ಪುತ್ತೂರು: ಕೆಯ್ಯೂರು ಸರಕಾರಿ ಪದವಿಪೂರ್ವ ಕಾಲೇಜಿನ ವಿಜ್ಞಾನ ಪ್ರಯೋಗಾಲಯಕ್ಕೆ ಕೋಟೆ ಫೌಂಡೇಶನ್ ವತಿಯಿಂದ ನೀಡಲಾದ ಒಂದು ಲಕ್ಷ ಇಪ್ಪತ್ತು ಸಾವಿರ ಮೌಲ್ಯದ ಪ್ರಯೋಗಾಲಯ ಪರಿಕರಗಳನ್ನು ಫೌಂಡೇಶನ್ ಕೋಆರ್ಡಿನೇಟರ್ ಪ್ರದೀಪ್ ಉಬರಡ್ಕ ಪ್ರಾಂಶುಪಾಲರಾದ ಹಸೀನಾ ಬಾನು ಎಸ್. ಇ. ಅವರಿಗೆ ಹಸ್ತಾಂತರಿಸಿದರು.
ಎಸ್.ಡಿ.ಎಂ.ಸಿ. ಕಾರ್ಯಾಧ್ಯಕ್ಷ ಎ. ಕೆ. ಜಯರಾಮ ರೈ, ಪ್ರಾಥಮಿಕ ವಿಭಾಗದ ಮುಖ್ಯಗುರು ಬಾಬು ಎಂ., ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಎಸ್.ಡಿ.ಎಂ.ಸಿ. ಸದಸ್ಯರು, ಪೋಷಕರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕ ಇಸ್ಮಾಯಿಲ್ ಪಿ. ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪನ್ಯಾಸಕಿ ಸಹನಾ ವಂದಿಸಿದರು