ಪುತ್ತೂರು : ಪುಣ್ಚಪ್ಪಾಡಿ ಗ್ರಾಮದ ನೇರೋಳ್ತಡ್ಕ ವಿನಾಯಕನಗರದಲ್ಲಿ ಶ್ರೀ ಗೌರಿ ಗಣೇಶ ಉತ್ಸವ ಸಮಿತಿಯ ವತಿಯಿಂದ 37 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಹಾಗೂ ಮೊಸರುಕುಡಿಕೆ ಉತ್ಸವ ಆ.27 ರಂದು ರಮೇಶ್ ಪುದ್ದುಣ್ಣಾಯ ರವರ ಪೌರೋಹಿತ್ಯದೊಂದಿಗೆ ಜರಗಲಿರುವುದು ಬೆಳಿಗ್ಗೆ ಧ್ವಜಾರೋಹಣವನ್ನು ಕರ್ನಾಟಕ ಗ್ರಾಮೀಣ ಬ್ಯಾಂಕ್ ಹಾವೇರಿಯ ಶಾಖೆಯ ಸೀನಿಯರ್ ಮ್ಯಾನೇಜರ್ ಪ್ರದೀಪ್ ಕುಮಾರ್ ಜಿ.ನಾಯ್ಕರವರು ನೇರವೇರಿಸಲಿದ್ದಾರೆ.
ಬಳಿಕ ಶ್ರೀ ಗಣಪತಿ ದೇವರ ಮೂರ್ತಿ ಪ್ರತಿಷ್ಠಾಪನೆ, ಭಜನಾ ಕಾರ್ಯಕ್ರಮ, ಗಣಹೋಮ, ಕ್ರೀಡಾಕೂಟ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನೆ (ಪುಣ್ಣಪ್ಪಾಡಿ ಗ್ರಾಮದ ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ) ಹಾಗೂ ಬಹುಮಾನ ವಿತರಣೆ ನಡೆಯಲಿದೆ ಮಧ್ಯಾಹ್ನ: ಅನ್ನಸಂತರ್ಪಣೆ ಸಂಜೆ ಶ್ರೀ ಗಣಪತಿ ದೇವರ ಮೂರ್ತಿ ವಿಸರ್ಜನಾ ಶೋಭಾಯಾತ್ರೆ ನಡೆಯಲಿದೆ ಎಂದು ಶ್ರೀ ಗೌರಿ ಗಣೇಶ ಸೇವಾ ಟ್ರಸ್ಟ್ ನ ಗೌರವಾಧ್ಯಕ್ಷ ಗಿರಿಶಂಕರ್ ಸುಲಾಯ ದೇವಸ್ಯ, ಅಧ್ಯಕ್ಷ ಮಹೇಶ್ ಕೆ.ಸವಣೂರು ಹಾಗೂ ಕಾರ್ಯದರ್ಶಿ ಪ್ರಮೋದ್ ಬೊಳ್ಳಾಜೆ ತಿಳಿಸಿದ್ದಾರೆ.