ಆಲಂಕಾರು: ಆಲಂಕಾರು ಶ್ರೀ ದುರ್ಗಾಂಬಾ ಪದವಿಪೂರ್ವ ವಿದ್ಯಾಲಯದಲ್ಲಿ 24ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆ.27ಬುಧವಾರ ಮತ್ತು ಆ.28 ಗುರುವಾರ ತನಕ ನಡೆಯಲಿದೆ. ಆ.27ರಂದು ಬುಧವಾರ ಬೆಳಗ್ಗೆ ಗಂಟೆ 8ರಿಂದ ಶ್ರೀ ಗಣೇಶ ಪ್ರತಿಷ್ಠೆ ನಂತರ ಶ್ರೀ ಹರಿ ಭಜನಾ ಮಂಡಳಿ ಗಾಣಂತಿ,ಶ್ರೀ ಪಾಂಡುರಂಗ ಭಜನಾ ಮಂಡಳಿ ಮನವಳಿಕೆ, ಶ್ರೀ ಆದಿಶಕ್ತಿ ಭಜನಾ ಮಂಡಳಿ ಶ್ರೀ ಕ್ಷೇತ್ರ ಶರವೂರು, ಭಜನೆ ನಡೆದು, ಗಣಹೋಮ ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದು ಮಧ್ಯಾಹ್ನ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ಹಳೇನೆರೆಂಕಿ, ಶ್ರೀ ಮಹಾಮಾಯ ಭಜನಾ ಮಂಡಳಿ ಗಡಿಯಾರ್ನಡ್ಕ ರವರಿಂದ ಭಜನೆ ನಡೆದು ಶ್ರೀ ದುರ್ಗಾಂಬಾ ಪದವಿ ಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ,ವಿದುಷಿ ಪ್ರಮೀಳಾ ಲೋಕೇಶ್ ರವರ ಶಿಷ್ಯರಿಂದ ಭರತನಾಟ್ಯ ನಡೆದು ಸಭಾಕಾರ್ಯಕ್ರಮ ನಡೆಯಲಿದೆ.
ಸಭಾಧ್ಯಕ್ಷತೆಯನ್ನು ಶ್ರೀ ದುರ್ಗಾಂಬಾ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ದಯಾನಂದ ರೈ ಮನವಳಿಕೆ ವಹಿಸಲಿದ್ದು, ಬೆಳ್ತಂಗಡಿ ಧಾರ್ಮಿಕ ಮುಖಂಡರಾದ ಕಿರಣ್ ಚಂದ್ರ ಡಿ ಪುಷ್ಪಗಿರಿ ಉರುವಾಲು, ಮುಖ್ಯ ಅತಿಥಿಗಳಾಗಿ ಆಲಂಕಾರು ಮಾನಸ ಕ್ಲಿನಿಕ್ ಡಾ.ಹರಿದಾಸ್ ಭಟ್, ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ಉತ್ಸವ ಸಮಿತಿಯ ಅಧ್ಯಕ್ಷರಾದ ಲಕ್ಷ್ಮೀ ನಾರಾಯಣ ಪ್ರಭು, ವ್ಯವಸ್ಥಾಪನ ಸಮಿತಿಯ ಸದಸ್ಯರಾದ ರಾಧಾಕೃಷ್ಣ ರೈ ಪರಾರಿಗುತ್ತು ಭಾಗವಹಿಸಲಿದ್ದಾರೆ. ನಂತರ ವಿದ್ವಾನ್ ರಾಘವೇಂದ್ರ ಪ್ರಸಾದ್ ರವರ ಶಿಷ್ಯರಿಂದ ಭರತನಾಟ್ಯ ನಂತರ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.
ಆ.28ರಂದು ಗುರುವಾರ ಬೆಳಗ್ಗೆ 5:00 ರಿಂದ 6;30 ರ ತನಕ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಯೋಗ ಬಂಧುಗಳಿಂದ ಗಣಪತಿ ನಮಸ್ಕಾರ ನಡೆದು 8:೦೦ರಿಂದ ಶ್ರೀ ಗಣಪತಿ ಹೋಮ ನಂತರ ಮಾತೃಶೀ ಭಜನಾ ಮಂಡಳಿಕೊಂಡಾಡಿ ಕೊಪ್ಪ, ಶ್ರೀ ದುರ್ಗಾಂಬಾ ಪದವಿಪೂರ್ವ ಆಲಂಕಾರಿನ ವಿದ್ಯಾಥಿಗಳಿಂದ, ಮಾತೃಶ್ರೀ ಭಜನಾ ಮಂಡಳಿ ಕೇವಳ, ಕುಂತೂರು, ಶ್ರೀ ಶಾರದಾಂಬಾ ಭಜನಾ ಮಂಡಳಿ ಕುಂತೂರು ರವರಿಂದ ಭಜನೆ ನಡೆದು ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದು ಶ್ರೀ ಶಾರದಾ ಮಹಿಳಾ ಭಜನಾ ಮಂಡಳಿ ಕುಂತೂರು ಭಜನೆ ನಡೆದು, ಮಹಾಪೂಜೆಯಾಗಿ ಸಂಜೆ ಶ್ರೀ ಗಣೇಶ ವಿಗ್ರಹದ ಶೋಭಾಯಾತ್ರೆ ಆಲಂಕಾರಿನಿಂದ ಕುಂತೂರುವರೆಗೆ ಶ್ರೀ ದುರ್ಗಾಂಬಾ ಪದವಿ ಪೂರ್ವ ಕಾಲೇಜಿನ ಮಕ್ಕಳ ಕುಣಿತ ಭಜನೆಯೊಂದಿಗೆ ಮೆರವಣಿಗೆ ನಡೆದು ಕುಂತೂರಿನಲ್ಲಿ ಶ್ರೀ ಗಣೇಶ ವಿಗ್ರಹದ ಜಲಸ್ತಂಭನ ನಡೆಯಲಿದೆ.
ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತಾಧಿಗಳು ಅಗಮಿಸಿ ತನು,ಮನ,ಧನಗಳಿಂದ ಸಹಕರಿಸಿ ಮಹಾಗಣಪತಿ ದೇವರ ಕೃಪೆಗೆ ಪಾತ್ರರಾಗುವಂತೆ ದುರ್ಗಾಂಬಾ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ದಯಾನಂದ ರೈ ಮನವಳಿಕೆಗುತ್ತು, ಕಾರ್ಯದರ್ಶಿ ಪಿ. ಈಶ್ವರ ಗೌಡ ಪಜ್ಜಡ್ಕ, ಅಡಳಿತಾಧಿಕಾರಿ ಶ್ರೀಪತಿರಾವ್ ಹೆಚ್ಚ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.