ಪುತ್ತೂರು: ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಹತ್ತನೇ ತರಗತಿಯ ಮಕ್ಕಳೊಂದಿಗೆ ನಡೆದ ’ ದೃಷ್ಟಿ’ ಶೈಕ್ಷಣಿಕ ಸಂವಾದ ಕಾರ್ಯಕ್ರಮ ನಡೆಯಿತು.
ಶಾಲಾ ಹಿರಿಯ ವಿದ್ಯಾರ್ಥಿಗಳಾದ ಚಿನ್ಮಯ ಮಜಿ ಹಾಗೂ ಶ್ರೀಶ ನಿಡ್ವಣ್ಣಾಯ ಎಸ್.ಎಸ್.ಎಲ್.ಸಿ ಯಲ್ಲೇ ಮುಂದಿನ ಶೈಕ್ಷಣಿಕ ಹಂತದ ಗುರಿ ನಿಶ್ಚಯದ ಅಗತ್ಯತೆ, ಪೂರ್ವ ತಯಾರಿಗಳ ಬಗ್ಗೆ ತಿಳಿಸುತ್ತಾ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸುತ್ತಾ ಮಾಧ್ಯಮ ಕಲಿಕೆಗೆ ಎಂದೂ ತೊಡಕಾಗುವುದಿಲ್ಲ, ಬದಲಾಗಿ ಮತ್ತೊಂದು ಭಾಷೆಯನ್ನು ಚೆನ್ನಾಗಿ ಅರ್ಥೈಸಿಕೊಳ್ಳಲು ಹಾಗೂ ಕಲಿಯಲು ಸಹಕಾರಿಯಾಗುತ್ತದೆ. ಅದರೊಂದಿಗೆ ನಿರಂತರ ಕಲಿಕೆಯಲ್ಲಿ ತೊಡಗಿಕೊಳ್ಳುವ ಅಗತ್ಯವಿದೆ ಎಂದರು.
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸಯನ್ಸ್ ಆಂಡ್ ರಿಸರ್ಚ್ ಗೆ ಆಯ್ಕೆಯಾದ ಶ್ರೀಶ ನಿಡ್ವಣ್ಣಾಯ ಹಾಗೂ AIML ವಿಭಾಗದಲ್ಲಿ PES ಬೆಂಗಳೂರಿಗೆ ಉನ್ನತ ಶಿಕ್ಷಣಕ್ಕಾಗಿ ತೆರಳಲಿರುವ ಚಿನ್ಮಯ್ ಮಜಿ ಇವರಿಗೆ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದದವರು ಶುಭ ಹಾರೈಸಿದರು.