ಪುತ್ತೂರು: ಬೆಟ್ಟಂಪಾಡಿ ನವೋದಯ ಪ್ರೌಢ ಶಾಲೆಯಲ್ಲಿ 1980-81ನೇ ಸಾಲಿನ ಎಸ್‌ಎಸ್‌ಎಲ್‌ಸಿ ತರಗತಿ ಸಹಪಾಠಿಗಳಿಂದ ಗುರುವಂದನಾ ಕಾರ್ಯಕ್ರಮ ಜು.13ರಂದು ಬೆಳಿಗ್ಗೆ ಇರ್ದೆ ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾ ಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ನವೋದಯ ಪ್ರೌಢ ಶಾಲೆಯ ನಿವೃತ್ತ ಕನ್ನಡ ಅಧ್ಯಾಪಕ ಡಾ.ಸದಾಶಿವ ಭಟ್ ಪಳ್ಳು ಮನೆ ಉದ್ಘಾಟಿಸಲಿದ್ದು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ಬಾಲ್ಯೊಟ್ಟು ಅಧ್ಯಕ್ಷತೆ ವಹಿಸಲಿದ್ದಾರೆ. ಗುರುವಂದನಾ ಕಾರ್ಯಕ್ರಮದಲ್ಲಿ ನವೋದಯ ಪ್ರೌಢ ಶಾಲೆಯ ನಿವೃತ್ತ ಕನ್ನಡ ಅಧ್ಯಾಪಕ ಡಾ.ಸದಾಶಿವ ಭಟ್ ಪಳ್ಳು ಮನೆ,ನಿವೃತ್ತ ಮುಖ್ಯಗುರು ಶರತ್ ಕುಮಾರ್ ರಾವ್, ನಿವೃತ್ತ ಮುಖ್ಯಗುರು ವೆಂಕಟರಮಣ ಭಟ್, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಸಂಜೀವ ರೈ ಎನ್, ನಿವೃತ್ತ ಮುಖ್ಯಗುರು ನಾರಾಯಣ ಭಟ್ ಹಾಗೂ ನಿವೃತ್ತ ಚಿತ್ರಕಲಾ ಶಿಕ್ಷಕ ಬಿ.ಗೋಪಾಲಕೃಷ್ಣ ರಾವ್‌ರವರುಗಳಿಗೆ ಗುರುವಂದನೆ ಹಾಗೇ ಕಛೇರಿ ಸಿಬ್ಬಂದಿಗಳಾದ ಶಂಕರನಾರಾಯಣ ಭಟ್, ಕಿಟ್ಟಣ್ಣ ರೈ ಮತ್ತು ರಾಮ ನಾಯ್ಕರವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಶಿಕ್ಷಣ ಪ್ರೇಮಿಗಳು, ಶಾಲಾ ಹಳೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿಭಾಗವಹಿಸುವಂತೆ ಎನ್‌ಎಚ್‌ಎಸ್‌ನ ಅಧ್ಯಕ್ಷ ರಾಮಯ್ಯ ರೈ, ಸಂಚಾಲಕ ದಿವಾಕರ ರೈ, ಕಾರ್ಯದರ್ಶಿ ಕೃಷ್ಣಪ್ರಸಾದ್ ಆಳ್ವ ಹಾಗೂ 1980-81ನೇ ಸಾಲಿನ ಎಸ್‌ಎಸ್‌ಎಲ್‌ಸಿ ಸಹಪಾಠಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.