ಕಾಣಿಯೂರು: ಶ್ರೀ ವರಮಹಾಲಕ್ಷ್ಮಿ ಪೂಜೆಯ ಆಮಂತ್ರಣ ಅನಾವರಣ

0

ಕಾಣಿಯೂರು: ಕಾಣಿಯೂರು ಕಣ್ವರ್ಷಿ ಮಹಿಳಾ ಮಂಡಲದ ವತಿಯಿಂದ ಆ.8ರಂದು ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂದಿರದಲ್ಲಿ ನಡೆಯಲಿರುವ 9ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆಯ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಮಹಿಳಾ ಮಂಡಲ ಗೌರವಾಧ್ಯಕ್ಷೆ ರೋಹಿಣಿ ಸುವರ್ಣ ಅಬೀರ, ಅಧ್ಯಕ್ಷೆ ಮಮತಾ ಲೋಕೇಶ್ ಅಗಳಿ, ಕಾರ್ಯದರ್ಶಿ ನಾಗವೇಣಿ ಬೆದ್ರಾಜೆ, ಮಹಿಳಾ ಮಂಡಲದ ಗೌರವ ಸಲಹೆಗಾರರಾದ ಪರಮೇಶ್ವರ ಅನಿಲ, ಸುರೇಶ್ ಓಡಬಾಯಿ, ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿ ಕೋಶಾಧಿಕಾರಿ ಕೀರ್ತಿ ಕುಮಾರ್ ಏಳುವೆ, ಬಾಲಕೃಷ್ಣ ಬಸ್ತಿ ಬೆದ್ರಾಜೆ, ಮಹಿಳಾ ಮಂಡಲದ ಸದಸ್ಯರಾದ ಜಯ ಮಾದೋಡಿ, ಸುಚಿತ್ರಾ ಕಟ್ಟತ್ತಾರು, ಸುಲೋಚನಾ ಅನಿಲ, ನೀಲಮ್ಮ ಕಾಣಿಯೂರು, ವಸಂತಿ ಬೆದ್ರಾಜೆ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here