಾಯನ ದಾನ, ಶ್ರೀಗುರು ಪೂಜೆ, ಬಾಲಭೋಜನ, ಶ್ರೀ ನಾಗದೇವರಿಗೆ ಕ್ಷೀರಾಭಿಷೇಕ, ಗೋಮಾತಾ ಪೂಜೆ, ೧೧.೩೦ಕ್ಕೆ ಸಾಮೂಹಿಕ ಕುಂಕುಮಾರ್ಚನೆ, ಮಧ್ಯಾಹ್ನ ೧೨ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ೬.೩೦ರಿಂದ ಶ್ರೀ ಲಕ್ಷ್ಮೀಪೂಜೆ, ಮಹಾಪೂಜೆ